ನನ್ನ ತಂದೆ ಯಾರು, ಹೇಗಿದ್ದಾರೋ ಅನ್ನೋ ಕಲ್ಪನೆಯೂ ಇರಲಿಲ್ಲ.. ಮಾತನಾಡುತ್ತಾ ಹೀರೋಯಿನ್‌ ಭಾವುಕ?

ಹಿರಿಯ ನಟಿ ಲಕ್ಷ್ಮಿ ಅವರು ಆಗಿನ ಸಮಯದಲ್ಲೇ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿ ಅಭಿಮಾನಿಗಳನ್ನು ಸಂಪಾದಿಸಿದ್ದರು. ಇವರ ಮಗಳೇ ಐಶ್ವರ್ಯ ಭಾಸ್ಕರನ್‌.  

Written by - Bhimappa | Last Updated : Dec 12, 2025, 02:24 PM IST
  • ನಾನು ಈ ವಯಸ್ಸಿಗೆ ಬರುವವರೆಗೂ ನನ್ನ ತಂದೆ ಯಾರೆಂದು ಗೊತ್ತಿರಲಿಲ್ಲ
  • ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದ ಹೀರೋಯಿನ್‌
  • ಡಾಕ್ಟರ್‌ ರಾಜ್‌ ಕುಮಾರ್‌, ರಜನಿಕಾಂತ್‌ ಜೊತೆಯು ನಟಿಸಿರುವ ನಟಿ
ನನ್ನ ತಂದೆ ಯಾರು, ಹೇಗಿದ್ದಾರೋ ಅನ್ನೋ ಕಲ್ಪನೆಯೂ ಇರಲಿಲ್ಲ.. ಮಾತನಾಡುತ್ತಾ ಹೀರೋಯಿನ್‌ ಭಾವುಕ?

ಭಾರತದ ಸಿನಿ ಕ್ಷೇತ್ರವು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿದ್ದರೂ ಈಗ ಪ್ಯಾನ್‌ ಇಂಡಿಯಾ ಸಿನಿಮಾಗಳು ಬಂದ ಮೇಲೆ ಎಲ್ಲ ಒಂದೇ ಎನ್ನುವ ಭಾವನೆ ಮೂಡಿದೆ. ಸಿನಿಮಾ ಕ್ಷೇತ್ರದಲ್ಲಿ ಎಷ್ಟೋ ನಟ, ನಟಿಯರ ಮಕ್ಕಳು ಬಂದು ಸಾಧನೆ ಮಾಡುತ್ತಿದ್ದಾರೆ. ತಮ್ಮ ಪೋಷಕರಂತೆ ಮಕ್ಕಳು ಇಂಡಸ್ಟ್ರಿ ಕಡೆಗೆ ಈಗಲೂ ಬರುತ್ತಿದ್ದಾರೆ. ಅದೇ ರೀತಿ ನಾವು ಹೇಳುತ್ತಿರುವ ನಟಿ ಬದುಕು ಕೂಡ ಅದರಂತೆ ಇದೆ. ಇವರ ತಾಯಿ ಸ್ಟಾರ್‌ ನಟಿ, ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿ ಎಲ್ಲರನ್ನೂ ಮೆಚ್ಚಿಸಿದ್ದರು.

Add Zee News as a Preferred Source

ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಎಷ್ಟೋ ಸಿನಿಮಾಗಳಲ್ಲಿ ಹಿರಿಯ ನಟಿ ಲಕ್ಷ್ಮಿ ಅವರು ಅಭಿನಯಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾರತದ ಚಿತ್ರರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಜೊತೆ ನರಸಿಂಹ, ಮುರಾರಿ ಹಾಗೂ  ಹರಿಕೃಷ್ಣ ನಟನೆಯ ಲಾಹಿರಿ ಲಾಹಿರಿ ಲಾಹಿರಿ, ಮಿಧುನಂ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿ ಪ್ರೇಕ್ಷಕರನ್ನ ರಂಜಿಸಿದ್ದರು. ಲಕ್ಷ್ಮಿ ಅವರು ಕನ್ನಡದಲ್ಲಿ ಲೆಕ್ಕಕ್ಕೆ ಇಲ್ಲದಷ್ಟು ಸಿನಿಮಾಗಳನ್ನು ಮಾಡಿದ್ದಾರೆ.‌ ಡಾ. ರಾಜ್‌ ಕುಮಾರ್ ಅವರ ಜೊತೆ ನಟಿಸಿದ ಸಿನಿಮಾಗಳೆಲ್ಲಾ ಅಂದು ಸೂಪರ್‌ ಹಿಟ್‌ ಆಗಿದ್ದವು. 

