Amitabh Bachchan: ಅಮಿತಾಬ್ ಬಚ್ಚನ್.. ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಬಾಲಿವುಡ್ ಅಂಗಳದಲ್ಲಿ ಅಮಿತಾಬ್ ಬಚ್ಚನ್‌ಗೆ ಒಂದು ರೇಂಜ್ ಇದೆ, ಬಚ್ಚನ್ ಕುಟುಂಬ ಎಂದರೆ ಒಂದು ಗತ್ತು ಇದೆ. ಆದರೆ ಅಮಿತಾಬ್ ಬಚ್ಚನ್ ಅವರು ಮಾಡಿದ್ದ ಪೋಸ್ಟ್ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿತ್ತು, ಇದೀಗ ಆ ಪೋಸ್ಟ್‌ನ ಎಲ್ಲಾ ಪ್ರಶ್ನೆಗಳಿಗೆ, ಎಲ್ಲಾ ಅನುಮಾನಗಳಿಗೆ ಇದೀಗ ಉತ್ತರ ಸಿಕ್ಕಿದೆ.
"ಹೋಗುವ ಸಮಯ" ಎಂಬ ನಿಗೂಢ ಪೋಸ್ಟ್ ಅನ್ನು ಇತ್ತೀಚೆಗೆ ಅಮಿತಾಬ್ ಬಚ್ಚನ್ ಹಂಚಿಕೊಂಡಾಗ ಅವರ ಎಲ್ಲಾ ಅಭಿಮಾನಿಗಳು ಉದ್ವಿಗ್ನರಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಅನ್ನು ನೋಡಿದ ತಕ್ಷಣ ಅಭಿಮಾನಿಗಳು ಅರ್ರೇ ಅಮಿತಾಬ್ ಬಚ್ಚನ್ ಏಕೆ ಇಂತಹದ್ದೊಂದು ಪೋಸ್ಟ್ ಹಾಕಿದ್ದರು, ಸಿನಿಮಾಗೆ ಗುಡ್ ಬೈ ಹೇಳುತ್ತಾರಾ? ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯಾ ಎಂದು ಯೋಚಿಸಲು ಆರಂಭಿಸಿದ್ದರು. ಆದರೆ, ಇದೀಗ ಕೌನ್ ಬನೇಗಾ ಕರೋಡ್‌ಪತಿ ವೇದಿಕೆಯಲ್ಲಿ ಅಮಿತಾಬ್ ಬಚ್ಚನ್ ಅವರಿಂದಲೇ ಇದಕ್ಕೆ ಉತ್ತರ ಸಿಕ್ಕಿದೆ.
ಇದನ್ನೂ ಓದಿ: ಸಕ್ಕರೆ ಕಾಯಿಲೆಗೆ ಮಾಹಾ ಮದ್ದು..! ಈ ಬಿಜವನ್ನು ನೀರಿನಲ್ಲಿ ನೆನಸಿ ಕುಡಿದರೆ ಯಾವುದೇ ಕಾರಣಕ್ಕೂ ಹೆಚ್ಚಾಗಲ್ಲ ಶುಗರ್
ಈ ಪೋಸ್ಟ್ ಹಾಕಿದ ನಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮಗಿದ್ದ ಪ್ರಶ್ನೆಗಳ ಸುರಿಮಳೆಗೈದರು. ಆ ಪೋಸ್ಟ್ ಹಂಚಿಕೊಂಡಿದ್ದು ಏಕೆ? ಅದರ ಹಿಂದಿನ ಕಾರಣ ಏನು? ಎಂದು ಪ್ರಶ್ನೆಗಳ ಮಹಾಪೂರವನ್ನೆ ಹರಿಸಿದ್ದರು. ಆದರೆ ಎರಡು ವಾರಗಳ ನಂತರ ಅಮಿತಾಬ್ ಬಚ್ಚನ್ ಕೆಬಿಸಿ 16 ರ ಇತ್ತೀಚಿನ ಸಂಚಿಕೆಯಲ್ಲಿ ಈ ಪೋಸ್ಟ್ ಬಗ್ಗೆ ಮೌನ ಮುರಿದಿದ್ದಾರೆ.
