ನವದೆಹಲಿ: ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ವಿವಾಹವಾಗಿ ವರ್ಷಗಳೇ ಕಳೆದಿವೆ. ಆದರೆ ಆ ಸಮಯದಲ್ಲಿ ಅಭಿಷೇಕ್ ಐಶ್ವರ್ಯಾಗೆ ಹೇಗೆ ಪ್ರಪೋಸ್ ಮಾಡಿದ್ದರು! ಆ ಕ್ಷಣದ ನೆನಪುಗಳು ಅವರ ಮನಸ್ಸಿನಲ್ಲಿ ಇನ್ನೂ ತಾಜಾವಾಗಿವೆ. ಇತ್ತೀಚಿನ ಸಂದರ್ಶನದಲ್ಲಿ, ಐಶ್ ತಮ್ಮ ಜೀವನದ ಈ ಕ್ಷಣಗಳನ್ನು ಕುರಿತು ಮಾತನಾಡಿದರು. ಸಂದರ್ಶನವೊಂದರಲ್ಲಿ ಈ ಬಗ್ಗೆ ಐಶ್ವರ್ಯ ಅವರನ್ನು ಕೇಳಿದಾಗ ಅಭಿಷೇಕ್ ಪ್ರಪೋಸ್ ಮಾಡಿದ ಕ್ಷಣವನ್ನು ಬಿಚ್ಚಿಟ್ಟ ಐಶ್ "ನಾನು ಆ ಕ್ಷಣವನ್ನು ಸಂಪೂರ್ಣವಾಗಿ ನೆನಪಿಸುತ್ತೇನೆ" ಎಂದರು.


COMMERCIAL BREAK
SCROLL TO CONTINUE READING

ಈ ಸಂದರ್ಶನದಲ್ಲಿ ಐಶ್ವರ್ಯ 2008 ರಲ್ಲಿ ತಾವು "ಜೋಧಾ ಅಕ್ಬರ್" ಚಿತ್ರಕ್ಕಾಗಿ ಚಿತ್ರೀಕರಣ ಮಾಡುತ್ತಿದ್ದಳು ಮತ್ತು ಅವಳ ಸಹ-ನಟ ಹೃತಿಕ್ ರೋಷನ್ ಮತ್ತು ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರು ಈ ಸುದ್ದಿಗೆ ಪ್ರತಿಕ್ರಿಯಿಸಿದರು ಎಂಬುದನ್ನು ತಿಳಿಸಿದ್ದಾರೆ.


'ಅಶುತೋಷ್  ದಿಗ್ಭ್ರಮೆಗೊಂಡಂತೆ ನೀನು ಎಂಗೇಜ್ ಆಗಿದಿಯಾ ಅಂತಾ ಕೇಳಿದ್ರು, ನಾನು ಹೌದು ಎಂದು ಹೇಳಿದೆ'... ಈ ಸುದ್ದಿ ಕೇಳಿದ ಹೃತಿಕ್ ನನಗೆ ಸಂತೋಷದಿಂದ ಥಮ್ಸಪ್ ತೋರಿದರು. ನಾವು ಆ ದಿನ 'ಖ್ವಾಜ ಮೇರೆ ಖ್ವಾಜ' ಹಾಡಿನ ಶೂಟಿಂಗ್ ನಲ್ಲಿದ್ದೆವು ಮತ್ತು ಅಂದಿನ ಪೂರ್ಣ ಅನುಭವ ಒಂದು ರೀತಿ ಭಿನ್ನವಾಗಿತ್ತು. ವಾಸ್ತವವಾಗಿ ಆ ಹಾಡನ್ನು ಕೂಡ ಜೋಧಾ ಮತ್ತು ಅಕ್ಬರ್ ರ ವಿವಾಹದ ಮೇಲೆ ಚಿತ್ರೀಕರಿಸಲಾಯಿತು.  "ನಾವು ಖ್ವಾಜಾ ಖ್ವಾಜ ಚಿತ್ರೀಕರಣ ಮಾಡುತ್ತಿದ್ದೆವು, ನಾನು ವಧುವಿನಂತೆ ಕುಳಿತಿದ್ದೆ ಮತ್ತು ನನ್ನ ಮನಸ್ಸಿನಲ್ಲಿ ಓ ದೇವರೇ ಪರದೆಯ ಮೇಲೂ, ಪರದೆಯ ಹಿಂದೆಯೂ...' ಎಲ್ಲವೂ ಬಹಳ ವಿಭಿನ್ನ ವಾಗಿತ್ತು" ಎಂದು ಐಶ್ವರ್ಯ ತಮ್ಮ ಅನುಭವ ಹಂಚಿಕೊಂಡಿದ್ದಾರೆ.


ಐಶ್ವರ್ಯ ಮತ್ತು ಅಭಿಷೇಕ್ ಇಬ್ಬರೂ 2007ರಲ್ಲಿ ತಮ್ಮ ನಿಶ್ಚಿತಾರ್ಥದ ವಿಷಯವನ್ನು ಘೋಷಿಸಿದರು. ಇದರ ನಂತರ ಇಬ್ಬರೂ ಮುಂಬೈಯ ಬಚ್ಚನ್ ಕುಟುಂಬದ ಮನೆಯಲ್ಲಿ ಮದುವೆಯಾದರು. 'ಧೂಮ್ 2', 'ಗುರು', 'ರಾವಣ' ಚಿತ್ರಗಳಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ದಿನಗಳಲ್ಲಿ ಇಬ್ಬರೂ ತಮ್ಮ ಮಗಳು ಆರಾಧ್ಯಳೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅಭಿಷೇಕ್ ಬಚ್ಚನ್ ತಮ್ಮ ಮಗಳು ಮತ್ತು ಹೆಂಡತಿಯೊಂದಿಗೆ ಹೊಸ ವರ್ಷದ ಆಚರಿಸಿದರು ಮತ್ತು ಸಾಮಾಜಿಕ ಮಾಧ್ಯಮದ ಚಿತ್ರವನ್ನು ಹಂಚಿಕೊಂಡಿದ್ದಾರೆ.