Amitabh- Anushka: ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ನಡೆಸಿದ ಅಮಿತಾಭ್-ಅನುಷ್ಕಾ

Amitabh-Anushka Trolled: ಬಾಲಿವುಡ್‌ನ ಇಬ್ಬರು ಜನಪ್ರಿಯ ತಾರೆಗಳಾದ  ಅಮಿತಾಬ್ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗೆ ಹೆಲ್ಮೆಟ್ ಧರಿಸದೆ ಬೈಕ್‌ನ ಹಿಂದಿನ ಸೀಟಿನಲ್ಲಿ ಕುಳಿತಿರುವುದು ಕಂಡುಬಂದಿದೆ. ಅವರ ಫೋಟೋಗಳು ಮತ್ತು ವೀಡಿಯೊಗಳು ಇದೀಗ ಭಾರಿ ವೈರಲ್ ಆಗುತ್ತಿವೆ ಮತ್ತು ಜನರು ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.  

Written by - Nitin Tabib | Last Updated : May 16, 2023, 02:55 PM IST
  • ಇತ್ತೀಚೆಗೆ ಅಮಿತಾಭ್ ಅವರ ಫೋಟೋವೊಂದು ಭಾರಿ ವೈರಲ್ ಆಗಿದ್ದು, ಇದೀಗ ಭಾರಿ ಟ್ರೋಲ್ ಗೂ ಒಳಗಾಗುತ್ತಿದೆ.
  • ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ಅಮಿತಾಭ್ ಬಚ್ಚನ್ ಇತ್ತೀಚೆಗೆ ತಮ್ಮ ಗಮ್ಯಸ್ಥಾನವನ್ನು ತಲುಪಲು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರೈಡರ್ ಮೇಲೆ ಸವಾರಿ ನಡೆಸಿದ್ದಾರೆ.
  • ಬೈಕ್ ಚಾಲಕ ಬೈಕ್ ನಡೆಸುತ್ತಿದ್ದರೆ, ಅಮಿತಾಭ್ ಅವರ ಹಿಂದೆ ಕುಳಿತುಕೊಂಡಿದ್ದಾರೆ.
Amitabh- Anushka: ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ನಡೆಸಿದ ಅಮಿತಾಭ್-ಅನುಷ್ಕಾ title=
ಅಮಿತಾಭ್-ಅನುಷ್ಕಾ ಬೈಕ್ ರೈಡ್

Amitabh- Anushka Trolled: ಇತ್ತೀಚೆಗೆ, ಅಮಿತಾಬ್ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಹೆಲ್ಮೆಟ್ ಇಲ್ಲದೆ ಬೈಕ್‌ನ ಹಿಂದಿನ ಸೀಟಿನಲ್ಲಿ ಕಾಣಿಸಿಕೊಂಡಿದ್ದಾರೆ, ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿವೆ. ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ಅವರ ಫೋಟೋಗಳು ಮತ್ತು ವಿಡಿಯೋಗಳನ್ನು ಸಾರ್ವಜನಿಕರು ತೀವ್ರವಾಗಿ ಟೀಕಿಸುತ್ತಿದ್ದಾರೆ, ಪೊಲೀಸರು ಅವರ ಮೇಲೆ ಏಕೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಪ್ರಸ್ತುತ ವಿಷಯ ತಿಳಿದ ಮುಂಬೈ ಪೊಲೀಸರು ಇಬ್ಬರೂ ನಟರ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಅಮಿತಾಭ್ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಕಾರಣ ಮತ್ತು ಜುಹುದಲ್ಲಿ ಮರಗಳು ಬಿದ್ದ ಕಾರಣ ಅನುಷ್ಕಾ ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ನಡೆಸಿದ್ದಾರೆ.

ಖುದ್ದು ಅಮಿತಾಭ್ ಅವರೇ ಫೋಟೋ ಪೋಸ್ಟ್ ಮಾಡಿದ್ದಾರೆ
ಇತ್ತೀಚೆಗೆ ಅಮಿತಾಭ್ ಅವರ ಫೋಟೋವೊಂದು ಭಾರಿ ವೈರಲ್ ಆಗಿದ್ದು, ಇದೀಗ ಭಾರಿ ಟ್ರೋಲ್ ಗೂ ಒಳಗಾಗುತ್ತಿದೆ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ಅಮಿತಾಭ್ ಬಚ್ಚನ್ ಇತ್ತೀಚೆಗೆ ತಮ್ಮ ಗಮ್ಯಸ್ಥಾನವನ್ನು ತಲುಪಲು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ರೈಡರ್ ಮೇಲೆ ಸವಾರಿ ನಡೆಸಿದ್ದಾರೆ. ಬೈಕ್ ಚಾಲಕ ಬೈಕ್ ನಡೆಸುತ್ತಿದ್ದರೆ, ಅಮಿತಾಭ್ ಅವರ ಹಿಂದೆ ಕುಳಿತುಕೊಂಡಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಜನರು ಈ ಫೋಟೋಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಪೊಲೀಸರು ಈ ವಿಷಯದ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ, ಏಕೆಂದರೆ ಲಕ್ಷಾಂತರ ಜನರು ಅವರನ್ನು ಅನುಸರಿಸುತ್ತಾರೆ ಮತ್ತು ಅವರು ಸಾರ್ವಜನಿಕವಾಗಿ ಅವರ ಈ ಚಿತ್ರಗಳು ತಪ್ಪು ಸಂದೇಶವನ್ನು ನೀಡುತ್ತಿವೆ.

