'ಅಂಬಿ' ಇಲ್ಲದ ಎರಡನೇ ವಿವಾಹ ವಾರ್ಷಿಕೋತ್ಸವ; ಸುಮಲತಾ ಹೇಳಿದ್ದೇನು?

ಪ್ರತಿ ವರ್ಷ ಈ ದಿನವನ್ನು ಅಂಬರೀಶ್ ಅವರೊಂದಿಗೆ ಸಂಭ್ರಮಿಸುತ್ತಿದ್ದ ಸುಮಲತಾ ಅವರ ಮುಂದೆ ಅಂಬರೀಶ್ ಇಲ್ಲದ ಎರಡನೇ ವಾರ್ಷಿಕೋತ್ಸವ.

Yashaswini V Yashaswini V | Updated: Dec 8, 2019 , 12:33 PM IST
'ಅಂಬಿ' ಇಲ್ಲದ ಎರಡನೇ ವಿವಾಹ ವಾರ್ಷಿಕೋತ್ಸವ; ಸುಮಲತಾ ಹೇಳಿದ್ದೇನು?
Photo courtesy: Facebook video grab

ಬೆಂಗಳೂರು: ಇಂದು ಚಂದನವನದ ಚಂದದ ಜೋಡಿ ರೆಬೆಲ್ ಸ್ಟಾರ್ ಅಂಬರೀಶ್(Ambareesh) ಮತ್ತು ಸುಮಲತಾ ಅಂಬರೀಶ್(Sumalatha Ambareesh) ದಂಪತಿಯ 28ನೇ ವಿವಾಹವಾರ್ಷಿಕೋತ್ಸವ. ಈ ದಂಪತಿ ಪ್ರೇಮಿಗಳಿಗೆ ಒಂದು ಮಾದರಿ ಜೋಡಿಯಂತಿದ್ದರು. ಪ್ರತಿ ವರ್ಷ ಈ ದಿನವನ್ನು ಅಂಬರೀಶ್ ಅವರೊಂದಿಗೆ ಸಂಭ್ರಮಿಸುತ್ತಿದ್ದ ಸುಮಲತಾ ಅವರ ಮುಂದೆ ಅಂಬರೀಶ್ ಇಲ್ಲದ ಎರಡನೇ ವಾರ್ಷಿಕೋತ್ಸವ. 'ಅಂಬಿ' ಇಲ್ಲದ ಮದುವೆ ವಾರ್ಷಿಕೋತ್ಸವದಂದು ಅವರೊಂದಿಗಿನ ಸವಿ ನೆನಪುಗಳನ್ನು ಸುಮಲತಾ ಅಂಬರೀಶ್ ಕೆಲ ಚಿತ್ರಗಳು ಮತ್ತು ಹಾಡಿನ ಮೂಲಕ ಮೆಲುಕುಹಾಕಿದ್ದಾರೆ.

ಸುಮಲತಾ ಅಂಬರೀಶ್ ಅವರೊಂದಿಗೆ ನಟಿಸಿದ ಕೆಲ ಚಿತ್ರಗಳ ಹಾಡು, ಜೊತೆಗೆ ಪೋಟೋ ಕೊಲಾಜ್ ಮಾಡಿ ಅದನ್ನು ಹಿಂದಿ ಗೀತೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

"ಡಿಸೆಂಬರ್ 8, 1991 ..  28 ವರ್ಷಗಳು .. ನಗು, ಅಳು, ಸಂತೋಷ, ಪ್ರೀತಿ, ಕಾಳಜಿ 28 ವರ್ಷಗಳು ಅಂದರೆ ಪ್ರೀತಿ... ಪ್ರೀತಿ...ಪ್ರೀತಿ... ನಿಮಗೆ ತಿಳಿದಿದೆ ಸದಾ ಪ್ರೀತಿಸುವೆ" ಎಂದು ಸುಮಲತಾ ಬರೆದುಕೊಂಡಿದ್ದಾರೆ.

"ನನ್ನ  ಪ್ರೀತಿಯ A ..ಡಿಸೆಂಬರ್ 8 ... 27 ವರ್ಷಗಳಲ್ಲಿ ಮೊದಲ ಬಾರಿಗೆ ನೀವು ಈ ದಿನದಂದು ನನ್ನ ಪಕ್ಕದಲ್ಲಿಲ್ಲ .. ನಮ್ಮ ದಿನ .. ನೀವು ನನ್ನ ಪ್ರಪಂಚದ ಕೇಂದ್ರವಾಗಿರಲಿಲ್ಲ .. ನೀವೇ ನನ್ನ ವಿಶ್ವವಾಗಿದ್ದಿರಿ ಎಂದು ಕಳೆದ ವರ್ಷ ಅಂಬಿ ಜೊತೆಗಿನ ಸುಮಧುರ ಕ್ಷಣಗಳನ್ನು ಹಂಚಿಕೊಂಡಿದ್ದ ಸುಮಲತಾ .. ನೀವು ನನ್ನನ್ನು ಪ್ರೀತಿಸಿದಾಗ ಜೀವನ ಪ್ರಾರಂಭವಾಯಿತು, ನೀವು ಮುಗುಳ ನಕ್ಕಾಗ ಹೊಳೆಯುತ್ತಿತ್ತು. ನಿಮಗೆ ನನ್ನ ಮೇಲಿದ್ದ ಪ್ರೀತಿಯನ್ನು ಮರೆಮಾಡಲು ಸಾಧ್ಯವಿಲ್ಲ. ಚಳಿಗಾಲದಲ್ಲಿ ಬೆಚ್ಚನೆಯ ಕಂಬಳಿಯ ಹಾಗೆ ಬೇಸಿಗೆ ಮತ್ತು ಮಳೆಯ ವೇಳೆ ಕೊಡೆಯ ಹಾಗೆ ನನ್ನನ್ನು ರಕ್ಷಿಸಿ ಇಟ್ಟಿದ್ದಿರಿ ಎಂದು ಬರೆದಿದ್ದರು.