VIDEO: COVID-19 ಸಂಕಟ ಕೊನೆಗೊಂಡ ಬಳಿಕ ಸೋನಾಕ್ಷಿ ಸಿನ್ಹಾ ಮಾಡೋ ಮೊದಲ ಕೆಲಸ ಇದು

ಇನ್ಸ್ಟಾಗ್ರಾಮ್ನಲ್ಲಿ 2 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿರುವ ಸೋನಾಕ್ಷಿ ಸಿನ್ಹಾ (Sonakshi Sinha) ಅವರ ಆಶಯದ ಬಗ್ಗೆ ಮಾತನಾಡಿದ್ದಾರೆ.

Last Updated : Apr 6, 2020, 12:30 PM IST
VIDEO: COVID-19 ಸಂಕಟ ಕೊನೆಗೊಂಡ ಬಳಿಕ ಸೋನಾಕ್ಷಿ ಸಿನ್ಹಾ ಮಾಡೋ ಮೊದಲ ಕೆಲಸ ಇದು title=
File Image

ನವದೆಹಲಿ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಜಗತ್ತನ್ನೇ ನಡುಗಿಸುತ್ತಿರುವ ಮಹಾಮಾರಿ ಕರೋನವೈರಸ್ ಬಿಕ್ಕಟ್ಟು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಅದೇ ಸಮಯದಲ್ಲಿ, COVID-19 ಸಂಕಟ ಕೊನೆಗೊಂಡ ಬಳಿಕ ಬಳಿಕ ತಾವು ಮೊದಲು ಸಮುದ್ರದಲ್ಲಿ ಈಜಾಡುವ ಇಚ್ಛೆ ಹೊಂದಿರುವುದಾಗಿ ಸೋನಾಕ್ಷಿ ತಿಳಿಸಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ 2 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿರುವ ಸೋನಾಕ್ಷಿ ಸಿನ್ಹಾ (Sonakshi Sinha) ಅವರ ಆಶಯದ ಬಗ್ಗೆ ಮಾತನಾಡಿದ್ದು, ವಿಡಿಯೋ ಒಂದನ್ನು ಸಹ ಹಂಚಿಕೊಂಡಿದ್ದಾರೆ.

ವೀಡಿಯೊ ವೈರಲ್ : 
"ಸಾಮಾಜಿಕ ಮಾಧ್ಯಮದಿಂದ ಎಂಟು ದಿನಗಳ ಅಂತರದ ನಂತರ, ನಾನು 1.9 ಮಿಲಿಯನ್ ಫಾಲೋವರ್ಸ್ ಪಡೆದ ಸಂತೋಷದಿಂದ ಇಲ್ಲಿಗೆ ಮರಳಿದ್ದೇನೆ ಮತ್ತು ಎಲ್ಲರಿಗೂ ಧನ್ಯವಾದಗಳು, ಈ ವೀಡಿಯೊ ಹಳೆಯದು. ಆದರೆ ಇದೆಲ್ಲ ಮುಗಿದ ನಂತರ, ನಾನು ಮತ್ತೆ ಅದನ್ನೇ ಮಾಡಲು ಬಯಸುತ್ತೇನೆ" ಎಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವೀಡಿಯೊದೊಂದಿಗೆ ಸೋನಾಕ್ಷಿ ಬರೆದಿದ್ದಾರೆ.
 

Trending News