Vijay Varma-Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಬೇರ್ಪಟ್ಟಿದ್ದಾರೆ ಎನ್ನಲಾಗ್ತಿದೆ.. ಕೊನೆಗೂ ಈ ಹಾಟ್ ಜೋಡಿಯ ಪ್ರೇಮಕಥೆ ಕೊನೆಗೊಂಡಿದೆ ಎಂದು ವರದಿಯಾಗಿದೆ.. ಆದರೆ, ಈಗ ಬ್ರೇಕಪ್ ಆಗಿರುವ ಈ ನಟಿಯ ಹೆಸರಿನ ಜೊತೆಗೆ ಸ್ಟಾರ್ ಕ್ರಿಕೆಟಿಗರೊಬ್ಬರ ಹೆಸರು ಸೇರ್ಪಡೆಯಾಗುತ್ತಿದೆ. ಈ ಹಿಂದೆ ಬಾಲಿವುಡ್ ನಟಿ ತಮನ್ನಾ ಕ್ರಿಕೆಟಿಗ ಜೊತೆ ಬಹಳ ದಿನಗಳಿಂದ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿತ್ತು.. ಜಾಹೀರಾತು ಚಿತ್ರೀಕರಣದ ಸಮಯದಲ್ಲಿ ತಮನ್ನಾ ಕೊಹ್ಲಿ ಜೊತೆ ಸಂಬಂಧ ಹೊಂದಿದ್ದರು ಎಂಬ ವರದಿಗಳು ಬಂದವು. ಅದೇ ವದಂತಿಗಳು ಈಗ ಮತ್ತೇ ಹರಿದಾಡುತ್ತಿವೆ.
ವಿಜಯ್-ತಮನ್ನಾ 2022 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.. ಅವರು ಪರಸ್ಪರ ಮದುವೆಯಾಗುವುದಾಗಿಯೂ ಹೇಳಿದ್ದರು. ಈಗ ಈ ಸುಂದರ ಜೋಡಿ ಮದುವೆಯಾಗುತ್ತಿಲ್ಲ ಎಂದು ತಿಳಿದುಬಂದಿದೆ. ಈ ಹಿಂದೆ ಕೆಲವೊಮ್ಮೆ ತಮನ್ನಾ ಹೆಸರು ವಿರಾಟ್ ಕೊಹ್ಲಿ ಜೊತೆ ಸಂಬಂಧ ಹೊಂದಿದ್ದರೆ, ಕೆಲವೊಮ್ಮೆ ಪಾಕಿಸ್ತಾನಿ ತಾರೆ ಅಬ್ದುಲ್ ರಜಾಕ್ ಜೊತೆ ತಳುಕುಹಾಕಿಕೊಂಡಿತ್ತು.. ಆದರೆ, ತಮನ್ನಾ ಅದನ್ನು ನಿರಾಕರಿಸಿದ್ದರು. ನಾನು ಅವರೊಂದಿಗಿನ ಸಂಬಂಧದ ವದಂತಿಗಳನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದ್ದರು.. ಇದೀಗ ಆ ವದಂತಿಗಳು ಮತ್ತೇ ವೇಗ ಪಡೆದುಕೊಂಡಿವೆ.. ಆದರೆ ಅವುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ..
ಇತ್ತೀಚೆಗೆ "ಆಜ್ ಕಿ ರಾತ್" ಹಾಡಿನಿಂದ ಸೂಪರ್ ಸ್ಟಾರ್ ಆದ ತಮನ್ನಾ ವಿಜಯ್ ವರ್ಮಾ ಅವರನ್ನು ಮದುವೆಯಾಗಲಿದ್ದಾರೆ ಎಂಬ ವರದಿಗಳಿದ್ದವು. ಆದರೆ, ಕಳೆದ ಕೆಲವು ದಿನಗಳಿಂದ ಈ ಜೋಡಿ ಬೇರ್ಪಟ್ಟಿದೆ ಎಂಬ ವರದಿಗಳು ಬಂದಿವೆ. ಮಾಹಿತಿಯ ಪ್ರಕಾರ 'ಲಸ್ಟ್ ಸ್ಟೋರೀಸ್ 2' ನಟ ಕೆಲವು ವಾರಗಳ ಹಿಂದೆ ತಮನ್ನಾ ಅವರಿಂದ ಬೇರ್ಪಟ್ಟಿದ್ದಾರೆ ಎನ್ನಲಾಗುತ್ತಿದ್ದು, ಅವರು ಇನ್ನು ಮುಂದೆ ಪ್ರೀತಿಯಲ್ಲಿಲ್ಲದಿದ್ದರೂ, ಶಾಶ್ವತವಾಗಿ ಉತ್ತಮ ಸ್ನೇಹಿತರಾಗಿ ಇರುತ್ತಾರೆ ಎಂದು ವರದಿಯಾಗಿದೆ..
ತಮನ್ನಾ ಮತ್ತು ವಿಜಯ್ ತಮ್ಮ ಬ್ರೇಕಪ್ ಸುದ್ದಿಯ ಬಗ್ಗೆ ಇನ್ನೂ ಮಾತನಾಡಿಲ್ಲ. ಆದಾಗ್ಯೂ, ಬಿ-ಟೌನ್‌ನಲ್ಲಿ ಕೇಳಿಬರುತ್ತಿರುವ ಊಹಾಪೋಹಗಳ ಪ್ರಕಾರ ಅವರು ಪ್ರತ್ಯೇಕವಾಗಿ ಉಳಿಯಲು ನಿರ್ಧರಿಸಿದ್ದಾರೆ. ನಟ ವಿಜಯ್ ವರ್ಮಾ ತಮ್ಮ ಸಂಬಂಧ ಮುರಿದುಬಿದ್ದ ಬಗ್ಗೆ ಮಾತನಾಡಿದ್ದಾರೆ ಎಂಬ ವರದಿಗಳಿವೆ. ತಮನ್ನಾ ಬೇರೊಬ್ಬನನ್ನು ಮದುವೆಯಾಗಲು ಬಯಸುತ್ತಾಳೆ, ಅದಕ್ಕಾಗಿಯೇ ಅವಳು ವಿಜಯ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾಳೆ ಎಂಬ ಮಾತು ಕೂಡ ಇದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ









