)
Akshay Kumar about daughter: ಆನ್ಲೈನ್ ವಂಚನೆ ಮತ್ತು ಸೈಬರ್ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಮಹಾರಾಷ್ಟ್ರ ರಾಜ್ಯ ಸರ್ಕಾರದ ಗೃಹ ಇಲಾಖೆ 'ಸೈಬರ್ ಜಾಗೃತಿ ಮಾಸ'ವನ್ನು ಆಚರಿಸುತ್ತಿದೆ. ಸೈಬರ್ ಅಪರಾಧಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ಮಾಧ್ಯಮದ ಮೂಲಕ ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಪೊಲೀಸ್ ಮಹಾನಿರ್ದೇಶಕಿ ರಶ್ಮಿ ಶುಕ್ಲಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇಕ್ಬಾಲ್ ಸಿಂಗ್ ಚಾಹಲ್, ನಟ ಅಕ್ಷಯ್ ಕುಮಾರ್ ಮತ್ತು ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಮಧ್ಯೆ, ಅಕ್ಷಯ್ ಕುಮಾರ್ ಆಘಾತಕಾರಿ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷಯ್ ಕುಮಾರ್, ನನಗಿಂತ ಮೊದಲು ಅನೇಕ ಜನರು ಮಾತನಾಡಿದ್ದಾರೆ. ಆದ್ದರಿಂದ ನನಗೆ ಮಾತನಾಡಲು ಏನೂ ಉಳಿದಿಲ್ಲ. ನನ್ನ ಜೀವನದಲ್ಲಿ ನಡೆದ ಒಂದು ವಿಷಯವನ್ನು ನಾನು ನಿಮಗೆ ಹೇಳಲು ಬಯಸುತ್ತೇನೆ. ನನ್ನ ಮಗಳು ತನ್ನ ಮೊಬೈಲ್ನಲ್ಲಿ ಆನ್ಲೈನ್ ಆಟ ಆಡುತ್ತಿದ್ದಳು...
ಆಗ ಕೆಲವರು ಆಕೆಗೆ ಅದ್ಭುತ, ನೀವು ಚೆನ್ನಾಗಿ ಆಡಿದ್ದೀರಿ.. ಅಂತ ಇತ್ಯಾದಿ ಸಂದೇಶಗಳನ್ನು ಕಳುಹಿಸಿದರು. ಈ ಪೈಕಿ ಸಂದೇಶವೊಂದರಲ್ಲಿ, ನೀವು ಪುರುಷನೋ ಅಥವಾ ಮಹಿಳೆಯೋ? ಕೇಳಿದರು, ಇನ್ನೊಂದು ಕಡೆಯಿಂದ ಒಂದು ಸಂದೇಶ ಬಂದಿತು, ನಗ್ನ ಫೋಟೋ ಕಳುಹಿಸಿ. ಆಗ ಅವಳು ಫೋನ್ ಕಟ್ ಮಾಡಿ ನನ್ನ ಹೆಂಡತಿಗೆ ಹೇಳಿದಳು. ಇದೆಲ್ಲವೂ ಪ್ರಾರಂಭವಾಗುವುದು ಇಲ್ಲಿಂದ. ಸೈಬರ್ ಅಪರಾಧ ಪ್ರಾರಂಭವಾಗುವುದು ಇಲ್ಲಿಂದ.. ಎಂದು ಘಟನೆಯನ್ನು ಬಿಚ್ಚಿಟ್ಟರು.
ಮುಖ್ಯಮಂತ್ರಿಗಳು ಇಲ್ಲಿ ಕುಳಿತಿದ್ದಾರೆ. ನಾವು ಶಾಲೆಯಲ್ಲಿ ಇತಿಹಾಸ, ಭೂಗೋಳ ಮತ್ತು ಗಣಿತವನ್ನು ಅಧ್ಯಯನ ಮಾಡುತ್ತೇವೆ. ಆದರೆ, ಸೈಬರ್ಸ್ಪೇಸ್ಗೆ ಹೋದಾಗ, ನಮಗೆ ಏನೂ ತಿಳಿದಿರುವುದಿಲ್ಲ. 7 ರಿಂದ 10 ನೇ ತರಗತಿಯವರೆಗಿನ ಶಾಲೆಗಳಲ್ಲಿ ಒಂದು ಗಂಟೆ ಸೈಬರ್ಸ್ಪೇಸ್ಗೆ ಮೀಸಲಿಡಬೇಕು ಎಂಬುದು ನನ್ನ ವಿನಂತಿ. ಏಕೆಂದರೆ, ಬೀದಿ ಅಪರಾಧಗಳಿಗಿಂತ ಸೈಬರ್ ಅಪರಾಧ ಹೆಚ್ಚಾಗಿದೆ ಎಂದು ಅಕ್ಷಯ್ ವಿನಂತಿಸಿದರು.