)
Aishwarya Salman viral video: ಬಾಲಿವುಡ್ ಪ್ರೇಕ್ಷಕರ ಹೃದಯದಲ್ಲಿ ಸದಾ ವಿಶಿಷ್ಟ ಸ್ಥಾನ ಹೊಂದಿರುವ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಅವರ ಸಂಬಂಧವು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. 1999 ರ ‘ಹಮ್ ದಿಲ್ ದೇ ಚುಕೆ ಸನಮ್’ ಚಿತ್ರದ ಸೆಟ್ನಿಂದ ಬಂದ ಒಂದು ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಿವುಡ್ನಲ್ಲಿ ಅನೇಕ ಪ್ರಣಯ ಕಥೆಗಳು ಜನಪ್ರಿಯವಾಗಿವೆ. ಆದರೆ ಐಶ್ವರ್ಯಾ-ಸಲ್ಮಾನ್ ಜೋಡಿಯ ಪ್ರೀತಿ ವಿಶೇಷವಾಗಿತ್ತು. ಚಿತ್ರದ ಸೆಟ್ನಲ್ಲಿ ಅವರ ನಡುವಿನ ಕೆಮಿಸ್ಟ್ರಿ ಮತ್ತು ಆನಂದ ದೃಶ್ಯಗಳು ಅಭಿಮಾನಿಗಳ ಮನಸ್ಸಿಗೆ ನೆನಪಿನ ಚಿತ್ತಾರವನ್ನು ಉಂಟುಮಾಡಿವೆ. “ಹಮ್ ದಿಲ್ ದೇ ಚುಕೆ ಸನಮ್” ಚಿತ್ರದಲ್ಲಿ ಈ ಜೋಡಿ ತಮ್ಮ ನೈಜ ನಟನೆಯ ಮೂಲಕ ಹೃದಯ ಗೆದ್ದಿದ್ದರು.
ಈ ವಿಡಿಯೋ ಸಹ ಫ್ಯಾನ್ಸ್ ಗಮನ ಸೆಳೆದಿರುವುದು ಅವರ ಸೆಟ್ ಟೈಮ್ನ ತಮಾಷೆಯ ದೃಶ್ಯಗಳು ಸಲ್ಮಾನ್ ಮತ್ತು ಐಶ್ವರ್ಯ ಸೆಟ್ನಲ್ಲಿ ಎಷ್ಟು ಆರಾಮವಾಗಿ, ಸಹಜವಾಗಿ ನಡೆದುಕೊಂಡಿದ್ದರು ಎಂಬುದನ್ನು ಈ ಕ್ಲಿಪ್ ಸ್ಪಷ್ಟವಾಗಿ ತೋರಿಸುತ್ತದೆ. ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿನ ಈ ಚಿತ್ರದಲ್ಲಿ ಜೋಡಿ ಸ್ಕ್ರೀನ್ ಮೇಲೆ ಮಿಂಚಿದರು.
ಸಲ್ಮಾನ್ ಮತ್ತು ಐಶ್ವರ್ಯ ಅವರ ಪ್ರೀತಿ ಕೇವಲ ಮೂರು-ನಾಲ್ಕು ವರ್ಷಗಳ ಕಾಲ ಮುಂದುವರೆದಿತ್ತು. ನಂತರ ಅವರು ಬೇರ್ಪಟ್ಟರು, ಆದರೆ ಅವರ ಪ್ರೀತಿ ಹಾಗೂ ಸ್ನೇಹ ಈಗಲೂ ನೆನಪಿನಲ್ಲಿದೆ. ಇತ್ತೀಚೆಗೆ ಪ್ರಸಿದ್ಧ ಗೀತಾರಚನೆಕಾರ ಸಮೀರ್ ಅಂಜಾನ್ ಹೇಳಿರುವಂತೆ, ‘ತೇರೆ ನಾಮ್’ ಚಿತ್ರದಲ್ಲಿ ಸಲ್ಮಾನ್ ಐಶ್ವರ್ಯ ಅವರನ್ನು ನೆನಪಿಸಿ ಅಳುತ್ತಿದ್ದರು. ಎಂಬ ವಿಷಯ ತಿಳಿದುಬಂದಿದೆ. ಇದರ ಜೊತೆಗೆ ಚಿತ್ರದ ಹಾಡುಗಳು ಸಹ ಅವರ ಪ್ರೇಮಕಥೆಯನ್ನು ಪ್ರೇರಣೆಯಾಗಿ ಬಳಸಿವೆ. ಈಗ ಅಂತಹ ಹಳೆಯ ವಿಡಿಯೋ ವೈರಲ್ ಆಗಿದ್ದು, ಫ್ಯಾನ್ಸ್ ಹೃದಯದಲ್ಲಿ ಪುನಃ ಪ್ರೇಮ ಭಾವನೆಗಳನ್ನು ಹುಟ್ಟಿಸಿದೆ. ಸಲ್ಮಾನ್-ಐಶ್ವರ್ಯ ಜೋಡಿಯ ಕೆಮಿಸ್ಟ್ರಿ ಸೆಟ್ನಲ್ಲಿ ಅವರ ಪ್ರೇಮ ಮತ್ತು ಸ್ನೇಹದ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳನ್ನು ಮತ್ತೇ ಚರ್ಚೆಗೀಡು ಮಾಡುತ್ತಿವೆ.
ಬಾಲಿವುಡ್ನ ಹಳೆಯ ರೊಮ್ಯಾಂಟಿಕ್ ಜೋಡಿಗಳ ಪ್ರೀತಿ ಮತ್ತು ಸ್ನೇಹದ ನೆನಪುಗಳು ಈಗಲೂ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿವೆ. ಈ ವಿಡಿಯೋವು ‘ಹಮ್ ದಿಲ್ ದೇ ಚುಕೆ ಸನಮ್’ ಚಿತ್ರದ ಜೋಡಿ ನೆನಪನ್ನು ಮತ್ತೆ ಹೊಸದಾಗಿ ನೆನಪಿಸಿದೆ.