ಕೆಬಿಸಿ 16ರ ವೇದಿಕೆಯಲ್ಲಿ ನೃತ್ಯ ಹಾಗೂ ಹಾಸ್ಯದಿಂದ ವೇದಿಕೆ ಕಳೆಗಟ್ಟಿತ್ತು, ಇದರ ಬೆನ್ನಲ್ಲೆ ಅಭಿಮಾನಿಗಳು ಅಮಿತಾಬ್ ಬಚ್ಚನ್ ಅವರು ಮಾಡಿದ್ದ ಟ್ವೀಟ್ ಬಗ್ಗೆ ಪ್ರಶ್ನಿಸಿದ್ದರು. "ಹೊರಡುವ ಸಮಯ" ಎಂದು ಪೋಸ್ಟ್ ಹಾಕಿದ್ದು ಏಕೆ? ಎದರ ಹಿಂದಿನ ಕಾರಣ ಏನು? ಎಂದು ಅಭಿಮಾನಿಯೊಬ್ಬರು ಕೇಳಿದರು. ಅದಕ್ಕೆ ಉತ್ತರಿಸಿದ ಅಮಿತಾಬ್ " ಅರ್ರೇ ಹೊರಡುವ ಸಮಯ.. ಎನ್ನುವ ಸಾಲಿನಲ್ಲಿ ಅಂತಹದ್ದೇನಿದೆ? ಅದರಲ್ಲೇನಾದರೂ ತೊಂದರೆ ಇದೆಯಾ? ಎಂದು ಉತ್ತರಿಸಿದರು.
ಇದರ ಬೆನ್ನಲ್ಲೆ ಮತ್ತೊಬ್ಬ ಅಭಿಮಾನಿ ಎಲ್ಲಿಗೆ ಹೋಗಲು ನಿಮ್ಮ ಪ್ಲಾನ್? ಎಂದು ಕೇಲಿದರು ಇದಕ್ಕೆ ಉತ್ತರಿಸಿದ ಅಮಿತಾಬ್ "ಹೊರಡುವ ಸಮಯ ಬಂದಾಗಿದೆ..ಎನ್ನುವುದಕ್ಕೆ ಅರ್ಥ ಏನೆಂದರೆ?" ಎಂದು ವಾಕ್ಯವನ್ನು ಪೂರ್ತಿ ಮಾಡುವಷ್ಟರಲ್ಲೆ ಅಲ್ಲಿದ ಅಭಿಮಾನಿಗಳು "ನೀವು ಇಲ್ಲಿಂದ ಎಲ್ಲಿಗೂ ಹೋಗುವಂತಿಲ್ಲ" ಎಂದು ಒಗ್ಗಟ್ಟಿನಿಂದ ಕೂಗಲು ಆರಂಭಿಸಿದ್ದರು.
ನಂತರ ಮಾತನಾಡಿದ ಅಮಿತಾಬ್ "ಅರ್ರೇ ತಮ್ಮ ನನಗೆ ಕೆಲಸಕ್ಕೆ ಹೋಗುವ ಸಮಸಯ ಬಂದಿದೆ.. ಅರ್ಥ ಇಲ್ಲದೆ ಮಾತನಾಡಬೇಡಿ, ಕೆಲಸ ಮಾಡಿ ಮುಗಿಸುವುದರೊಳಗೆ 2 ಗಂಟೆ ಆಗಿತ್ತು. ನಿದ್ದೆ ಬೇರೆ ಬರುತ್ತಿತ್ತು, ಸುಸ್ತಾಗಿತ್ತು, ಹೊರಡುವ ಸಮಯ.. ಎಂದು ಬರೆದು ಮಲಗಿಬಿಟ್ಟೆ, ಅದು ಹಾಗೆಯೇ ಉಳಿದೋಯ್ತು" ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









