'ತಾನಾಜಿ' ಪಾಲಿಗೆ ಮತ್ತೊಂದು ಗುಡ್ ನ್ಯೂಸ್, 'ಛಪಾಕ್' ಪಾಲಿಗೆ ಬ್ಯಾಡ್ ನ್ಯೂಸ್

ಬಾಕ್ಸ್ ಆಫೀಸ್ ನಲ್ಲಿ ಇದುವರೆಗೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಚಿತ್ರ ಶೀಘ್ರದಲ್ಲಿಯೇ 200 ಕೋಟಿ ರೂ. ಗಡಿ ದಾಟಲಿದೆ ಎನ್ನಲಾಗಿದೆ. ಸತತ ಎರಡು ವಾರಗಳ ಉತ್ತಮ ಪ್ರದರ್ಶನದ ಬಳಿಕ, ಮೂರನೇ ವಾರದಲ್ಲಿ ಮತ್ತು  ಅದರಲ್ಲೂ ವಿಶೇಷವಾಗಿ ಗಣರಾಜ್ಯೋತ್ಸವದ ಹಿನ್ನೆಲೆ ಈ ಚಿತ್ರ ಗಳಿಕೆಯ ವಿಚಾರದಲ್ಲಿ ನೂತನ ಹಂತಕ್ಕೆ ತಲುಪಲಿದೆ ಎಂದು ಚಿತ್ರದ ನಿರ್ಮಾಪಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Last Updated : Jan 22, 2020, 04:36 PM IST
'ತಾನಾಜಿ' ಪಾಲಿಗೆ ಮತ್ತೊಂದು ಗುಡ್ ನ್ಯೂಸ್, 'ಛಪಾಕ್' ಪಾಲಿಗೆ ಬ್ಯಾಡ್ ನ್ಯೂಸ್ title=

ನವದೆಹಲಿ: ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ 'ತಾನಾಜಿ: ದಿ ಅನ್ಸಂಗ್ ವಾರಿಯರ್' ಕೇವಲ ವೀರ ಯೋಧ ತಾನಾಜಿಯ ಕಥೆಯನ್ನು ದೇಶಾದ್ಯಂತ ಮನೆಮನೆಗೆ ತಲುಪಿಸಿದೆ. ಅಷ್ಟೇ ಅಲ್ಲ ಐತಿಹಾಸಿಕ ಕಥಾ ಹಂದರವುಳ್ಳ ಚಿತ್ರಗಳಿಗೆ ಜನರು ಇಂದಿಗೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂಬುದನ್ನು ಸಾಬೀತುಪಡಿಸಿದೆ. ಇದೀಗ ಅಜಯ್ ಅವರ ಈ ಚಿತ್ರದ ಪಾಲಿಗೆ ಇನ್ನೊಂದು ಗುಡ್ ನ್ಯೂಸ್ ಪ್ರಕಟವಾಗಿದೆ. ಹೌದು, ಹರಿಯಾಣಾ, ಉತ್ತರ ಪ್ರದೇಶದ ಬೆನ್ನಲ್ಲೇ  ಇದೀಗ ಮಹಾರಾಷ್ಟ್ರದಲ್ಲಿಯೂ ಕೂಡ ಚಿತ್ರ ಟ್ಯಾಕ್ಸ್ ಫ್ರೀ ಆಗಿದೆ.

