)
Aishwarya Rai Net Worth: ಐಶ್ವರ್ಯ ರೈ ಬಚ್ಚನ್ ಭಾರತದ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ನವೆಂಬರ್ 1, 1973 ರಂದು ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯ ರೈ 1994 ರಲ್ಲಿ ವಿಶ್ವ ಸುಂದರಿ ಕಿರೀಟ್ ಪಡೆದರು.
ದಕ್ಷಿಣ ಭಾರತದ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದ ಐಶ್ವರ್ಯ ರೈ ಬಚ್ಚನ್ 2007 ರಲ್ಲಿ ನಟ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದರು. 2011 ರಲ್ಲಿ ಮಗಳು ಆರಾಧ್ಯ ಜನಿಸಿದರು.
ಐಶ್ವರ್ಯ ರೈ ದುಬೈನಲ್ಲಿ 15 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ದುಬೈನಲ್ಲಿ ಜುಮೇರಾ ಗಾಲ್ಫ್ ಎಸ್ಟೇಟ್ನಲ್ಲಿರುವ ಸ್ಯಾಂಕ್ಚುರಿ ಫಾಲ್ಸ್ನಲ್ಲಿ ಈ ಮನೆಯಿದೆ. ಈ ಮನೆಯ ಒಳಗೆ ಜಿಮ್, ಈಜುಕೊಳ ಮತ್ತು ಇತರ ಅನೇಕ ಐಷಾರಾಮಿ ಸೌಕರ್ಯಗಳಿವೆ.
ಐಶ್ವರ್ಯ ರೈ 2015 ರಲ್ಲಿ ಬಾಂದ್ರಾದಲ್ಲಿ 21 ಕೋಟಿ ಬೆಲೆಯ 5BHK ಬಂಗಲೆಯನ್ನು ಖರೀದಿಸಿದರು. 5,500 ಚದರ ಅಡಿಗಳಲ್ಲಿ ವಿಸ್ತೀರ್ಣ ಹೊಂದಿದೆ. ಪ್ರಸ್ತುತ ಇದರ ಮೌಲ್ಯ 50 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಐಶ್ವರ್ಯ ರೈ ಐಷಾರಾಮಿ ಕಾರುಗಳನ್ನು ಸಹ ಹೊಂದಿದ್ದಾರೆ. ರೋಲ್ಸ್ ರಾಯ್ಸ್ ಘೋಸ್ಟ್, ಆಡಿ ಎ8ಎಲ್, ಮರ್ಸಿಡಿಸ್ ಬೆಂಝ್ ಎಸ್500, ಮರ್ಸಿಡಿಸ್ ಬೆಂಝ್ ಎಸ್350ಡಿ ಕೂಪೆ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಐಶ್ವರ್ಯ ರೈ ಒಟ್ಟು ಆಸ್ತಿ ಮೌಲ್ಯ 900 ಕೋಟಿ ರೂಪಾಯಿ. ಭಾರತದ ಶ್ರೀಮಂತ ನಟಿಯರಲ್ಲಿ ಒಬ್ಬರು. ಪ್ರತಿ ಚಿತ್ರಕ್ಕೆ 10-12 ಕೋಟಿ ಸಂಭಾವನೆ ವಿಧಿಸುತ್ತಾರೆ ಎಂದು ವರದಿಗಳು ಹೇಳುತ್ತವೆ. ಭಾರತದ ಎರಡನೇ ಶ್ರೀಮಂತ ನಟಿ ಆಗಿದ್ದಾರೆ.
ಸೋಷಿಯಲ್ ಮೀಡಿಯಾದಿಂದಲೂ ಐಶ್ವರ್ಯ ಹಣ ಗಳಿಸುತ್ತಾರೆ. ಐಶ್ವರ್ಯ ರೈ ಜಾಹೀರಾತು, ಇನ್ನೂ ಅನೇಕ ಹೂಡಿಕೆಗಳು ಸೇರಿದಂತೆ ವಿವಿಧ ಮೂಲಗಳಿಂದ ಹಣ ಸಂಪಾದಿಸುತ್ತಾರೆ. ಐಶ್ವರ್ಯ ರೈ 2023 ರಲ್ಲಿ ಪೊನಿಯನ್ ಸೆಲ್ವನ್ 2 ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.