ನವದೆಹಲಿ: ಬಾಲಿವುಡ್ ತಾರೆಯರ ವೈಯಕ್ತಿಕ ಜೀವನದ ವಿಷಯಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅತಿ ವಿರಳ. ಅದಕ್ಕೆ ಉತ್ತಮ ಉದಾಹರಣೆ ಎಂದರ ವಿರಾಟ್-ಅನುಷ್ಕಾ ಮತ್ತು ದೀಪಿಕಾ-ರಣವೀರ್ ಅವರ ಮದುವೆ. ತಮ್ಮ ಮದುವೆಯನ್ನು ಖಾಸಗಿಯಾಗಿಡಲು ಈ ಜೋಡಿ ಎಷ್ಟೆಲ್ಲಾ ಪ್ರಯತ್ನಿಸಿತು. ಅದರಲ್ಲೂ ವಿರಾಟ್-ಅನುಷ್ಕಾ ಇಬ್ಬರೂ ತಮ್ಮ ವಿವಾಹವಾದ ಬಳಿಕವೇ ಆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ತಾರೆಯರು ಮಾಧ್ಯಮದಿಂದ ದೂರ ಸರಿದು ವಿವಾಹವಾದರು. ಆದರೆ ಸೋಶಿಯಲ್ ಮೀಡಿಯಾದ ಈ ಯುಗದಲ್ಲಿ ಅವರ ಮದುವೆಯ ಹಲವು ಫೋಟೋಗಳು ಸಾಕಷ್ಟು ವೈರಲ್ ಆದವು.
ಆದರೆ ಸೋಶಿಯಲ್ ಮೀಡಿಯಾ ಇನ್ನೂ ಅಷ್ಟೊಂದು ಪ್ರಸಿದ್ದಿ ಕಂಡಿರದ ಯುಗದಲ್ಲಿ ವಿವಾಹವಾಗಿದ್ದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ವಿವಾಹದ ಬಗ್ಗೆ ಅವರ ಅಭಿಮಾನಿಗಳಲ್ಲಿ ಇನ್ನೂ ಹೆಚ್ಚಿನ ಸಂಭ್ರಮವಿದೆ.
ವಾಸ್ತವವಾಗಿ, ಬಚ್ಚನ್ ಕುಟುಂಬದ ಮಗನ ಈ ವಿವಾಹವು ತುಂಬಾ ಖಾಸಗಿಯಾಗಿತ್ತು ಮತ್ತು ಕೆಲವೇ ಕೆಲವು ಬಾಲಿವುಡ್ ತಾರೆಯರನ್ನು ಆಹ್ವಾನಿಸಲಾಯಿತು. ಆದರೆ ಈಗ ಈ ವಿವಾಹದ ಕೆಲವು ಕಾಣದ ಚಿತ್ರಗಳು(Unseen Photos) ಬೆಳಕಿಗೆ ಬಂದಿದ್ದು, ಅವು ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿವೆ.
ಫ್ಯಾಷನ್ ವಿನ್ಯಾಸಕರಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರು ಅಭಿಷೇಕ್ ಮತ್ತು ಐಶ್ವರ್ಯಾ ಅವರ ವಿವಾಹದ ಕೆಲವು ಕಾಣದ (Unseen Photos) ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರು ಬಚ್ಚನ್ ಕುಟುಂಬದ ನೆಚ್ಚಿನ ವಿನ್ಯಾಸಕರು ಮತ್ತು ಅವರು ತಮ್ಮ ಡಿಸೈನರ್ ಬಟ್ಟೆಯಲ್ಲಿ ಹೆಚ್ಚಾಗಿ ಕಾಣುತ್ತಾರೆ.
ಇತ್ತೀಚೆಗೆ, ಈ ಡಿಸೈನರ್ ದಂಪತಿಗಳು ತಮ್ಮ 33 ವರ್ಷಗಳನ್ನು ಪೂರೈಸಿದ್ದಾರೆ. ಈ ಸಮಯದಲ್ಲಿ, ಅಭಿಷೇಕ್-ಐಶ್ವರ್ಯ ಅವರ ವಿವಾಹದ ಕೆಲವು ಅತಿ ವಿರಳ ಫೋಟೋಗಳನ್ನೂ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇವುಗಳಲ್ಲಿ, ಅಭಿಷೇಕ್ ಮತ್ತು ಐಶ್ವರ್ಯಾ ಅವರನ್ನು ಚಿತ್ರದಲ್ಲಿ ಕಾಣಬಹುದು.
ಮತ್ತೊಂದು ಚಿತ್ರದಲ್ಲಿ, ಅಮಿತಾಬ್ ಬಚ್ಚನ್ ಅವರ ಪತ್ನಿ ಮತ್ತು ಮಗಳು ಶ್ವೇತಾ ಬಚ್ಚನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಶ್ವೇತಾ ಬಚ್ಚನ್ ನಂದಾ ಅವರ ಪುತ್ರಿ ನವ್ಯಾ ನವೆಲಿ ನಂದಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಐಶ್ವರ್ಯಾ ಮತ್ತು ಅಭಿಷೇಕ್ 20 ಏಪ್ರಿಲ್ 2007 ರಂದು ವಿವಾಹವಾದರು. ಬಚ್ಚನ್ ಮಕ್ಕಳ ಆತ್ಮೀಯ ಸ್ನೇಹಿತರು ಮತ್ತು ಕುಟುಂಬಕ್ಕೆ ಹತ್ತಿರವಿರುವ ಜನರು ಮಾತ್ರ ಈ ಮದುವೆಗೆ ಹಾಜರಾಗಿದ್ದರು. 'ಗುರು', 'ರಾವಣ', 'ಸರ್ಕಾರ್ 2' ಚಿತ್ರಗಳಲ್ಲಿ ಈ ಇಬ್ಬರು ತಾರೆಯರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಜೋಡಿಯ ವಿವಾಹದ ಬಟ್ಟೆಗಳನ್ನು ತಯಾರಿಸಲು ಅವರಿಗೆ ಮೂರು ತಿಂಗಳು ಬೇಕಾಯಿತು ಎಂದು ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಬಹಿರಂಗಪಡಿಸಿದ್ದಾರೆ.