ಬಾಕ್ಸ್ ಆಫೀಸ್ ನಲ್ಲಿ ಇದುವರೆಗೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಚಿತ್ರ ಶೀಘ್ರದಲ್ಲಿಯೇ 200 ಕೋಟಿ ರೂ. ಗಡಿ ದಾಟಲಿದೆ ಎನ್ನಲಾಗಿದೆ. ಸತತ ಎರಡು ವಾರಗಳ ಉತ್ತಮ ಪ್ರದರ್ಶನದ ಬಳಿಕ, ಮೂರನೇ ವಾರದಲ್ಲಿ ಮತ್ತು  ಅದರಲ್ಲೂ ವಿಶೇಷವಾಗಿ ಗಣರಾಜ್ಯೋತ್ಸವದ ಹಿನ್ನೆಲೆ ಈ ಚಿತ್ರ ಗಳಿಕೆಯ ವಿಚಾರದಲ್ಲಿ ನೂತನ ಹಂತಕ್ಕೆ ತಲುಪಲಿದೆ ಎಂದು ಚಿತ್ರದ ನಿರ್ಮಾಪಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಬಾಕ್ಸ್ ಆಫೀಸ್ ಇಂಡಿಯಾ ಅಂಕಿ-ಅಂಶಗಳ ಪ್ರಕಾರ, ಬಿಡುಗಡೆಯಾದ 12ನೇ ದಿನಕ್ಕೆ 7 ಕೋಟಿ.ರೂ ಗಳಿಕೆ ಮಾಡಿರುವ ಈ ಚಿತ್ರದ ಇದುವರೆಗಿನ ಕಲೆಕ್ಷನ್ 183.34 ರೂ. ಗೆ ತಲುಪಿದೆ. ಇನ್ನೊಂದೆಡೆ 'ತಾನಾಜಿ' ಜೊತೆ ಬಿಡುಗಡೆಗೊಂಡ ದೀಪಿಕಾ ಅಭಿನಯದ 'ಛಪಾಕ್' ಚಿತ್ರ ಸತತ 11ನೇ ದಿನವೂ ಕೂಡ ಬಾಕ್ಸ್ ಆಫೀಸ್ ಮೇಲೆ ಕಮಾಲ್ ಮಾಡುವಲ್ಲಿ ವಿಫಲವಾಗಿದೆ. 11ನೇ ದಿನ ಒಟ್ಟು 45 ಲಕ್ಷ ರೂ. ಗಳಿಕೆ ಮಾಡಿರುವ 'ಛಪಾಕ್' ನ ಒಟ್ಟು ಕಲೆಕ್ಷನ್ 29.70 ಕೋಟಿ ರೂ.ಗೆ ತಲುಪಿದೆ.

'ತಾನಾಜಿ: ದಿ ಅನ್ಸಂಗ್ ವಾರಿಯರ್ ' ಚಿತ್ರದ ಇದುವರೆಗಿನ ಬಾಕ್ಸ್ ಆಫೀಸ್ ಕಲೆಕ್ಷನ್ ಈ ಕೆಳಗಿನಂತಿದೆ
1st Friday: 15.10cr
1st Saturday: 20.57cr
1st Sunday: 26.26cr
1st Monday: 13.75cr
1st Tuesday: 15.28cr
1st Wednesday: 16.72cr
1st Thursday: 11.23cr
2nd Friday: 10.06cr
2nd Saturday: 16.36cr
2nd Sunday: 22.12cr
2nd Monday: 8.17cr
2nd Tuesday: 7.72cr
Total: 183.34cr

'ತಾನಾಜಿ-ದಿ ಅನ್ಸಂಗ್ ವಾರಿಯರ್' ಮೂಲಕ ಬಾಲಿವುಡ್ ನಲ್ಲಿ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟಿರುವ ಓಂ ರಾವುತ್, ತಾವು ಒಂದು ಒಳ್ಳೆಯ ಐತಿಹಾಸಿಕ ಚಿತ್ರ ರಚಿಸಬಲ್ಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಚಿತ್ರದ ಒಂದೊಂದು ದೃಶ್ಯದ ಮೇಲೆ ಓಂ ರಾವುತ್ ಅತಿ ಸೂಕ್ಷ್ಮವಾಗಿ ಕೆಲಸ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲ ಮರಾಠಿಗರ ಶೌರ್ಯ ಮತ್ತು ಸಾಹಸವನ್ನು ಬಿಂಬಿಸಲು ಯಶಸ್ವಿಯಾಗಿದೆ. ತುಂಬಾ ಸಮಯದ ಬಳಿಕ ಸೈಫ್ ಅಲಿ ಖಾನ್ ಅವರು ಉತ್ತಮ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಅಥವಾ ತುಂಬಾ ಹೊತ್ತಿನ ಬಳಿಕ ದೊಡ್ಡ ತೆರೆಯ ಮೇಲೆ ಒಂದು ಉತ್ತಮ ಅಭಿನಯದ ಮೂಲಕ ರಿಎಂಟ್ರಿ ನೀಡಿದ್ದಾರೆ ಎನ್ನಬಹುದು. 

Trending News