Allu Arjun arrest updates : ಪುಷ್ಪಾ 2 ಪ್ರಿಮಿಯರ್‌ ಶೋ ವೇಳೆ ಹೈದ್ರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ಉಂಟಾಗಿ ಓರ್ವ ಮಹಿಳೆ ಮೃತ ಪಟ್ಟಿದ್ದಳು.. ಇದಕ್ಕೆ ಥಿಯೇಟರ್‌ ಮಾಲೀಕ ಸೇರಿದಂತೆ ನಟ ಅಲ್ಲು ಅರ್ಜುನ್‌ ಹೊಣೆ ಎಂದು ದೂರು ದಾಖಲಾಗಿತ್ತು.. ಪ್ರಕರಣದಲ್ಲಿ ಇಂದು ಅಲ್ಲು ಅರ್ಜುನ್‌ ಬಂಧನವಾಗಿ, ಇದೀಗ ಜಾಮೀನು ಪಡೆದು ಹೊರ ಬಂದಿದ್ದಾರೆ.. ಇದರ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಒಂದು ಸದ್ದು ಮಾಡುತ್ತಿದೆ..


COMMERCIAL BREAK
SCROLL TO CONTINUE READING

ಹೌದು.. ಡಿಸೆಂಬರ್‌ 5 ರಂದು ತೆರೆಕಂಡ ಪುಷ್ಪಾ ಸಿನಿಮಾ ದೇಶಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 1000 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿದೆ. ಇನ್ನು ರಿಲೀಸ್‌ಗೂ ಹಿಂದಿನ ದಿನ ಪುಷ್ಪಾ ಪ್ರೀಮಿಯರ್‌ ಶೋ ಮಾಡಲಾಗಿತ್ತು. ಈ ವೇಳೆ ಅಲ್ಲು ಅರ್ಜುನ್‌ ಸಿನಿ ಚಿತ್ರ ವೀಕ್ಷಣೆಗಾಗಿ ಸಂಧ್ಯಾ ಚಿತ್ರಮಂದಿರಕ್ಕೆ ಬಂದಿದ್ದರು.


ಇದನ್ನೂ ಓದಿ:ಅಲ್ಲು ಅರ್ಜುನ್‌ಗೆ 14 ದಿನ ನ್ಯಾಯಾಂಗ ಬಂಧನ..! ಜೈಲಿನ ಕಂಬಿಹಿಂದೆ "ಪುಷ್ಪರಾಜ್‌"...


ನೆಚ್ಚಿನ ನಟನನ್ನು ನೋಡಲು ಥಿಯೇಟರ್‌ ಬಳಿ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು. ಈ ವೇಳೆ ಕಾಲ್ತುಳಿತ ಉಂಟಾಗಿ ಓರ್ವ ಮಹಿಳೆ ಮೃತ ಪಟ್ಟಿದ್ದಳು. ಅಲ್ಲದೆ ಈಕೆಯ ಮಗು ಗಂಭೀರವಾಗಿ ಗಾಯಗೊಂಡು ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ಕುರಿತು ದೂರು ದಾಖಲಾಗಿತ್ತು.


ಹೈದರಾಬಾದ್‌ನಲ್ಲಿ ಬಂಧನಕ್ಕೊಳಗಾದ ನಟ ಅಲ್ಲು ಅರ್ಜುನ್‌ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?


ಆಗ ಅಲ್ಲಿದ್ದವರು ಹೆಸರು ಹೇಳಲು ಯತ್ನಿಸಿದಾಗ, Sorry.. ಮಾತನಾಡಿ ಮಾತನಾಡಿ ಗಂಟಲು ಒಣಗಿ ಹೋಗಿದೆ.. ಅಂತ ನೀರು ತರಿಸಿ ಕುಡಿಯುತ್ತಾರೆ.. ಆಗ ಮುಖ್ಯಮಂತ್ರಿಯ ಹೆಸರು ಮರೆತಿರುವುದಾಗಿ ಮೆಲ್ಲಗೆ ಅಲ್ಲಿದ್ದವರಿಗೆ ಹೇಳುತ್ತಾರೆ. ಸಧ್ಯ ಈ ವಿಡಿಯೋ ವೈರಲ್‌ ಆಗಿದ್ದು, ಅಲ್ಲು ಅರ್ಜುನ್‌ ಸಿಎಂ ಹೆಸರು ಹೇಳಿಲ್ಲ ಅಂತ ಈ ಪ್ರಕರಣಕ್ಕೆ ಜೀವ ತುಂಬಿ ಬಂಧನ ಮಾಡಿಸಿದ್ದಾರೆ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ..


ಆದರೆ ಈ ಕುರಿತು ಈಗಾಗಲೇ ಸ್ಪಷ್ಟತೆ ನೀಡಿರುವ ಸಿಎಂ ರೇವಂತ್‌ ರೆಡ್ಡಿ, ಈ ಪ್ರಕರಣಕ್ಕೂ ತಮಗೂ ಯಾವುದೇ ಲಿಂಕ್‌ ಇಲ್ಲ ಎಂದಿದ್ದಾರೆ.. ಅಲ್ಲದೆ, ನ್ಯಾಯಾಲಯ ಮತ್ತು ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದ್ದಾರೆ.. ಒಟ್ಟಾರೆಯಾಗಿ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ.. ಅಲ್ಲು ಅರ್ಜುನ್‌ ಮತ್ತು ನೆಟ್ಟಿಗರು ಮಾತ್ರ... ಎಲ್ಲದಕ್ಕೂ ಸಿಎಂ ಕಾರಣ ಅಂತ ಟೀಕೆ ಮಾಡುತ್ತಿದ್ದಾರೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.