)
Amitabh Bachchan heirs: ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ತಮ್ಮ ಅದ್ಭುತ ನಟನೆ ಹಾಗೂ ಕೌಟುಂಬಿಕ ಚಿಂತನೆ ಮತ್ತು ಜೀವನದ ತತ್ವಗಳಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ, ಅವರ ಹಳೆಯ ಸಂದರ್ಶನವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ಅವರು ತಮ್ಮ ಮಗ ಮತ್ತು ಮಗಳಿಗೆ ಆಸ್ತಿ ವಿಭಜನೆ ಮಾಡುವ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
2011 ರಲ್ಲಿ ರೆಡಿಫ್ಗೆ ನೀಡಿದ ಸಂದರ್ಶನದಲ್ಲಿ, ಅಮಿತಾಬ್ ಬಚ್ಚನ್ ಅವರು ತಮ್ಮ ಮರಣದ ನಂತರ, ತಮ್ಮ ಎಲ್ಲಾ ಆಸ್ತಿಯನ್ನು ಮಗ ಅಭಿಷೇಕ್ ಬಚ್ಚನ್ ಮತ್ತು ಮಗಳು ಶ್ವೇತಾ ಬಚ್ಚನ್ ನಂದಾ ನಡುವೆ ಸಮಾನವಾಗಿ ಹಂಚಲಾಗುವುದು ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಅವರು ಮತ್ತು ಅವರ ಪತ್ನಿ ಜಯಾ ಬಚ್ಚನ್ ಈಗಾಗಲೇ ನಿರ್ಧರಿಸಿದ್ದಾರೆ ಎಂದು ಹೇಳಿದ್ದರು.
"ನನ್ನ ನಂತರ ಏನಾಗುತ್ತದೆಯೋ ಅದನ್ನು ಅಭಿಷೇಕ್ ಮತ್ತು ಶ್ವೇತಾ ನಡುವೆ ಸಮಾನವಾಗಿ ಹಂಚಲಾಗುತ್ತದೆ. ಯಾರ ವಿರುದ್ಧವೂ ತಾರತಮ್ಯ ಇರುವುದಿಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಈ ದೃಷ್ಟಿಕೋನವು ಇಂದಿನ ಕಾಲದ ಚಿಂತನೆಯನ್ನು ತೋರಿಸುತ್ತದೆ. ಗಂಡು ಹೆಣ್ಣನ್ನು ಸಮಾನವಾಗಿ ನೋಡಬೇಕು. ಸಮಾಜವು ಹೆಣ್ಣು ಮಕ್ಕಳನ್ನು "ಪರಾಯ ಧನ" ಎಂದು ಪರಿಗಣಿಸಿದರೂ, ಅವರು ಇದರಲ್ಲಿ ನಂಬಿಕೆ ಇಡುವುದಿಲ್ಲ ಎಂದು ಸ್ಪಚ್ಟವಾಗಿ ಹೇಳಿದ್ದಾರೆ.
ಮಾಧ್ಯಮ ವರದಿಗಳು ಮತ್ತು ಇಂಡಿಯಾ ರಿಚ್ ಲಿಸ್ಟ್ ಪ್ರಕಾರ, ಬಚ್ಚನ್ ಕುಟುಂಬವು ಸುಮಾರು 1600 ಕೋಟಿ ರೂಪಾಯಿಗಳ ಆಸ್ತಿಯನ್ನು ಹೊಂದಿದೆ. ಮುಂಬೈ, ಪುಣೆ, ಪಾವ್ನಾ ಮತ್ತು ಅಯೋಧ್ಯೆಯಂತಹ ಸ್ಥಳಗಳಲ್ಲಿ ಅವರಿಗೆ ಬೆಲೆಬಾಳುವ ಮನೆಗಳು ಮತ್ತು ಭೂಮಿಗಳಿವೆ. ವಿಶೇಷವೆಂದರೆ ಮುಂಬೈನ ಜುಹು ಪ್ರದೇಶದಲ್ಲಿರುವ ತಮ್ಮ ಹಳೆಯ ಮನೆ 'ಪ್ರತಿಕ್ಷಾ'ವನ್ನು ತಮ್ಮ ಮಗಳು ಶ್ವೇತಾಗೆ ಈಗಾಗಲೇ ನೀಡಿದ್ದಾರೆ, ಇದು ಸುಮಾರು 50 ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