Amitabh Bachchan statement about Aishwarya Rai: ಐಶ್ವರ್ಯಾ ರೈ ಮತ್ತು ಬಚ್ಚನ್ ಕುಟುಂಬದ ನಡುವೆ ಬಿರುಕು ಮೂಡಿದೆ ಎಂಬ ವದಂತಿಗಳು ಆಗಾಗ ಮುನ್ನೆಲೆಗೆ ಬರುತ್ತವೆ. ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯಾ ರೈ ಡಿವೋರ್ಸ್ ವದಂತಿ ನಡುವೆ ಅಮಿತಾಬ್ ಬಚ್ಚನ್ ಅವರ ಹೇಳಿಕೆಯೊಂದು ವೈರಲ್ ಆಗಿದೆ.
ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಪ್ರೀತಿಯ ಸೊಸೆಯಾಗಿದ್ದ ಕಾಲವೊಂದಿತ್ತು. ಅಮಿತಾಬ್ ಬಚ್ಚನ್ ಅವರೇ ಹಲವು ಸಂದರ್ಭಗಳಲ್ಲಿ ತಮ್ಮ ಸೊಸೆಯ ಬಗ್ಗೆ ಮಾತನಾಡಿದ್ದಾರೆ. ಬಚ್ಚನ್ ಕುಟುಂಬ ಅವರನ್ನು ಹಾಡಿ ಹೊಗಳುತ್ತಿದ್ದರು. ಅಮಿತಾಬ್ ಬಚ್ಚನ್ ತಮ್ಮ ಸೊಸೆಯ ವಿರುದ್ಧ ಮಾತನಾಡಿದವರಿಗೆ ತಿರುಗಿ ಉತ್ತರ ಕೊಟ್ಟಿದ್ದರು. ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು. ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ಅಮಿತಾಬ್ ಬಚ್ಚನ್ ಕೋಪಗೊಂಡಿದ್ದರು.
ಐಶ್ವರ್ಯಾ ಅವರ ಬಗ್ಗೆ ಸುಳ್ಳು ಸುದ್ದಿಯೊಂದು ಹರಡಿತ್ತು. ಇದರಿಂದ ಕೋಪಗೊಂಡ ಅಮಿತಾಬ್ ಬಚ್ಚನ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. 2010 ರಲ್ಲಿ ಮುಂಬೈನ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ಐಶ್ವರ್ಯಾ ರೈ ಗರ್ಭಿಣಿಯಾಗಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ: ಖ್ಯಾತ ಸಿರೀಯಲ್ ನಟ-ನಟಿಯ ದಾಂಪತ್ಯ ಅಂತ್ಯ! ಮದುವೆಯಾದ 2 ತಿಂಗಳಿಗೆ ವಿಚ್ಛೇದನ ಘೋಷಿಸಿದ ಫೇಮಸ್ ಜೋಡಿ..
ಈ ಸುದ್ದಿ ಅಮಿತಾಬ್ ಬಚ್ಚನ್ ಅವರನ್ನು ತುಂಬಾ ಅಸಮಾಧಾನಗೊಳಿಸಿತು. ಅವರು ತಮ್ಮ ಬ್ಲಾಗ್‌ನಲ್ಲಿ ಸುಳ್ಳು ವರದಿಯನ್ನು ಟೀಕಿಸಿದರು. ಅವರು ಐಶ್ವರ್ಯಾ ರೈ ಪರ ನಿಂತಿದ್ದರು. ಅವರ ಕುಟುಂಬಕ್ಕೆ ಗೌಪ್ಯತೆಯ ಹಕ್ಕಿದೆ ಎಂದು ಹೇಳಿದರು.
ಇಂದು ನಾನು ನೋವು ಮತ್ತು ಅಸಹ್ಯದಿಂದ ಇದನ್ನು ಹೇಳುತ್ತಿದ್ದೇನೆ. ಈ ಲೇಖನವು ಸಂಪೂರ್ಣವಾಗಿ ಸುಳ್ಳು, ಸಂಪೂರ್ಣವಾಗಿ ಕಟ್ಟುಕಥೆ, ಆಧಾರರಹಿತ ಮತ್ತು ಅತ್ಯಂತ ಕೆಳಮಟ್ಟದ್ದಾಗಿದೆ ಎಂದು ಅಮಿತಾಬ್ ಹೇಳಿದರು. ಐಶ್ವರ್ಯಾ ತಮ್ಮ ಸೊಸೆಯಲ್ಲ, ಬದಲಾಗಿ ತಮ್ಮ ಮಗಳು ಎಂದು ಹೇಳಿದ್ದಾರೆ. ತಮ್ಮ ಕೊನೆಯ ಉಸಿರಿರು ಇರುವವರೆಗೂ ಅವರಿಗಾಗಿ ಹೋರಾಡುವುದಾಗಿ ಹೇಳಿದರು. ತನ್ನ ಕುಟುಂಬದ ಮಹಿಳೆಯರ ವಿರುದ್ಧ ಯಾವುದೇ ಕೆಟ್ಟ ಮಾತನ್ನು ಸಹಿಸುವುದಿಲ್ಲ ಎಂದು ಬಿಗ್ ಬಿ ಹೇಳಿದ್ದರು.
ನಾನು ನನ್ನ ಕುಟುಂಬದ ಮುಖ್ಯಸ್ಥ. ಐಶ್ವರ್ಯಾ ನನ್ನ ಸೊಸೆ ಅಲ್ಲ, ಅವಳು ನನ್ನ ಮಗಳು, ಒಬ್ಬ ಮಹಿಳೆ, ನನ್ನ ಮನೆಯ ಮಹಿಳೆ. ಯಾರಾದರೂ ಅವಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಸಹಿಸುವುದಿಲ್ಲ. ನಾನು ಅವಳಿಗಾಗಿ ನನ್ನ ಕೊನೆಯ ಉಸಿರಿನವರೆಗೂ ಹೋರಾಡುತ್ತೇನೆ. ಮನೆಯ ಪುರುಷರಿಗೆ, ಅಭಿಷೇಕ್ ಅಥವಾ ನನಗೆ ಏನಾದರೂ ಹೇಳಿದರೆ, ನಾನು ಅದನ್ನು ಸಹಿಸಿಕೊಳ್ಳುತ್ತೇನೆ, ಆದರೆ... ನೀವು ನನ್ನ ಮನೆಯ ಮಹಿಳೆಯರ ಮೇಲೆ ಕೆಟ್ಟ ಕಾಮೆಂಟ್‌ಗಳನ್ನು ಮಾಡಿದರೆ, ನಾನು ಅದನ್ನು ಸಹಿಸುವುದಿಲ್ಲ" ಎಂದು ಅಮಿತಾಬ್ ಬಚ್ಚನ್ ಆ ಸಮಯದಲ್ಲಿ ಹೇಳಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









