Aishwarya Rai Abhishek Bachchan Divorce Rumours: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಿಂದಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ‘ಕೌನ್ ಬನೇಗಾ ಕರೋಡ್ ಪತಿ’ ಷೋನ 16ನೇ ಸಂಚಿಕೆ ನಡೆಸಿಕೊಡುತ್ತಿದ್ದಾರೆ. ಅಮಿತಾಬ್ ಬಚ್ಚನ್ ಕಾರ್ಯಕ್ರಮ ನಡೆಸಿಕೊಡುವ ರೀತಿಗೆ ಜನ ಫಿದಾ ಆಗಿದ್ದಾರೆ. ಕಾರ್ಯಕ್ರಮದ ಮಧ್ಯೆ ಅವರು ಕೆಲವು ಕುತೂಹಲಕಾರಿ ಸಂಗತಿಗಳನ್ನು ಹೇಳುವುದು ಬಹಳ ಜನಕ್ಕೆ ಮೆಚ್ಚುಗೆಯಾಗಿದೆ. ಈ ಬಾರಿ ಅವರು ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಆದರೆ ತಮ್ಮ ಸಹೋದರ, ಹೆಂಡತಿ, ಪುತ್ರಿ ಸೇರಿದಂತೆ ಎಲ್ಲರ ಬಗ್ಗೆಯೂ ಮಾತನಾಡಿ ಸೊಸೆ ಐಶ್ವರ್ಯ ರೈ ಮತ್ತು ಮೊಮ್ಮಗಳು ಆರಾಧ್ಯಾ ಬಗ್ಗೆ ಒಂದಕ್ಷರ ಹೇಳಿಲ್ಲ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.


COMMERCIAL BREAK
SCROLL TO CONTINUE READING

ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತು ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಈಗಾಗಲೇ ಪ್ರತ್ಯೇಕವಾಸ ಇರುವ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ದಟ್ಟ ವದಂತಿ ಇದೆ. ಇದರ ನಡುವೆ ಅಮಿತಾಬ್ ಬಚ್ಚನ್ ತಮ್ಮ ಕುಟುಂಬದವರ ಬಗ್ಗೆ ಮಾತನಾಡುತ್ತಾ ಸೊಸೆ ಐಶ್ವರ್ಯ ರೈ ಮತ್ತು ಮೊಮ್ಮಗಳು ಆರಾಧ್ಯಾ ಬಗ್ಗೆ ಏನೂ ಹೇಳಿಲ್ಲದಿರುವುದು ವದಂತಿಗಳಿಗೆ ಪುಷ್ಠಿನೀಡಿದಂತಾಗಿದೆ. 


ಇತ್ತೀಚೆಗಿನ ಷೋ ಒಂದರಲ್ಲಿ ಅಶುತೋಷ್ ಸಿಂಗ್ ಎಂಬ ಸ್ಪರ್ಧಿ ‘ತಮ್ಮದು ಲವ್ ಮ್ಯಾರೇಜ್. ಮದುವೆಯ ಬಳಿಕ ಪೋಷಕರು ನನ್ನೊಂದಿಗೆ ಮಾತನಾಡುತ್ತಿಲ್ಲ. ಇದು ತುಂಬಾ ಬೇಸರ ಉಂಟುಮಾಡಿದೆ. ಅವರು ಖಂಡಿತವಾಗಿ ಈ ಕಾರ್ಯಕ್ರಮ ನೋಡುತ್ತಿರುತ್ತಾರೆ. ಅದೇ ಕಾರಣಕ್ಕೆ ನಾನು ಬಂದಿದ್ದೇನೆ. ಈ ಮೂಲಕವಾದರೂ ಅವರೊಂದಿಗೆ ಮಾತನಾಡ ಬಯಸುತ್ತೇನೆ’ ಎಂದು ಹೇಳುತ್ತಾ ಗದ್ಗದಿತರಾದರು. 


ಇದನ್ನೂ ಓದಿ- ವೃತ್ತಿಜೀವನದ ಪೀಕ್'ನಲ್ಲಿರುವಾಗಲೇ ವೈಫ್ ಆಗಲು ಶ್ರೀವಲ್ಲಿ ರೆಡಿ! ಎಂಗೇಜ್ಮೆಂಟ್ ತಯಾರಿಯಲ್ಲಿ ರಶ್ಮಿಕಾ ಮಂದಣ್ಣ!!


ಅಶುತೋಷ್ ಅವರನ್ನು ಸಂತೈಸಲು ಅಮಿತಾಬ್ ಬಚ್ಚನ್ ತಮ್ಮ ಕುಟುಂಬದ ಕತೆಯನ್ನೇ ಹೇಳುತ್ತಾರೆ. ತಮ್ಮ ಕುಟುಂಬದ ಸದಸ್ಯರು ವಿಭಿನ್ನ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಹಿನ್ನೆಲೆಯ ಜನರನ್ನು ಮದುವೆಯಾಗಿದ್ದಾರೆ ಎಂದರು.ತಾನು ಉತ್ತರ ಪ್ರದೇಶದವನು, ಜಯಾ ಬಚ್ಚನ್ ಬಂಗಾಳದವರು. ತಮ್ಮ ಮಗಳು ಶ್ವೇತಾ ಬಚ್ಚನ್ ಪಂಜಾಬಿಯನ್ನು ವಿವಾಹವಾಗಿದ್ದಾರೆ. ಸಹೋದರ ಸಿಂಧಿ ಕುಟುಂಬಕ್ಕೆ ವಿವಾಹವಾಗಿದ್ದಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ- ಚೆಂದುಳ್ಳಿ ಚೆಲುವೆ ಐಶ್ವರ್ಯ ರೈಗೆ 'ಬಣ್ಣದ ಲೋಕ'ಕ್ಕೆ ಬರಬೇಡ ಎಂದಿದ್ದರಂತೆ ಖ್ಯಾತ ನಟ, ಕಾರಣ ಏನ್ ಗೊತ್ತಾ..!


ತಮ್ಮ ಪುತ್ರನ ವೈವಾಹಿಕ ಬದುಕಿನಲ್ಲಿ ಬಿರುಕು ಉಂಟಾಗಿದ್ದ ಸಂದರ್ಭದಲ್ಲಿ ಅಮಿತಾ ಬಚ್ಚನ್ ಕುಟುಂಬ ಸದಸ್ಯರ ಎಲ್ಲರ ಹೆಸರೇಳಿ ಸೊಸೆ ಐಶ್ವರ್ಯ ರೈ ಮತ್ತು ಮೊಮ್ಮಗಳು ಆರಾಧ್ಯಾ ಬಗ್ಗೆ ಮಾತನಾಡಿಲ್ಲದಿರುವುದು ಇನ್ನಷ್ಟು ಅನುಮಾನಕ್ಕೆ ಆಸ್ಪದ ನೀಡಿದಂತಾಗಿದೆ. ಇದೇ ರೀತಿ ಐಶ್ವರ್ಯ ರೈ ಮತ್ತು ಆರಾಧ್ಯಾ ಅವರನ್ನು ಬಿಟ್ಟು ಉಳಿದಂತೆ ಅಮಿತಾಬ್ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಅನಂತ್ ಅಂಬಾನಿ ಹಾಗು ರಾಧಿಕಾ ಮರ್ಚೆಂಟ್ ಮದುವೆ ಹೋಗಿದ್ದರು. ಆಗಲೇ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಬೇರೆಯಾಗಿದ್ದಾರೆ ಎನ್ನುವ ಗಾಸಿಪ್ ಹುಟ್ಟಿಕೊಂಡಿದ್ದು.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.