)
Aishwarya Rai on Salman Khan : ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮೊದಲು, ಐಶ್ವರ್ಯಾ ರೈ ಅವರ ವೈಯಕ್ತಿಕ ಜೀವನವು ತೀವ್ರ ಮಾಧ್ಯಮದ ಗಮನ ಸೆಳೆಯಿತು. ವಿಶೇಷವಾಗಿ "ಹಮ್ ದಿಲ್ ದೇ ಚುಕೆ ಸನಮ್" (1999) ಚಿತ್ರೀಕರಣದ ಸಮಯದಲ್ಲಿ ಐಶು ಹೆಸರು ಸಲ್ಮಾನ್ ಖಾನ್ ಅವರೊಂದಿಗಿನ ಹೆಚ್ಚು ಕೇಳಿ ಬಂತು.
ಹೌದು.. 2002 ರವರೆಗೆ ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ಗೆ ಸಂಬಂಧಿಸಿದ ಸುದ್ದಿಗಳು ಹೆಚ್ಚು ಜನರ ಗಮನ ಸೆಳೆಯುತ್ತಿದ್ದವು. ಅಷ್ಟೇ ಅಲ್ಲದೆ, ಇಬ್ಬರ ನಡುವೆ ಏನೋ ನಡೆಯುತ್ತಿದೆ ಅಂತ ಅವರ ಅಭಿಮಾನಿಗಳೂ ಸಹ ನಂಬಿದ್ದರು. ಆದರೆ, ಬರುಬರುತ್ತಾ ಇಬ್ಬರೂ ದೂರವಾಗಲು ಪ್ರಾರಂಭಿಸಿದರು. ಕೊನೆಗೆ ಲವ್ ಬ್ರೇಕಪ್ ಆಗಿದೆ ಎನ್ನುವ ಸುದ್ದಿಗಳು ಅಂದು ಹೆಚ್ಚಾಗಿ ಕೇಳಿಬಂದವು. ಅದರೆ ಈ ಕುರಿತು ಯಾವುದೇ ಸ್ಪಷ್ಟವಾದ ಮಾಹಿತಿ ಇಲ್ಲ.
ಅಂತಹ ಒಂದು ಕ್ಷಣದಲ್ಲಿ, ಜನಪ್ರಿಯ ಸೆಲೆಬ್ರಿಟಿ ಟಾಕ್ ಶೋ 'ರೆಂಡೆಜ್ವಸ್ ವಿಥ್ ಸಿಮಿ ಗರೆವಾಲ್' ಐಶ್ವರ್ಯಾ ನೀಡಿದ್ದ ಹೇಳಿಕೆ ಒಂದು ಸಂಚಲನ ಸೃಷ್ಟಿಸಿತ್ತು. ಈ ಸಂದರ್ಶನದಲ್ಲಿ ನಿರೂಪಕಿ "ಬಾಲಿವುಡ್ನಲ್ಲಿ ಅತ್ಯಂತ ಸೆಕ್ಸಿಯೆಸ್ಟ್ ಮತ್ತು ಅತ್ಯಂತ ಸುಂದರ ಪುರುಷ" ಯಾರು ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಐಶು, ಮುಗುಳ್ನಕ್ಕು, ಸ್ವಲ್ಪ ಹೊತ್ತು ಯೋಚಿಸಿ, ಸಲ್ಮಾನ್" ಎಂದು ಉತ್ತರಿಸಿದರು. ಇದೀಗ ಈ ಹಳೆ ವಿಡಿಯೋ ವೈರಲ್ ಆಗುತ್ತಿದೆ.
ಅಂದಹಾಗೆ ಸಲ್ಮಾನ್ ಅವರಿಂದ ಬೇರ್ಪಟ್ಟ ನಂತರ, ಐಶ್ವರ್ಯಾ ತಮ್ಮ ವೃತ್ತಿಜೀವನದತ್ತ ಸಂಪೂರ್ಣವಾಗಿ ಗಮನ ಹರಿಸಿದರು. 2000 ರ ದಶಕದ ಆರಂಭದಲ್ಲಿ, "ಧಾಯ್ ಅಕ್ಷರ್ ಪ್ರೇಮ್ ಕೆ" ಮತ್ತು ನಂತರ "ಗುರು" ಸಿನಿಮಾಗಳ ಮೂಲಕ ಅಭಿಷೇಕ್ ಮತ್ತು ಐಶ್ವರ್ಯ ಭೇಟಿಯಾದರು.
ಈ ಸಂದರ್ಭದಲ್ಲಿ ಇಬ್ಬರ ನಡುವೆ ಉಂಟಾದ ಸ್ನೇಹ ಪ್ರೀತಿಯಾಗಿ ಪರಿವರ್ತನೆ ಹೊಂದಿತು. ಇದಕ್ಕೆ ಸಾಕ್ಷಿಯಾಗಿ ಅಭಿಷೇಕ್ ಬಚ್ಚನ್ 2007 ರಲ್ಲಿ ಐಶ್ವರ್ಯಾ ರೈಗೆ ಪ್ರಪೋಸ್ ಮಾಡಿದರು. ಅಷ್ಟೇ ಅಲ್ಲ ಅದೇ ವರ್ಷ ಮದುವೆಯಾಗುವ ಮೂಲಕ ದೇಶದ ಗಮನ ಸೆಳೆದರು.