Amitabh Bachchan heir: ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಶತಕೋಟಿ ಆಸ್ತಿ ಮಾಲೀಕ. ಮಗಳು ಶ್ವೇತಾಗೆ ಮ್ಮ ಜುಹು ಪ್ರತೀಕ್ಷಾ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದರು. 1564 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಬಂಗಲೆಯ ಬೆಲೆ ಬರೋಬ್ಬರಿ 50 ಕೋಟಿ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪಿಎಫ್ ಸದಸ್ಯರಿಗೆ 7 ರೀತಿಯ ಇಪಿಎಸ್ ಪಿಂಚಣಿ !ನೀವು ಮಾತ್ರವಲ್ಲ ನಿಮ್ಮ ಕುಟುಂಬಕ್ಕೂ ಸಂಪೂರ್ಣ ರಕ್ಷಣೆ !
ಲೈಫ್ ಸ್ಟೈಲ್ ಏಷ್ಯಾ ವರದಿ ಪ್ರಕಾರ, ಅಮಿತಾಬ್ ಬಚ್ಚನ್ 3,190 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಐಷಾರಾಮಿ ಬಂಗಲೆ ಜಲ್ಸಾ ಬರೋಬ್ಬರಿ 112 ಕೋಟಿ ರೂ. ಮೌಲ್ಯದ್ದಾಗಿದ್ದು, ಇದಲ್ಲದೇ ಅವರ ಹೆಸರಿನಲ್ಲಿ ಜನಕ್, ವತ್ಸ ಮುಂತಾದ ಬಂಗಲೆಗಳೂ ಇವೆ. ಬೆಂಟ್ಲಿ ಕಾಂಟಿನೆಂಟಲ್ GT, ರೇಂಜ್ ರೋವರ್ ಆಟೋಬಯೋಗ್ರಫಿ, ರೋಲ್ಸ್ ರಾಯ್ಸ್ ಫ್ಯಾಂಟಮ್, ಲೆಕ್ಸಸ್ LX570 ಮತ್ತು Audi A8L ನಂತಹ ಐಷಾರಾಮಿ ವಾಹನಗಳ ಹೊರತಾಗಿ, ಬಿಗ್ ಬಿ ಸುಮಾರು 260 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ಅನ್ನು ಸಹ ಹೊಂದಿದ್ದಾರೆ.
ಬಿಗ್ ಬಿಗೆ ಇಷ್ಟೊಂದು ಆಸ್ತಿ ಇದ್ದು, ಇತ್ತೀಚೆಗೆಯಷ್ಟೇ ಶ್ವೇತಾ ಬಚ್ಚನ್ʼಗೆ 50 ಕೋಟಿ ಮೌಲ್ಯದ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದರು. ಅದಾದ ನಂತರ ಅಮಿತಾಬ್ ಬಳಿ ಉಳಿದಿರುವ ಎಲ್ಲಾ ಆಸ್ತಿಗೆ ಅಭಿಷೇಕ್ ಬಚ್ಚನ್‌ಗೆ ವಾರಸುದಾರರಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ತನ್ನ ಆಸ್ತಿಯ ಏಕೈಕ ವಾರಸುದಾರ ಅಭಿಷೇಕ್ ಆಗಲ್ಲ ಎಂದು ಸ್ವತಃ ಅಮಿತಾಬ್ ಬಚ್ಚನ್ ಖಚಿತಪಡಿಸಿದ್ದಾರೆ.
ತಮ್ಮ ರಿಯಾಲಿಟಿ ಶೋ ಕೆಬಿಸಿಯಲ್ಲಿ ಅಮಿತಾಬ್ ಬಚ್ಚನ್ ಈ ಬಗ್ಗೆ ಮಾತನಾಡಿದ್ದು, ಅಭಿಷೇಕ್ ಬಚ್ಚನ್ ಸಂಪೂರ್ಣ ಆಸ್ತಿಯನ್ನು ಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. "ನಾವು ಇಲ್ಲವಾದಾಗ, ನಮ್ಮಲ್ಲಿ ಏನಿದೆಯೋ ಅದು ನಮ್ಮ ಮಕ್ಕಳಿಗೆ ಸೇರುತ್ತದೆ. ನನಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಹೀಗಾಗಿ ಇವರಿಬ್ಬರಿಗೆ ಸಮನಾಗಿ ಹಂಚಲಾಗುವುದು" ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ









