Pushpa 2 shooting updates: ಅಲ್ಲು ಅರ್ಜುನ್‌ ಅಭಿನಯದ ಪುಷ್ಪ ಚಿತ್ರ ಹುಟ್ಟು ಹಾಕಿದ ಕ್ರೇಜ್ ಅಷ್ಟಿಷ್ಟಲ್ಲ. ಪುಷ್ಪ ಡೈಲಾಗ್‌ಗಳು, ಮ್ಯಾನರಿಸಂ, ಹಾಡುಗಳು ಸಿನಿ ಪ್ರಿಯರ ಮನಗೆದ್ದಿವೆ. ಪುಷ್ಪ 1 ಬಿಡುಗಡೆಯಾದಾಗ ದೇಶಾದ್ಯಂತ ಮೇನಿಯಾ ಹಬ್ಬಿತ್ತು. ಈಗ ಪುಷ್ಪ 2 ಚಿತ್ರಕ್ಕೆ ಇನ್ನಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.


COMMERCIAL BREAK
SCROLL TO CONTINUE READING

ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಟನಾಗಿ ಕ್ರೇಜ್ ಗಳಿಸಿದರು. ಮಾಸ್ ಲುಕ್‌ನಲ್ಲಿ ಅದ್ಭುತ ಅಭಿನಯದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈಗ ಇಡೀ ರಾಷ್ಟ್ರವೇ ಪುಷ್ಪ 2 ಚಿತ್ರಕ್ಕಾಗಿ ಕಾಯುತ್ತಿದೆ. ಪುಷ್ಪ 1 ಬಾಕ್ಸ್ ಆಫೀಸ್ ನಲ್ಲಿ ಭಾರೀ ಕಲೆಕ್ಷನ್ ಮಾಡಿದೆ. ಈಗ ಎಲ್ಲರ ಕಣ್ಣು ಪುಷ್ಪ 2 ಚಿತ್ರದತ್ತ ನೆಟ್ಟಿದೆ. ಪುಷ್ಪ 2 ಸೀಕ್ವೆಲ್‌ಗಾಗಿ ಎಲ್ಲರೂ ಕಾಯುತ್ತಿದ್ದಾರೆ.


ಇದನ್ನೂ ಓದಿ: Sadhu Kokila: ನಟ ಸಾಧು ಹೆಸರಿಗೆ ʻಕೋಕಿಲʼ ಪದ ಸೇರಿದ್ದು ಹೇಗೆ ಗೊತ್ತಾ?


ಪುಷ್ಪ 2 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರೀಕರಣ ಬಹುತೇಕ ಮುಗಿದಿದೆ. ಇನ್ನು ಉಳಿದಿರುವುದು ಕ್ಲೈಮ್ಯಾಕ್ಸ್ ದೃಶ್ಯ ಮಾತ್ರ ಎಂದು ಹೇಳಲಾಗಿದೆ. ಕ್ಲೈಮ್ಯಾಕ್ಸ್ ಗಾಗಿ ಅದ್ಧೂರಿ ಸೆಟ್ಟಿಂಗ್ಸ್ ಹಾಕಲಾಗುತ್ತಿದೆಯಂತೆ. ಕ್ಲೈಮ್ಯಾಕ್ಸ್ ದೃಶ್ಯ ನಿರೀಕ್ಷೆಗೂ ಮೀರಿ ಇರಲಿದೆ ಎನ್ನಲಾಗಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗವು ಹೈಲೈಟ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ದೃಶ್ಯಗಳು, ಸಂಭಾಷಣೆಗಳು ಎಲ್ಲವೂ ಇದಕ್ಕೆ ಹೊಂದಿಕೆಯಾಗುತ್ತವೆ. ನಿರ್ದೇಶಕ ಸುಕುಮಾರ್ ಅವರು ಪುಷ್ಪ 2 ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟಿದ್ದಾರೆ. ಪುಷ್ಪ ಎರಡನೇ ಭಾಗದಲ್ಲಿ ಹಳೆಯ ಪಾತ್ರಗಳ ಜತೆಗೆ ಹೊಸ ಪಾತ್ರಗಳನ್ನೂ ಪರಿಚಯಿಸಲಾಗುವುದು.


ಪುಷ್ಪ 2 ಚಿತ್ರದ ಪ್ರಮುಖ ದೃಶ್ಯ ಇದೀಗ ವೈರಲ್ ಆಗುತ್ತಿದೆ. ಪುಷ್ಪಾ 2 ರಲ್ಲಿ ರಶ್ಮಿಕಾ ಸಾವು ಮತ್ತು ಸಾವಿನ ರಹಸ್ಯ ಎರಡನ್ನೂ ಹೊಂದಿದೆಯಂತೆ. ಪುಷ್ಪ 2 ಚಿತ್ರವು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಈ ಸಿನಿಮಾಗಿದೆ.


ಇದನ್ನೂ ಓದಿ: Mahesh Babu Workout: ಜಿಮ್‌ನಲ್ಲಿ ಮಹೇಶ್ ಬಾಬು ವರ್ಕೌಟ್ ನೋಡಿ ಬೆರಗಾದ ಫ್ಯಾನ್ಸ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.