ಶಾರುಖ್‌ ಜೊತೆ ಸಿನಿಮಾ ಶೂಟಿಂಗ್‌ ಸಮಯದಲ್ಲೇ ನಟಿ ಕಾಜೋಲ್‌ ಗರ್ಭಪಾತ... ಸೆಟ್‌ಗೆ ನುಗ್ಗಿ ಕೆನ್ನೆಗೆ ಬಾರಿಸಿದ್ರು ಅಜಯ್‌ ದೇವಗನ್‌!

Kajol faced miscarriage : ಶಾರುಖ್‌ ಖಾನ್ ಮತ್ತು ಕಾಜೋಲ್ ತೆರೆ ಮೇಲೆ ಹಿಟ್ ಆದ ಜೋಡಿ. ಇವರ ಆನ್‌ ಸ್ಕ್ರೀನ್‌ ಕೆಮಿಸ್ಟ್ರಿಯನ್ನು ಸಿನಿ ಪ್ರಿಯರು ಮೆಚ್ಚಿದ್ದರು. 

Written by - Chetana Devarmani | Last Updated : May 25, 2025, 02:45 PM IST
  • ಬಾಲಿವುಡ್ ನಟಿ ಕಾಜೋಲ್
  • ಅಜಯ್ ದೇವಗನ್‌ ಪತ್ನಿ ನಟಿ ಕಾಜೋಲ್‌
ಶಾರುಖ್‌ ಜೊತೆ ಸಿನಿಮಾ ಶೂಟಿಂಗ್‌ ಸಮಯದಲ್ಲೇ ನಟಿ ಕಾಜೋಲ್‌ ಗರ್ಭಪಾತ... ಸೆಟ್‌ಗೆ ನುಗ್ಗಿ ಕೆನ್ನೆಗೆ ಬಾರಿಸಿದ್ರು ಅಜಯ್‌ ದೇವಗನ್‌!

Actress Kajol : ಬಾಲಿವುಡ್ ನಟಿ ಕಾಜೋಲ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಸಂದರ್ಶನಗಳ ಹೊರತಾಗಿ ಅವರು ತಮ್ಮ ವೈಯಕ್ತಿಕ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. 

Add Zee News as a Preferred Source

ಕೆಲವು ತಿಂಗಳ ಹಿಂದೆ ನಟಿ ಬಾಂಬೆ ಹ್ಯೂಮನ್ಸ್‌ನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಅಲ್ಲಿ ಅವರು ತಮ್ಮ ವೈವಾಹಿಕ ಜೀವನ, ಪತಿ ಅಜಯ್ ದೇವಗನ್, ವೃತ್ತಿಜೀವನ ಮತ್ತು ವೈಫಲ್ಯದ ಬಗ್ಗೆ ಬಹಳಷ್ಟು ವಿಚಾರಗಳನ್ನು ಹೇಳಿಕೊಂಡಿದ್ದರು. ತಾವು ಎರಡು ಬಾರಿ ಗರ್ಭಪಾತದ ನೋವನ್ನು ಅನುಭವಿಸಿದ್ದೇನೆ ಎಂದು ಹೇಳಿದದ್ದರು. 

ಕಾಜೋಲ್ ಮತ್ತು ಅಜಯ್ ದೇವಗನ್ 25 ವರ್ಷಗಳ ಹಿಂದೆ 'ಹಲ್‌ ಚಲ್' ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಕಾಜೋಲ್ ಅಜಯ್ ನನ್ನು ಮೊದಲ ಬಾರಿಗೆ ನೋಡಿದಾಗ ಪ್ರೀತಿ ಹುಟ್ಟಿರಲಿಲ್ಲ. ಆದರೆ ನಂತರ ನಿಧಾನವಾಗಿ ಅವರಿಬ್ಬರೂ ಮಾತನಾಡಲು ಪ್ರಾರಂಭಿಸಿದರು. ಸ್ನೇಹಿತರಾದರು. ಆ ಸಮಯದಲ್ಲಿ ತಾನು ಬೇರೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದ ವಿಚಾರವನ್ನು ಕಾಜೋಲ್‌ ಹೇಳಿದ್ದಾರೆ.

