ನನಗೆ ಆಗ 17 ವರ್ಷ ವಯಸ್ಸು.. ಆತ ಹೇಳಿದಂತೆ ಮಾಡಿದೆ, ಅಪ್ಪ ನೋಡಿ ಬೇಸರವಾಗಿದ್ರು: ನಟಿ ಅಮಲಾ ಪೌಲ್

Amala Paul controversy: ನನಗೆ ಆಗ 17 ವರ್ಷ ವಯಸ್ಸು ಅಷ್ಟೇ. ನಿರ್ದೇಶಕರು ಹೇಳಿದಂತೆ ಕೇಳಿದೆ. ಬಳಿಕ ತಪ್ಪಿನ ಅರಿವಾಯಿತು ಎಂದು ನಟಿ ಅಮಲಾ ಪೌಲ್ ಹೇಳಿದ್ದಾರೆ. 

Written by - Chetana Devarmani | Last Updated : Apr 3, 2025, 07:30 AM IST
  • ಆಗ ನಂಗೆ 17 ವರ್ಷ ವಯಸ್ಸು
  • ಆತ ಹೇಳ್ದಂಗೆ ಕೇಳ್ದೆ, ಅಪ್ಪ ಬೇಸರಗೊಂಡಿದ್ರು
  • ನಟಿ ಅಮಲಾ ಪೌಲ್ ಹೇಳಿಕೆ
ನನಗೆ ಆಗ 17 ವರ್ಷ ವಯಸ್ಸು.. ಆತ ಹೇಳಿದಂತೆ ಮಾಡಿದೆ, ಅಪ್ಪ ನೋಡಿ ಬೇಸರವಾಗಿದ್ರು: ನಟಿ ಅಮಲಾ ಪೌಲ್
ಅಮಲಾ ಪೌಲ್

ನಟಿ ಅಮಲಾ ಪೌಲ್ ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ನಟಿಸಿ ಖ್ಯಾತಿ ಪಡೆದವರು. ಗೆಲುವು ಮತ್ತು ಸವಾಲುಗಳಿಂದ ತುಂಬಿದ ಸಿನಿ ಪ್ರಯಾಣವನ್ನು ಅಮಲಾ ಪೌಲ್ ಅನುಭವಿಸಿದ್ದಾರೆ. ಕಳೆದ 15 ವರ್ಷಗಳ ಸಿನಿರಂಗದಲ್ಲಿನ ತಮ್ಮ ಅನುಭವದ ಬಗ್ಗೆ  ಅಮಲಾ ಪೌಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.   

Add Zee News as a Preferred Source

ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಅಮಲಾ ಉದ್ಯಮದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ನಟಿಯಾಗಿ ಮಾತ್ರವಲ್ಲದೇ  ಅಮಲಾ ಪೌಲ್ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.  

ಅಮಲಾ ಪೌಲ್ ಅವರ ವೃತ್ತಿಜೀವನದ ಅತ್ಯಂತ ಕಷ್ಟಕರವಾದ ಅಧ್ಯಾಯಗಳಲ್ಲಿ ಒಂದು ಸಿಂಧು ಸಮವೇಲಿ ಸಿನಿಮಾ. ಈ ಸಿನಿಮಾ ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣವಾಗಿತ್ತು.  ಅಮಲಾ ಪೌಲ್ ಬೋಲ್ಡ್‌ ಪಾತ್ರವನ್ನು ನಿರ್ವಹಿಸಿದ ಈ ಚಿತ್ರವು ಗಮನಾರ್ಹವಾದ ಹಿನ್ನಡೆಯನ್ನು ಉಂಟುಮಾಡಿತು. ಇದು ಅವರ ವೈಯಕ್ತಿಕ ಜೀವನ ಮತ್ತು ಆರಂಭಿಕ ವೃತ್ತಿಜೀವನ ಎರಡರ ಮೇಲೂ ಪರಿಣಾಮ ಬೀರಿತು. 

