)
Aishwarya Rai Bachchan: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ತಮ್ಮ ವೈವಾಹಿಕ ಜೀವನದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. 90 ರ ದಶಕದಲ್ಲಿ ಬಾಲಿವುಡ್ ವದಂತಿಗಳಿಂದ ಮುಕ್ತವಾಗಿರಲಿಲ್ಲ. ಪ್ರೇಮ ವದಂತಿಗಳಿಂದ ಹಿಡಿದು ರಹಸ್ಯ ವಿವಾಹಗಳವರೆಗೆ, ನಟ-ನಟಿಯರು ತಮ್ಮ ವೈಯಕ್ತಿಕ ಜೀವನಕ್ಕಾಗಿ ಹೆಚ್ಚಾಗಿ ಸುದ್ದಿಯಾಗುತ್ತಿದ್ದರು. ಇಂದು ನಾವು ಐಶ್ವರ್ಯಾ ರೈ, ಮನೀಷಾ ಕೊಯಿರಾಲಾ ಮತ್ತು ರಾಜೀವ್ ಮುಲ್ಚಂದಾನಿ ಅವರಿಗೆ ಸಂಬಂಧಿಸಿದ ಒಂದು ವಿವಾದದ ಬಗ್ಗೆ ನಿಮಗೆ ಹೇಳುತ್ತೇವೆ.
ಮನೀಷಾ ಕೊಯಿರಾಲಾ ಪ್ರಸಿದ್ಧ ಮಾಡೆಲ್ ರಾಜೀವ್ ಮುಲ್ಚಂದಾನಿ ಅವರೊಂದಿಗೆ ಸಂಬಂಧವನ್ನು ಹೊಂದಿದ್ದರು. ಆದರೆ ರಾಜೀವ್ ಮುಲ್ಚಂದಾನಿ ಐಶ್ವರ್ಯಾ ರೈ ಅವರೊಂದಿಗೆ ರಹಸ್ಯ ಸಂಬಂಧ ಹೊಂದಿದ್ದಾರೆಂದು ಮನೀಷಾ ಕೊಯಿರಾಲಾ ಆರೋಪಿಸಿದ್ದರು.
ETimes ವರದಿಯ ಪ್ರಕಾರ, ರಾಜೀವ್ ಅವರೊಂದಿಗೆ ಡೇಟಿಂಗ್ ಮಾಡುವಾಗ ಮನೀಷಾಗೆ ಪತ್ರ ಒಂದು ಬಂದಿತು. ಇದು ಐಶ್ವರ್ಯಾ ರಾಜೀವ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಊಹಾಪೋಹಕ್ಕೆ ಕಾರಣವಾಯಿತು. ಇಡೀ ಘಟನೆಯಿಂದ ಐಶ್ವರ್ಯಾ ರೈ ಆಘಾತಕ್ಕೊಳಗಾದರು.
ಐಶ್ವರ್ಯಾ ತನ್ನ ಹಳೆಯ ಸಂದರ್ಶನವೊಂದರಲ್ಲಿ ಬಾಂಬೆ (1995) ಚಿತ್ರದಲ್ಲಿ ಮನೀಷಾಳ ಪಾತ್ರವನ್ನು ಹೊಗಳಿದ್ದರು. ಆದರೆ ಮನಿಷಾ ತನ್ನ ಲವ್ ವಿಚಾರದಲ್ಲಿ ಐಶ್ವರ್ಯಾ ಹೆಸರನ್ನು ಎಳೆದು ತಂದಾಗ ವಿಷಯಗಳು ಬೇರೆ ರೀತಿಯ ವಿವಾದಗಳನು ಹುಟ್ಟು ಹಾಕಿದವು.
ರಾಜೀವ್ ನನಗೆ ತುಂಬಾ ಒಳ್ಳೆಯ ಸ್ನೇಹಿತ, ಅಷ್ಟೇ. ನಾನು ಅವರ ಪ್ರೇಮಕಥೆಯಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ ಎಂದು ಐಶ್ವರ್ಯಾ ರೈ ಹೇಳಿದ್ದಾರೆ. ಆದರೆ ಮನಿಷಾ ಕೊಯಿರಾಲಾ ತಮ್ಮ ಮತ್ತು ರಾಜೀವ್ ಬ್ರೇಕಪ್ ಆಗಲು ಐಶ್ವರ್ಯಾ ರೈ ಕಾರಣ ಎಂದು ಹೇಳಿಕೊಂಡಿದ್ದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.