close

News WrapGet Handpicked Stories from our editors directly to your mailbox

Video: ರಿಯಾಲಿಟಿ ಷೋನಲ್ಲಿ ಪ್ರಜ್ಞೆ ತಪ್ಪಿದ ವ್ಯಕ್ತಿ ನೆರವಿಗೆ ಧಾವಿಸಿದ ನಟ ಅಕ್ಷಯ್ ಕುಮಾರ್..!

ಬಾಲಿವುಡ್ ತಾರೆ ಅಕ್ಷಯ್ ಕುಮಾರ್, ತಮ್ಮ ಚಲನಚಿತ್ರಗಳಲ್ಲಿ ಅದ್ಬುತ ಸಾಹಸಗಳಿಗೆ ಹೆಸರು ವಾಸಿಯಾಗಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋ ಮೂವೀಸ್ ಮಾಸ್ತಿ ಚಿತ್ರದ ಸೆಟ್‌ನಲ್ಲಿ ಅಭಿನಯಿಸುವಾಗ ಪ್ರಜ್ಞೆ ತಪ್ಪಿದ ಸಿಬ್ಬಂದಿಯನ್ನು ರಕ್ಷಿಸಲು ಧಾವಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Updated: Oct 5, 2019 , 12:19 PM IST
Video: ರಿಯಾಲಿಟಿ ಷೋನಲ್ಲಿ ಪ್ರಜ್ಞೆ ತಪ್ಪಿದ ವ್ಯಕ್ತಿ ನೆರವಿಗೆ ಧಾವಿಸಿದ ನಟ ಅಕ್ಷಯ್ ಕುಮಾರ್..!
Photo courtesy: Instagram

ಮುಂಬೈ: ಬಾಲಿವುಡ್ ತಾರೆ ಅಕ್ಷಯ್ ಕುಮಾರ್, ತಮ್ಮ ಚಲನಚಿತ್ರಗಳಲ್ಲಿ ಅದ್ಬುತ ಸಾಹಸಗಳಿಗೆ ಹೆಸರು ವಾಸಿಯಾಗಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋ ಮೂವೀಸ್ ಮಾಸ್ತಿ ಚಿತ್ರದ ಸೆಟ್‌ನಲ್ಲಿ ಅಭಿನಯಿಸುವಾಗ ಪ್ರಜ್ಞೆ ತಪ್ಪಿದ ಸಿಬ್ಬಂದಿಯನ್ನು ರಕ್ಷಿಸಲು ಧಾವಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮುಂಬೈ ಮೂಲದ ಛಾಯಾಗ್ರಾಹಕ ವೈರಲ್ ಭಯಾನಿ ಹಂಚಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪ್ರಜ್ನಾಹಿನ ಸ್ಥಿತಿ ತಲುಪಿದ ಅಲಿಅಸ್ಗರ್ ಅವರಿಗೆ ಸಹಾಯ ಮಾಡಲು ಧಾವಿಸಿದರು. ಅಕ್ಷಯ್ ಕುಮಾರ್ ತಮ್ಮ ಮುಂಬರುವ ಚಿತ್ರ ಹೌಸ್‌ಫುಲ್ 4 ಅನ್ನು ಪ್ರಚಾರ ಮಾಡಲು ಆಗಮಿಸಿದ್ದರು. 

ವೈರಲ್ ಭವಾನಿ ಈಗ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು 'ಮನೇಶ್ ಪಾಲ್ ಅವರ ಹೊಸ ಶೋಮೂವಿ ಮಾಸ್ತಿ ಚಿತ್ರದ ಸೆಟ್ಗಳಲ್ಲಿ ತನ್ನ ಮುಂಬರುವ ಚಲನಚಿತ್ರವನ್ನು ಪ್ರಚಾರ ಮಾಡುವಾಗ ಪ್ರಜ್ಞೆ ತಪ್ಪಿದ ಕಲಾವಿದನನ್ನು ರಕ್ಷಿಸಲು ಅಕ್ಷಯ್ ಕುಮಾರ್ ಸಹಾಯ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಅಕ್ಷಯ್ ಕುಮಾರ್ ಒಬ್ಬ ನಿಜವಾದ ಹಿರೋ ಎಂದು ಅವರು ಬರೆದುಕೊಂಡಿದ್ದಾರೆ.