ಇದನ್ನೂ ಓದಿ-Sameer Wankhede ಆರ್ಯನ್ ಖಾನ್ ನನ್ನು ಸಿಲುಕಿಸಿದ್ದು ಹೇಗೆ, ಮಾಹಿತಿ ಬಹಿರಂಗಪಡಿಸಿದ ಸಿಬಿಐ, ಶಾರುಕ್ ನಿಂದ ಎಷ್ಟು ಹಣ ಕೇಳಲಾಗಿತ್ತು?

ಇನ್ಸ್ಟಾಗ್ರಾಮ್ ನಲ್ಲಿ ಅಮಿತಾಬ್ ಹೇಳಿದ್ದೇನು?
ಅಮಿತಾಬ್ ಬಚ್ಚನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫೋಟೋ ಹಂಚಿಕೊಂಡು ಅದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ, "ರೈಡ್ ಫ್ರೆಂಡ್, ನನಗೆ ನೀವು ತಿಳಿದಿಲ್ಲ.. ಆದರೆ ಆ ಪರಿಸ್ಥಿತಿಯಲ್ಲಿ ನೀವು ನನಗೆ  ನನ್ನ ಗಮ್ಯಸ್ಥಾನವನ್ನು ಸಮಯಕ್ಕೆ ತಲುಪಿಸಿದ್ದಕ್ಕಾಗಿ ನಿಮಗೆ  ಧನ್ಯವಾದಗಳು" ಎಂದು ಹೇಳಿದ್ದಾರೆ. ಟ್ರಾಫಿಕ್ ಮೂಲಕ ಹಾದುಹೋಗಲು ಅಸಾಧ್ಯವಾಗಿತ್ತು. ಟೋಪಿ , ಶಾರ್ಟ್ಸ್ ಮತ್ತು ಹಳದಿ ಟೀ ಶರ್ಟ್‌ಗಳಿಗೆ ಧರಿಸಿರುವವರಿಗೆ ಧನ್ಯವಾದಗಳು" ಎಂದು ಅವರು ಬರೆದುಕೊಂಡಿದ್ದರು. ಆದರೆ ಜನರು ಇದೀಗ ಅದನ್ನು ಟೀಕಿಸುತ್ತಿದ್ದಾರೆ.

ಇದನ್ನೂ ಓದಿ-General Elections 2024: 2024 ರ ಚುನಾವಣೆಗೂ ಮುನ್ನ ನಿತಿಶ್ ಕುಮಾರ್ ಗೆ ನೀಡಿದ ಬೆಂಬಲ ಹಿಂಪಡೆಯಲಿದ್ದಾರೆ ಮಾಂಝೀ!

ಒಂದೆಡೆ ಈ  ಅಪರಿಚಿತ ವ್ಯಕ್ತಿ ಮಾಡಿದ ಸಹಾಯಕ್ಕಾಗಿ Instagram ನಲ್ಲಿ ಕೆಲ ಜನರು ಒಳ್ಳೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದರೆ,  ಹೆಚ್ಚಿನ ಜನರು ಬಿಗ್-ಬಿ ಹೆಲ್ಮೆಟ್ ಇಲ್ಲದೆ ಕಾಣಿಸಿಕೊಂಡಿದ್ದಕ್ಕಾಗಿ ಟೀಕಿಸುತ್ತಿದ್ದಾರೆ. ನಿಮ್ಮಂತಹ ಸ್ಪೂರ್ತಿದಾಯಕರು ಕೂಡ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದರೆ ಅಥವಾ ಹಿಂದೆ ಕುಳಿತುಕೊಂಡರೆ ಯುವಕರಿಗೆ ಯಾವ ಸಂದೇಶ ಸಿಗುತ್ತದೆ ಎನ್ನುತ್ತಿದ್ದಾರೆ ಜನ. ಅಮಿತಾಬ್ ಬಚ್ಚನ್ ಅವರ ಈ ಫೋಟೋ ಅವರ ಚಿತ್ರವೊಂದರ ದೃಶ್ಯದ ಭಾಗವಾಗಿರಬಹುದು ಎಂದು ಊಹಿಸಲಾಗುತ್ತಿದೆ. ಆದರೆ ಚಿತ್ರದಲ್ಲಿ ಕೂಡ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವುದು ಅಥವಾ ಸವಾರಿ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News