)
Motherhood without Marriage: ಜನಪ್ರಿಯ ಭೋಜ್ಪುರಿ ಗಾಯಕಿ ದೇವಿ ಅವರು ಮದುವೆಯಾಗದೆ ಮಗುವನ್ನು ಪಡೆದಿದ್ದಾರೆ. ಮಗುವಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿ ‘ಮೇರಾ ಬಾಬು ಹೈ’ ಎಂಬ ಲವ್ಲಿ ಶೀರ್ಷಿಕೆ ನೀಡಿದ್ದಾರೆ. ಗಾಯಕಿ ದೇವಿ ಅವರು ಜರ್ಮನ್ ವೀರ್ಯ ಬ್ಯಾಂಕಿನಿಂದ ವೀರ್ಯವನ್ನು ಪಡೆದುಕೊಂಡು ಗರ್ಭವತಿಯಾಗಿದ್ದರು. ಇದೇ ತಿಂಗಳ 9ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿವಾಹವಾಗದೆ ಮಗುವಿಗೆ ಜನ್ಮ ನೀಡಿದ ದೇವಿ ಅವರ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ.
ಸಂಗೀತವೇ ತನ್ನ ಪ್ರಪಂಚ ಎಂದು ತೊಡಗಿಸಿಕೊಂಡಿದ್ದ ದೇವಿ ಅವರು ವಿವಾಹ ಮಾಡಿಕೊಂಡಿಲ್ಲ. ಆದರೂ ಒಬ್ಬ ಹೆಣ್ಣಾಗಿ ಅವರಿಗೆ ಮಗು ಬೇಕು ಎನಿಸಿದೆ. ಅದಕ್ಕಾಗಿ ಅವರು ಏಳು ವರ್ಷಗಳ ಹಿಂದೆ IVF (ಇನ್ ವಿಟ್ರೋ ಫರ್ಟಿಲೈಸೇಶನ್) ಮೂಲಕ ಮಗು ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಅದರಲ್ಲಿ ಅವರು ಯಶಸ್ವಿಯಾಗಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ಫಲ ಸಿಕ್ಕಿದೆ. ಈಗ ಅವರು ತಮ್ಮ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಗಾಯಕಿ ದೇವಿ ಅವರು ಸಾಂಪ್ರದಾಯಿಕ ಭೋಜ್ಪುರಿ ಸಮುದಾಯದವರು. ಶುದ್ಧ ಸಂಗೀತವನ್ನೇ ಹಾಡುವೆ ಎಂಬ ಗಟ್ಟಿ ನಿರ್ಧಾರ ಮಾಡಿದವರು. ಈಗ ವೈಯಕ್ತಿಕವಾಗಿ ಕೂಡ ಗಂಡ ಇಲ್ಲದಿದ್ದರೂ ಮಗುವನ್ನು ಪಡೆದು ಜೀವನ ಸಾಗಿಸುವೆ ಎಂಬ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ದೇವಿ ಅವರ ನಿರ್ಧಾರಕ್ಕೆ ಕೆಲ ಸಂಪ್ರದಾಯವಾದಿಗಳು ವಿರೋಧ ಮಾಡುತ್ತಿದ್ದಾರಾದರೂ ಹೆಚ್ಚಿನ ಸಂಖ್ಯೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
IVF ವಿಧಾನದ ಬಗ್ಗೆ ಮಕ್ಕಳನ್ನು ಹೊಂದಲು ಸಾಧ್ಯವಾಗದ ದಂಪತಿಗಳ ವೀರ್ಯ ಮತ್ತು ಅಂಡಾಣುವನ್ನು ಪ್ರಯೋಗಾಲಯದಲ್ಲಿ ಫಲವತ್ತಾಗಿಸಲಾಗುತ್ತದೆ. ಅದು ಭ್ರೂಣಾವಸ್ಥೆಗೆ ಬಂದ ಮೇಲೆ ಅದನ್ನು ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಇದು, ಮಕ್ಕಳನ್ನು ಪಡೆಯಲಾರದವರು, ಅವಿವಾಹಿತ, ವಿಚ್ಛೇದಿತ ಮತ್ತು ವಿಧವೆಯರು ತಾಯ್ತನದಿಂದ ವಂಚಿತರಾಗಬಾರದೆಂದು ಕಂಡುಕೊಂಡ ವೈಜ್ಞಾನಿಕ ವಿಧಾನವಾಗಿದೆ. ಇದಕ್ಕೆ ಕಾನೂನಿನ ಮಾನ್ಯತೆಯೂ ಇದೆ.
IVF ಬಗೆಗಿನ ಕೆಲವು ಮಾಹಿತಿಗಳು:
IVF ವಿಧಾನದ ಮೂಲಕದಿಂದ ಮೊದಲ ಪ್ರಯತ್ನದಲ್ಲೇ ಮಗುವನ್ನು ಪಡೆಯಬಹುದು ಎಂಬುದು ತಪ್ಪು ಕಲ್ಪನೆ.
ಕೆಲವೊಮ್ಮೆ ಮತ್ತೆ ಮತ್ತೆ ಪ್ರಯತ್ನ ಮಾಡಬೇಕಾಗುತ್ತದೆ. ತಜ್ಞ ವೈದ್ಯರ ಸಲಹೆ ಪಡೆದುಕೊಂಡೇ IVF ವಿಧಾನದ ಮೂಲಕ ಮಗುವನ್ನು ಪಡೆಯುವ ಸಾಹಸಕ್ಕೆ ಮುಂದಾಗಬೇಕು. IVF ಮೂಲಕ ಜನಿಸಿದ ಮಕ್ಕಳು ನೈಸರ್ಗಿಕವಾಗಿ ಹುಟ್ಟಿದ ಮಕ್ಕಳಷ್ಟೇ ಆರೋಗ್ಯಕರವಾಗಿರುತ್ತವೆ.