)
Aishwarya rai : ಜಯಾ ಮತ್ತು ಅಮಿತಾಬ್ ತಮ್ಮ 'ಸೊಸೆ'ಗೆ ವಜ್ರದ ಮಂಗಳಸೂತ್ರವನ್ನು ಉಡುಗೊರೆಯಾಗಿ ನೀಡಿದರು. ಆ ಮಂಗಳಸೂತ್ರದ ಬೆಲೆ ಎಷ್ಟು? ಅಂತ ನೀವು ಕೇಳಿದರೆ ಆಶ್ಚರ್ಯವಾಗುತ್ತದೆ. ಆ ಸಮಯದಲ್ಲಿ ಮಂಗಳಸೂತ್ರದ ಬೆಲೆ ಸುಮಾರು 45 ಲಕ್ಷ ರೂ.ಗಳಷ್ಟಿತ್ತು ಎಂದು ಹೇಳಲಾಗುತ್ತದೆ.
ಮದುವೆಯಾದ ನಂತರ, ಐಶ್ವರ್ಯಾ ಹಲವಾರು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ಮಂಗಳಸೂತ್ರ ಧರಿಸಿ ಕಾಣಿಸಿಕೊಂಡಿದ್ದರು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಅವರು ಅದನ್ನು ಧರಿಸುವುದನ್ನು ಕಂಡಿಲ್ಲ. ಹೆರಿಗೆಯ ನಂತರ ಆಭರಣಗಳನ್ನು ಧರಿಸುವುದಿಲ್ಲ ಎಂದು ಐಶ್ವರ್ಯಾ ಒಮ್ಮೆ ಹೇಳಿದ್ದರು.
ಅಭಿಷೇಕ್ ಮತ್ತು ಐಶ್ವರ್ಯಾ ಡಿವೋರ್ಸ್ ಸುದ್ದಿ ವದಂತಿಗಳು ಉತ್ತುಂಗದಲ್ಲಿದ್ದಾಗ, ನಟಿ ತಮ್ಮ ಪುತ್ರಿ ಆರಾಧ್ಯ ಜೊತೆ ಪ್ಯಾರಿಸ್ ಫ್ಯಾಷನ್ ವೀಕ್ಗೆ ಬಂದರು. ಅಲ್ಲಿ ಅವರು ಕುತ್ತಿಗೆಯಲ್ಲಿ ರತ್ನಗಳಿಂದ ತುಂಬಿದ ಮಂಗಳಸೂತ್ರವನ್ನು ನೋಡಿದಾಗ, ಅಭಿಮಾನಿಗಳು ನಿಟ್ಟುಸಿರು ಬಿಟ್ಟರು.
ಅಲ್ಲದೆ, ಅತ್ತೆ-ಮಾವ ಕೊಟ್ಟ ಮಂಗಳಸೂತ್ರವನ್ನು ನೋಡಿ ಐಶ್ ಮತ್ತು ಅಭಿ ನಡುವೆ ಯಾವುದೇ ಜಗಳವಿಲ್ಲ ಅಂತ ಖಚಿತ ಪಡಿಸಿಕೊಂಡರು. ವಿಚಿತ್ರ ಅಂದ್ರೆ ಕಳೆದ ಕೆಲವು ತಿಂಗಳುಗಳಿಂದ ಈ ಜೋಡಿಯ ವಿಚ್ಛೇದನ ಸುದ್ದಿ ಚರ್ಚೆಯಲ್ಲಿದ್ದರೂ ಸಹ ಈ ಕುರಿತು ಒಂದೇ ಒಂದು ಸ್ಪಷ್ಟನೆಯನ್ನು ಈ ಜೋಡಿ ನೀಡಿಲ್ಲ.