ಮೂವತ್ತಕ್ಕೂ ಹೆಚ್ಚು ಕೊಲೆ, ಜೈಲುವಾಸ! ಟೀಸರ್‌ ಮೂಲಕ ಸಂಚಲನ ಸೃಷ್ಟಿಸಿದ್ದ "ರಾಧೇಯ" ಬಿಡುಗಡೆ ಡೇಟ್‌ ಅನೌನ್ಸ್‌

Ajai Rao Radheyaa : ಇಷ್ಟು ದಿನ ಲವರ್‌ ಬಾಯ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಜಯ್‌ ರಾವ್‌ ಮೊದಲ ಬಾರಿಗೆ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಪ್ರೀತಿ, ಪ್ರೇಮ ಅಂತ ಹೀರೋಯಿನ್‌ ಹಿಂದೆ ಸುತ್ತುತ್ತಿದ್ದ ನಟ ಇದೀಗ ಅಪರಾಧ ಲೋಕದಲ್ಲಿ ತಾನು ದೇವರು ಅಂತ ಹೇಳಿಕೊಂಡು ರಾಧೇಯ ಮೂಲಕ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ..

Written by - YASHODHA POOJARI | Last Updated : Nov 13, 2025, 03:37 PM IST
    • ಇಷ್ಟು ದಿನ ಲವರ್‌ ಬಾಯ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಜಯ್‌ ರಾವ್‌
    • ಅಜಯ್‌ ರಾವ್‌ ಮೊದಲ ಬಾರಿಗೆ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿ
    • ನಟ ಅಜಯ್ ರಾವ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರೋ ರಾಧೇಯ ಸಿನಿಮಾ
ಮೂವತ್ತಕ್ಕೂ ಹೆಚ್ಚು ಕೊಲೆ, ಜೈಲುವಾಸ! ಟೀಸರ್‌ ಮೂಲಕ ಸಂಚಲನ ಸೃಷ್ಟಿಸಿದ್ದ "ರಾಧೇಯ" ಬಿಡುಗಡೆ ಡೇಟ್‌ ಅನೌನ್ಸ್‌

Radheyaa movie : ನಟ ಅಜಯ್ ರಾವ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರೋ ರಾಧೇಯ ಸಿನಿಮಾ ನವೆಂಬರ್ 21ಕ್ಕೆ ರಿಲೀಸ್ ಆಗುತ್ತಿದೆ. ಮೂವತ್ತಕ್ಕೂ ಹೆಚ್ಚು ಕೊಲೆ ಮಾಡಿ ಅಜಯ್ ರಾವ್ ಜೈಲಿಗೆ ಹೋಗುತ್ತಾರೆ. ಯಾಕೆ.. ಏನಾಯ್ತು..? ಅನ್ನೋದನ್ನ 21ಕ್ಕೆ ನೀವೇ ನೋಡಬೇಕು. 

Add Zee News as a Preferred Source

ನಟ, ನಿರ್ದೇಶಕ ಅಜಯ್ ರಾವ್ ಈಗ ರಾಧೇಯನಾಗಿದ್ದಾರೆ. ಹೌದು, ಅವರು ಹೊಸ ಚಿತ್ರದ ಹೆಸರು ರಾಧೇಯ. ಒಂದಷ್ಟು ವರ್ಷಗಳಿಂದ ಕೆಲ ನಿರ್ದೇಶಕರ ಜತೆ ಕೆಲಸ ಮಾಡಿ ಅನುಭವ ಪಡೆದಿರುವ ವೇದಗುರು ಇದೇ ಮೊದಲ ಬಾರಿಗೆ ‘ರಾಧೇಯ’ ಚಿತ್ರಕ್ಕೆ ಆ್ಯಕ್ಷನ್, ಕಟ್ ಹೇಳಿದ್ದಾರೆ. ಜೊತೆಗೆ ಕೀರ್ತಿ ಚಾಹ್ನಾ ಸಿನಿಮಾ ಕಾರ್ಖಾನೆ ಮೂಲಕ ನಿರ್ಮಾಣ ಸಹ ಮಾಡಿದ್ದಾರೆ. 

ಇದನ್ನೂ ಓದಿ:ಪ್ರೀತಿ ಪ್ರೇಮ ಇಂದೇ ತ್ಯಜಿಸಿ! ಕುತೂಹಲ ಮೂಡಿಸುತ್ತಿದೆ ‘Congratulations ಬ್ರದರ್' ಸಿನಿಮಾ ಟೀಸರ್

ಕೃಷ್ಣ ಅಜಯ್ ರಾವ್ ಹಾಗೂ ಸೋನಾಲ್ ಮಂತೆರೋ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಈ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ ಇದೆ. ನಟಿ ಸೋನಲ್ ಈ ಸಿನಿಮಾದಲ್ಲಿ ಕ್ರೈಂ ರಿಪೋರ್ಟರ್ ಆಗಿ ಪಾತ್ರ ಮಾಡಿದ್ದಾರೆ. ಅಜಯ್ ಕೊಲೆಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಜಯ್ ಯಾಕೆ ಕೊಲೆ ಮಾಡಿದ್ರು ಅನ್ನೋದನ್ನ 21ಕ್ಕೆ ಕಾದು ನೋಡಬೇಕು.. ಒಟ್ಟಾರೆ ಇದೊಂದ್ ಅದ್ಭುತ ಕಥಾಹಂದರ ಹೊಂದಿರೋ ಚಿತ್ರ ಅನ್ನೋದ್ರಲ್ಲಿ ಅನುಮಾನವಿಲ್ಲ.

About the Author

Trending News