ಅದೇ ರೀತಿ ಅವರ ಮಗಳು ಐಶ್ವರ್ಯ ಭಾಸ್ಕರನ್‌ ಕೂಡ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಹೀರೋಯಿನ್‌ ಆಗಿ ನಟಿಸಿದ್ದಾರೆ. ಈಗ ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರು ಒಮ್ಮೆ ಸಂದರ್ಶನವೊಂದರಲ್ಲಿ ಮಾತನಾಡುವಾಗ, ನಾನು 18-19 ವರ್ಷದವಳು ಅಗಿದ್ದಾಗ ನಾನು ನನ್ನ ತಂದೆಯನ್ನು ಭೇಟಿಯಾದೆ. ಚಿಕ್ಕವಳಿದ್ದಾಗ ನನ್ನ ತಂದೆ ಹೇಗಿದ್ದರು, ಅವರ ಊಹೆ ಕೂಡ ಇರಲ್ಲಿಲ್ಲ ಅಂತೆ.    ಕನಿಷ್ಠ ತಂದೆಯ ಫೋಟೋ ಕೂಡ ಇರಲಿಲ್ಲ ಎಂದು ನೆನಪು ಮಾಡಿಕೊಂಡಿದ್ದರು. 

ಜನನ ಪ್ರಮಾಣ ಪತ್ರದಲ್ಲಿ ತಂದೆ ಹೆಸರು ಇದ್ದರೂ ಅವರು ಯಾರು ಎಂದು ತಿಳಿದುಕೊಳ್ಳಬೇಕು ಎನ್ನುವ ಬಯಕೆ ಐಶ್ವರ್ಯರಿಗೆ ಇತ್ತಂತೆ. ತಮ್ಮ ತಂದೆ ಬಗ್ಗೆ ಪರಿಚಿತರನ್ನು ವಿಚಾರಿಸಿದಾಗ ಅವರು ಯಾರೆಂದು ಹೇಳಿರಲಿಲ್ವಂತೆ. ಆದರೆ ಇದು ಆದ ಮೇಲೆ ಎಷ್ಟೋ ವರ್ಷಗಳ ಬಳಿಕ ತನ್ನ ತಂದೆ ಕೊಯಮತ್ತೂರಿನಲ್ಲಿ ಇನ್ಶುರೆನ್ಸ್‌ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದರು. ಐಶ್ವರ್ಯ ಅವರು ಸಂದರ್ಶನದಲ್ಲಿ ಮಾತನಾಡಿದ್ದನ್ನ ತಂದೆಯ ಸಹೋದ್ಯೋಗಿ ನೋಡಿ ಐಶ್ವರ್ಯ ಅವರನ್ನು ಸಂಪರ್ಕಿಸಿದ್ದರು. 

ಇದನ್ನೂ ಓದಿ: ಮತ್ತೆ ವೈಭವ್‌ ಸೂರ್ಯವಂಶಿ ಸಿಡಿಲಬ್ಬರ.. 14 ಸಿಕ್ಸರ್‌ ಚಚ್ಚಿರೋ ಯಂಗ್‌ ಓಪನರ್‌, ದ್ವಿಶತಕ ಮಿಸ್‌!

ನಿಮ್ಮ ತಂದೆ ಬಳಿಯೇ ನಾನು ಕೆಲಸ ಮಾಡುತ್ತಿರುವುದು. ಅವರು ತುಂಬಾ ಒಳ್ಳೆಯ ವ್ಯಕ್ತಿ. ಇದು ಅವರ ನಂಬರ್‌, ಫೋನ್‌ ಮಾಡಿ ಮಾತಾಡಿ. ನನ್ನಿಂದ ಮಗಳು, ತಂದೆ ಒಂದಾದರೆ ತುಂಬಾ ಖುಷಿ ಪಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದರು. ಅದೇ ರೀತಿ ಐಶ್ವರ್ಯ ಭಾಸ್ಕರ್‌ ಅವರು ತಮ್ಮ ತಂದೆ ಜೊತೆ ಮಾತನಾಡಿ ಬಳಿಕ ಭೇಟಿ ಮಾಡಿದ್ದರು. ಆಗ ಐಶ್ವರ್ಯ ಹೆಸರು ಶಾಂತಮಿನಾ ಎನ್ನುವುದು ಮೊದಲ ಹೆಸರು ಎಂದು ಗೊತ್ತಾಗಿದೆ.              

ಇದನ್ನೂ ಓದಿ: IPL 2026 ಮಿನಿ ಆಕ್ಷನ್‌ಗೆ ಶ್ರೇಯಸ್‌ ಅಯ್ಯರ್‌ ಎಂಟ್ರಿ.. ಅಬುಧಾಬಿಗೆ ಪಂಜಾಬ್‌ ಕಿಂಗ್ಸ್‌ ಕ್ಯಾಪ್ಟನ್‌ ಹೋಗ್ತಾರಾ..?
 

About the Author

Bhimappa

ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

...Read More

Trending News