close

News WrapGet Handpicked Stories from our editors directly to your mailbox

ಬಿಗ್ ಬಿ ಟ್ವಿಟ್ಟರ್ ಫಾಲೋವರ್ ಗಳ ಸಂಖ್ಯೆಯಲ್ಲಿ ಕಡಿತ, ಟ್ವಿಟ್ಟರ್ ಬಿಡುವುದಾಗಿ ಹೇಳಿದ ಬಚ್ಚನ್!

    

Manjunath Naragund Manjunath Naragund | Updated: Feb 1, 2018 , 01:04 PM IST
ಬಿಗ್ ಬಿ ಟ್ವಿಟ್ಟರ್ ಫಾಲೋವರ್ ಗಳ ಸಂಖ್ಯೆಯಲ್ಲಿ ಕಡಿತ, ಟ್ವಿಟ್ಟರ್ ಬಿಡುವುದಾಗಿ ಹೇಳಿದ ಬಚ್ಚನ್!

ನವದೆಹಲಿ: ಇದೇನಪ್ಪಾ ಹೀಗಂತೀರಾ! ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಟ್ವಿಟ್ಟರ್ ಫಾಲೋವರ್ಸ್ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದಕ್ಕೆ ಈ ಸೋಶಿಯಲ್ ಮಿಡಿಯಾದಿಂದ ಹೊರ ಹೋಗುವ ಸೂಚನೆ ನೀಡಿದ್ದಾರೆ. ಟ್ವಿಟರ್ ಫಾಲೋವರ್ ಸಂಖ್ಯೆಯು 33 ದಶಲಕ್ಷದಿಂದ 32.9 ದಶಲಕ್ಷಕ್ಕೆ ಇದರಿಂದ ಬಚ್ಚನ್ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ. ಇದು ನಿಜ ಅಂತೀರಾ? ಹಾಗಾದರೆ  ಸ್ವಲ್ಪ ಈ ಟ್ವೀಟ್ ಓದಿ.... 

ಈ ತಮ್ಮ ಪಾಲೋವರ್ಸ್ ಸಂಖ್ಯೆ ಕಡಿಮೆಯಾಗಿರುವುದಕ್ಕೆ ವ್ಯಂಗ್ಯ ಮಾಡಿರುವ ಬಚ್ಚನ್ 

"ಟ್ವಿಟ್ಟರ್,ನೀವು ನನ್ನ ಪಾಲೋವರ್ಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದಿರಿ..!!??
ಹಾಹಾಹಾಹಾ! ತಮಾಷೆಗಾಗಿ ....ಇದು ನಿಮ್ಮಿಂದ ಹೊರಬರಲು ಸರಿಯಾದ ಸಮಯ.. ಉತ್ತಮ ಸವಾರಿಗಾಗಿ ಧನ್ಯವಾದಗಳು ... ಸಮುದ್ರದಲ್ಲಿ ಹಲವಾರು ಮೀನುಗಳಿವೆ- ಅವುಗಳಲ್ಲಿ ಬಹುತೇಕ ಮೀನುಗಳು ರೋಮಾಂಚನಕಾರಿಯಾಗಿವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.ಟ್ವಿಟರ್ ಹೊರತುಪಡಿಸಿ, ಬಚ್ಚನ್ ಇನ್ಸ್ತಾಗ್ರಾಂ ಮತ್ತು ಅವರು  ಬ್ಲಾಗ್ ನಲ್ಲಿ ಸಕ್ರಿಯವಾಗಿದ್ದಾರೆ.

ಶಾರುಖ್ ಖಾನ್ ಸಹ ಟ್ವಿಟ್ಟರ್ನಲ್ಲಿ 32.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.