ಅಜಯ್ ಜೊತೆ ತನ್ನ ಗೆಳೆಯನ ಬಗ್ಗೆ ಮಾತನಾಡುತ್ತಿದ್ದೆ ಎಂದು ಕಾಜೋಲ್ ಹೇಳಿದ್ದಾರೆ. ನಂತರ ಬ್ರೇಕಪ್‌ ಆಗಿ ಬೇರ್ಪಟ್ಟರು. ಇದಾದ ನಂತರ ಕಾಜೋಲ್ ಮತ್ತು ಅಜಯ್ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಕಾಜೋಲ್ ಆಗಲಿ ಅಜಯ್ ಆಗಲಿ ಎಂದಿಗೂ ಪರಸ್ಪರ ಪ್ರಪೋಸ್ ಮಾಡಿಲ್ಲ. ಇಬ್ಬರ ನಡುವೆ ವಿಷಯಗಳು ಸ್ವಯಂಚಾಲಿತವಾಗಿ ಮುಂದುವರಿಯಲು ಪ್ರಾರಂಭಿಸಿದವು.

ಡೇಟಿಂಗ್ ದಿನಗಳಲ್ಲಿ, ಕಾಜೋಲ್ ಮತ್ತು ಅಜಯ್ ದೇವಗನ್ ಒಟ್ಟಿಗೆ ಊಟಕ್ಕೆ ಹೋಗುತ್ತಿದ್ದರು ಏಕೆಂದರೆ ಆ ಸಮಯದಲ್ಲಿ ಅಜಯ್ ದೇವಗನ್ ಜುಹುವಿನಲ್ಲಿ ವಾಸಿಸುತ್ತಿದ್ದರು. ಕಾಜೋಲ್ ದಕ್ಷಿಣ ಬಾಂಬೆಯಲ್ಲಿ ವಾಸಿಸುತ್ತಿದ್ದರು. ಕಾಜೋಲ್ ಇದನ್ನು ಉಲ್ಲೇಖಿಸುತ್ತಾ, "ನಾವು ನಮ್ಮೆಲ್ಲ ಸಮಯವನ್ನೂ ಕಾರಿನಲ್ಲಿ ಕಳೆಯುತ್ತಿದ್ದೆವು. ನಮ್ಮ ಸ್ನೇಹವನ್ನು ನೋಡಿ, ನನ್ನ ಸ್ನೇಹಿತರು ನನಗೆ ಎಚ್ಚರಿಕೆ ಕೂಡ ನೀಡಿದರು. ಆದರೆ ಅವನು ನನ್ನೊಂದಿಗೆ ತುಂಬಾ ಭಿನ್ನವಾಗಿದ್ದನೆಂದು ನನಗೆ ತಿಳಿದಿತ್ತು. ಕಾಲಾನಂತರದಲ್ಲಿ ನಮ್ಮ ಸಂಬಂಧವು ಬಲವಾಯಿತು" ಎಂದು ಹೇಳುತ್ತಾರೆ.

ನಾಲ್ಕು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಕಾಜೋಲ್ ಮತ್ತು ಅಜಯ್ ದೇವಗನ್ ಮದುವೆಯಾದರು. ಕಾಜೋಲ್ ಗರ್ಭಾವಸ್ಥೆಯಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಮದುವೆಯಾದ ಕೆಲವು ವರ್ಷಗಳ ನಂತರ, ಇಬ್ಬರೂ ತಮ್ಮ ಕುಟುಂಬಕ್ಕಾಗಿ ಯೋಜನೆಗಳನ್ನು ಪ್ರಾರಂಭಿಸಿದರು.

ಇದನ್ನೂ ಓದಿ: ಬಿಗ್‌ ಆಫರ್‌, 6 ಕೋಟಿ, ರಾತ್ರೋರಾತ್ರಿ ಶ್ರೀಮಂತಳಾದ ಸ್ಟಾರ್‌ ನಟಿ..! ಯಾರು ಈ ಚೆಲವೆ..?

'ಕಭಿ ಖುಷಿ ಕಭಿ ಗಮ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕಾಜೋಲ್ ಗರ್ಭಿಣಿಯಾಗಿದ್ದರು. ಆದರೆ ದುರದೃಷ್ಟವಶಾತ್ ಗರ್ಭಪಾತವಾಯಿತು. ಆ ಚಿತ್ರ ದೊಡ್ಡ ಹಿಟ್ ಆದರೂ ಕಾಜೋಲ್ ಗೆ ತುಂಬಾ ಬೇಸರವಾಗಿತ್ತು. ಸ್ವಲ್ಪ ಸಮಯದ ನಂತರ ಕಾಜೋಲ್ ಈ ದುಃಖದಿಂದ ಚೇತರಿಸಿಕೊಂಡರು ಮತ್ತು ದೇವರ ಆಶೀರ್ವಾದದಿಂದ ಮತ್ತೆ ತಾಯಿಯಾಗುವ ಭರವಸೆ ಚಿಗುರಿತು. ಆದರೆ ಮತ್ತೊಮ್ಮೆ ಗರ್ಭಪಾತದ ನೋವನ್ನು ಅನುಭವಿಸಬೇಕಾಯಿತು. ಕಾಜೋಲ್ ಆ ಏರಿಳಿತಗಳಿಂದ ಕೂಡಿದ ಸಮಯವನ್ನು ತುಂಬಾ ಕಷ್ಟಕರವೆಂದು ಪರಿಗಣಿಸುತ್ತಾರೆ. 

