ತಿಂಗಳಲ್ಲಿ 20 ಬಾರಿ... ಕಾಸ್ಟಿಂಗ್ ಕೌಚ್ ಬಗ್ಗೆ ಖ್ಯಾತ ನಟಿಯ ಶಾಕಿಂಗ್ ಹೇಳಿಕೆ...!

Actress Akshara Singh: ಕಾಸ್ಟಿಂಗ್ ಕೌಚ್ ಕೇವಲ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಪ್ರತಿ ಉದ್ಯಮದಲ್ಲೂ ಮಹಿಳೆಯರ ಮೇಲೆ ಒಂದಲ್ಲ ಒಂದು ರೀತಿಯ ಕಿರುಕುಳ ನಡೆಯುತ್ತಿದೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಕೂಡ ಮಹಿಳೆಯರಲ್ಲಿ ಒಂದು ರೀತಿಯ ಅಸುರಕ್ಷಿತ ಭಾವನೆ ಇದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. 

Written by - Yashaswini V | Last Updated : Feb 25, 2025, 10:49 AM IST
  • ಶೋಷಣೆ ಎಲ್ಲೆಡೆ ಇದೆ.
  • ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಪ್ರತಿ ಕ್ಷೇತ್ರದಲ್ಲೂ ಇದೆ.
  • ನೀವು ಅದನ್ನು ಹೇಗೆ ಸ್ವೀಕರಿಸುತ್ತೀರಿ.... ನೀವು ಬಯಸಿದರೆ ರಾಜಿ ಮಾಡಿಕೊಳ್ಳಬಹುದು.
ತಿಂಗಳಲ್ಲಿ 20 ಬಾರಿ... ಕಾಸ್ಟಿಂಗ್ ಕೌಚ್ ಬಗ್ಗೆ ಖ್ಯಾತ ನಟಿಯ ಶಾಕಿಂಗ್ ಹೇಳಿಕೆ...!

Casting Couch: ಇತ್ತೀಚಿನ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹಲವು ನಟಿಯರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಹಲವು ಹಿರಿಯ ಕಲಾವಿದರೂ ಸಹ ತಮ್ಮ ಕಾಲದಲ್ಲಿ ಕೆಲಸದ ಸ್ಥಳದಲ್ಲಿ ತಾವು ಎದುರಿಸಿದ ಕಾಸ್ಟಿಂಗ್ ಕೌಚ್,  ಲೈಂಗಿಕ ಕಿರುಕುಳದಂತಹ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಇದೀಗ ಮತ್ತೊಬ್ಬ ಖ್ಯಾತ ನಟಿ, ಗಾಯಕಿ ಕಾಸ್ಟಿಂಗ್ ಕೌಚ್‌ನಿಂದ ತಾವು ಅನುಭವಿಸಿದ ಯಾತನೆ ಬಗ್ಗೆ ಮಾತನಾಡಿದ್ದಾರೆ. 

Add Zee News as a Preferred Source

ಜನಪ್ರಿಯ ಭೋಜ್‌ಪುರಿ ನಾಯಕಿ ಹಾಗೂ ಖ್ಯಾತ ಗಾಯಕಿ ಅಕ್ಷರಾ ಸಿಂಗ್ ಹೆಸರು ಕೇಳಿದರೆ ಪಡ್ಡೆ ಹೈಕಳ ಎದೆ ಬಡಿತ ಜೋರಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಸುಮಾರು 6.7ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅಕ್ಷರಾ ಸಿಂಗ್ ಸಹ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗಪಡಿಸಿದ್ದು ಅವರ ಜೀವನದ ಕಹಿ ಘಟನೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 

ಇದನ್ನೂ ಓದಿ- 'ವರ್ಜಿನಿಟಿ ಒಂದೇ ರಾತ್ರಿಯಲ್ಲಿ ಮುಗಿಯುತ್ತೆ'.. 'ಕನ್ಯತ್ವ'ದ ಬಗ್ಗೆ ಖ್ಯಾತ ನಟಿಯ ಸೆನ್ಸೇಷನಲ್‌ ಹೇಳಿಕೆ!