ಇದನ್ನೂ ಓದಿ: ʼನಾಗ ಚೈತನ್ಯ ತುಂಬಾ ರೊಮ್ಯಾಂಟಿಕ್.. ಎರಡು ಗಂಟೆಗಳ ಕಾಲ ಬರೀ ಅದನ್ನೇ ಮಾಡ್ತಾರೆʼ.. ಪತ್ನಿ ಶೋಭಿತಾ ಶಾಕಿಂಗ್‌ ಹೇಳಿಕೆ!

ನಟಿ ಅಮಲಾ ಪೌಲ್ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ನಟಿಸಿದ ಸಿಂಧು ಸಮವೇಲಿ ಸಿನಿಮಾ ಬಗ್ಗೆ ಮೌನ ಮುರಿದಿದ್ದಾರೆ. "ನಾನು ಅಂದು ಆ ಸಿನಿಮಾದಲ್ಲಿ ನಟಿಸಿ ತಪ್ಪು ಮಾಡಿದೆ. ನನಗೆ ಆಗ 17 ವರ್ಷ ವಯಸ್ಸು ಅಷ್ಟೇ. ನಿರ್ದೇಶಕರು ಹೇಳಿದಂತೆ ಕೇಳಿದೆ. ಬಳಿಕ ತಪ್ಪಿನ ಅರಿವಾಯಿತು ಎಂದು ಮಾತೃಭೂಮಿ ಚಾನಲ್‌ ಸಂದರ್ಶನದಲ್ಲಿ ನಟಿ ಅಮಲಾ ಪೌಲ್‌ ಮಾತನಾಡಿದ್ದಾರೆ.  

"ಅದರ ನಂತರ ನಾವು ಅಂತಹ ಪಾತ್ರವನ್ನು ಮಾಡಬಾರದು. ಅದು ಕೆಟ್ಟದು ಅಥವಾ ಅದು ನಮ್ಮ ಸಮಾಜವು ಸ್ವೀಕರಿಸುವ ವಿಷಯವಲ್ಲ ಎಂದು ನಮಗೆ ಅರಿವಾಯಿತು. ನಾವು ಕಲಿಯುವುದು ಹೀಗೆಯೇ" ಎಂದು ಅಮಲಾ ಹೇಳಿದ್ದಾರೆ. 

ಚಿತ್ರ ಬಿಡುಗಡೆಯಾಗಿ ನೆಗೆಟಿವ್ ಕಾಮೆಂಟ್ ಬಂದಾಗ ತುಂಬಾ ಹೆದರಿದ್ದೆ. ನನ್ನ ಅಪ್ಪ ಕೂಡ ಸಿನಿಮಾ ನೋಡಿ ಬೇಸರಗೊಂಡಿದ್ದರು. ಈ ಸಿನಿಮಾ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಿತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆಯಾದ 4 ತಿಂಗಳಲ್ಲೇ ಶಾಕಿಂಗ್‌ ನ್ಯೂಸ್‌ ಕೊಟ್ಟ ಅಕ್ಕಿನೇನಿ ಸೊಸೆ ಶೋಭಿತಾ ಧೂಳಿಪಾಲ! ಏನದು?

ಸಿಂಧು ಸಮವೇಲಿ ಸಿನಿಮಾ ಮಾಡುವಾಗ ಅಮಲಾ ಕೇವಲ 17 ವಯಸ್ಸಿನವಳಾಗಿದ್ದರು. ನಿರ್ದೇಶಕರ ಸೂಚನೆಗಳನ್ನು ಅನುಸರಿಸಿದರು. ತನ್ನ ಪಾತ್ರದ ಸಾಮಾಜಿಕ ಪರಿಣಾಮವನ್ನು ಸಂಪೂರ್ಣವಾಗಿ ಅರಿತುಕೊಳ್ಳಲಿಲ್ಲ. ತನ್ನ ಮಾವನೊಂದಿಗಿನ ಅಕ್ರಮ ಸಂಬಂಧದಲ್ಲಿ ಭಾಗಿಯಾಗಿರುವ ಸುಂದರಿ ಪಾತ್ರವನ್ನು ಅಮಲಾ ಈ ಸಿನಿಮಾದಲ್ಲಿ ಮಾಡಿದ್ದರು. ಆದರೆ ಈ ಸಿನಿಮಾ ರಿಲೀಸ್‌ ಆದ ಬಳಿಕ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News