ಕೆಲವು ವರದಿಗಳ ಪ್ರಕಾರ,  ಶಾರುಖ್‌ ಖಾನ್ ಮತ್ತು ಕಾಜೋಲ್ 2001‌ ರಲ್ಲಿ ಕಬಿ ಖುಷಿ ಕಬಿ ಗಮ್ ಚಿತ್ರದಲ್ಲಿ ನಟಿಸುತ್ತಿದ್ದರು. ಆಗ ಗರ್ಭಿಣಿ ಕಾಜೋಲ್ ಗೆ ಗರ್ಭಪಾತವಾಗಿತ್ತು. ಕಬಿ ಖುಷಿ ಕಬಿ ಗಮ್ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಕಾಜೋಲ್ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಆಗ ಅಬಾರ್ಷನ್‌ ಆಗಿತ್ತು. ಕಾಜೋಲ್‌ ಬಿದ್ದ ವಿಚಾರ ತಿಳಿದು ಅವರ ಪತಿ ಅಜಯ್ ದೇವಗನ್ ಶೂಟಿಂಗ್ ಸೆಟ್‌ಗೆ ಓಡೋಡಿ ಬಂದಿದ್ದಾರೆ. ಆ ಸಮಯದಲ್ಲಿ ಪ್ರಜ್ಞೆ ತಪ್ಪಿದ್ದ ಪತ್ನಿ ಕಾಜೋಲ್ ಸ್ಥಿತಿ ಕಂಡು ಅಜಯ್ ಗಾಬರಿಯಾಗಿದ್ದರಂತೆ. ಬಳಿಕ ಕಾಜೋಲ್ ಮೇಲೆ ಕೋಪಗೊಂಡಿದ್ದ ಅಜಯ್ ಎಲ್ಲರ ಮುಂದೆ ಕಪಾಳಕ್ಕೆ ಹೊಡೆದಿದ್ದರು ಎಂದು ಹೇಳಲಾಗುತ್ತದೆ.  

ನಟಿ ಕಾಜೋಲ್ ಗೆ ಎರಡು ಬಾರಿ ಗರ್ಭಪಾತವಾಗಿತ್ತು, ಇದರಿಂದ ಟೆನ್ಷನ್‌ ಆಗಿದ್ದ ಅಜಯ್‌, ನಿರ್ದೇಶಕ ಕರಣ್ ಜೋಹರ್ ಜೊತೆ ಕೂಡ ಮಾತು ಬಿಟ್ಟಿದ್ದರಂತೆ. ಆದರೆ ನಂತರ ಪರಿಸ್ಥಿತಿ ಸುಧಾರಿಸಿತು. ನಿಸಾ ಮತ್ತು ಯುಗ್ ತಮ್ಮ ಜನಿಸಿದರು.

ಕಾಜೋಲ್ ಮತ್ತು ಅಜಯ್ ದೇವಗನ್ ಅವರ ಮಗಳು ನೈಸಾ ದೇವಗನ್‌ 2003 ರಲ್ಲಿ ಜನಿಸಿದರು. ಸಿಂಗಾಪುರದಲ್ಲಿ  ನೈಸಾ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಕಾಜೋಲ್ ಆಗಾಗ್ಗೆ ತನ್ನ ಮಗಳೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕಾಜೋಲ್ ಎರಡನೇ ಮಗು ಯುಗ್ ಮುಂಬೈನಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಾರೆ. ಅಜಯ್ ಆಗಾಗ್ಗೆ ಯುಗ್ ಜೊತೆಗಿನ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.  

ಇದನ್ನೂ ಓದಿ: ಗೋವಾ ಬೀಚ್‌ನಲ್ಲಿ "ಬಿಗ್‌ಬಾಸ್‌ ಸ್ಪರ್ಧಿ" ಮೇಲೆ ಮಾಟಮಂತ್ರ..! ಗೊಂಬೆ, ರಕ್ತ, ಕೂದಲು ನೋಡಿ ಬೆಚ್ಚಿಬಿದ್ದ ನಟಿ..

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News