ಪ್ರಾಣ್ ಜೈ ಪರ್ ವಚನ್ ನಾ ಜೈ (2011), ಸತ್ಯಮೇವ ಜಯತೇ (2013), ದಿಲ್ವಾಲೆ (2014), ನಿರಾಹುವಾ ಹಿಂದೂಸ್ಥಾನಿ (2016), ಅವತಾರ್ (2017), ರಾಜಾ ರಾಣಿ (2018), ಕಸಮ್ ತೇರಾ ನಾಮ್ ಹೈ (2019), ಶುಭ್ ಘಡಿ ಆಯಾ (2021)ದಂತಹ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಅಕ್ಷರಾ ಸಿಂಗ್ ಭೋಜ್‌ಪುರಿ ಪವರ್ ಸ್ಟಾರ್ ಪವನ್ ಸಿಂಗ್ ಜೊತೆ ಸಂಬಂಧದಲ್ಲಿದ್ದರು. ಆದಾಗ್ಯೂ, ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ ಎಂಬುದು ಜಗತ್ಜಾಹೀರಾಗಿರುವ ವಿಚಾರ. ಅಕ್ಷರಾ ಸಿಂಗ್ ಸಹ ಹಲವು ಸಂದರ್ಶನಗಳಲ್ಲಿ ಪವನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ಅಕ್ಷರಾ ಸಿಂಗ್  ಭೋಜ್‌ಪುರಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ವಿಚಾರದ ಬಗ್ಗೆಯೂ ಧ್ವನಿ ಎಟ್ಟಿದ್ದಾರೆ. 

ಇದನ್ನೂ ಓದಿ- 'ವರ್ಜಿನಿಟಿ ಒಂದೇ ರಾತ್ರಿಯಲ್ಲಿ ಮುಗಿಯುತ್ತೆ'.. 'ಕನ್ಯತ್ವ'ದ ಬಗ್ಗೆ ಖ್ಯಾತ ನಟಿಯ ಸೆನ್ಸೇಷನಲ್‌ ಹೇಳಿಕೆ!
 
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಕ್ಷರಾ ಸಿಂಗ್, "ಶೋಷಣೆ ಎಲ್ಲೆಡೆ ಇದೆ. ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಪ್ರತಿ ಕ್ಷೇತ್ರದಲ್ಲೂ ಇದೆ. ಹಾಗಾಗಿ ನೀವು ಅದನ್ನು ಹೇಗೆ ಸ್ವೀಕರಿಸುತ್ತೀರಿ ಎಂಬುದು ನಿಮಗೆ ಬಿಟ್ಟದ್ದು.... ನೀವು ಬಯಸಿದರೆ ರಾಜಿ ಮಾಡಿಕೊಳ್ಳಬಹುದು. ನೀವು ಬಯಸದಿದ್ದರೆ ಜಗತ್ತಿನ ಯಾವುದೇ ಶಕ್ತಿಯಿಂದಲೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ಆದಾಗ್ಯೂ, ಬಹುತೇಕ ಜನರು ರಾಜಿ ಮಾಡಿಕೊಳ್ಳುವ ಆಯ್ಕೆಯನ್ನೇ ಆರಿಸುತ್ತಾರೆ" ಇದಕ್ಕೆ ಹಲವು ಕಾರಣಗಳಿರಬಹುದು ಎಂದು ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ದಾರೆ. 

ಪ್ರೀತಿ ಇದೆ, ರಾಜಿ ಇಲ್ಲ! 
ರಾಜಿ ಮಾಡಿಕೊಳ್ಳುವುದು ಸರಿಯೇ? ರಾಜಿ ಮಾಡಿಕೊಳ್ಳದಿದ್ದರೆ ಕೆಲಸ ಸಿಗುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಅಕ್ಷರಾ ಸಿಂಗ್, "ಇಲ್ಲಿ ಪ್ರೀತಿಯಷ್ಟೇ ನಡೆಯುತ್ತದೆ. ಯಾವುದೇ ರಾಜಿಯಲ್ಲ. ಒಬ್ಬ ವ್ಯಕ್ತಿ ಪ್ರತಿ ತಿಂಗಳು 20 ಬಾರಿ ಪ್ರೀತಿಯಲ್ಲಿ ಬೀಳುತ್ತಾನೆ. ನಾನು ಅದಕ್ಕೆ ಹೊರತಾಗಿಲ್ಲ..." ಆದರೆ, ಸಮಾಜ ಕೇವಲ ಹುಡುಗಿಯರನ್ನು ಮಾತ್ರ ತಪ್ಪು ಎಂದು ಬೊಟ್ಟು ತೋರಿಸುತ್ತದೆ. ಹುಡುಗಿಯರ ಬಗೆಗೆ ಮಾತ್ರವೇ ಕೆಟ್ಟದಾಗಿ ಮಾತನಾಡುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News