Anchal sharma: "ನನಗೆ ಎಂಟು ವರ್ಷ. ಆ ದಿನ ನಾನು ಮಲಗಿದ್ದೆ. ನನ್ನ ಚಿಕ್ಕಪ್ಪ ಬಂದು ನನ್ನ ಬಟ್ಟೆಯೊಳಗೆ ಕೈ ಹಾಕಿದರು. ನಾನು ಜೋರಾಗಿ ಕಿರುಚುತ್ತಾ ಎದ್ದು ನಿಂತೆ, ಈ ರೀತಿ ನನಗೆ ಆಗಿದ್ದು, ಒಂದು ಕ್ಷಣ ಅಚ್ಚರಿಯಿಂದ ಸುಮ್ಮನೆ ನಿಲ್ಲುವಂತೆ ಮಾಡಿತ್ತು." ಈ ಸಾಲುಗಳನ್ನು ಕೇಳುವ ನಮಗೆ ಇಷ್ಟು ನೋವಾದರೆ, ಪದೇ ಪದೇ ಈ ನೋವನ್ನು ಜೀವನದಲ್ಲಿ ಅನುಭವಿಸದವರ ಕಥೆ ಹೇಗಿರಬೇಕು ಅಲ್ವಾ? ಸೋಷಿಯಲ್ ಮಿಡಿಯಾದ ಇನ್ಪ್ಯುಎನ್‌ಸರ್ ಆಗಿರುವ ಆಂಚಲ್ ಶರ್ಮಾ ತನ್ನ ಖಾಸಗಿ ಜೀವನದ ಬಗ್ಗೆ ಮಾತನಾಡುವಾಗ, ಕೇಳುಗರು ಇಂತಹದ್ದೆ ಒಂದು ಆಘಾತಕ್ಕೆ ಎದುರಾಗಿದ್ದಾರೆ.
ಆಂಚಲ್ ಶರ್ಮಾ ಇಂದು ಮೈಲ್ಸ್ ಆಫ್ ಹ್ಯಾಪಿನೆಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾ, ಮಹಿಳೆಯರಿಗೆ ಆಗುತ್ತಿರುವ ಅನ್ಯಾಯಗಳ ಕುರಿತು ಧ್ವನಿ ಎತ್ತುತ್ತಾರೆ. ಇವೆಲ್ಲವನ್ನೂ ದಾಟಿ ಆದರೆ ಆಂಚಲ್ ಸ್ವತಃ ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ತನ್ನ ಬಾಲ್ಯದಲ್ಲಿ ಅಷ್ಟೆ ಅಲ್ಲದೆ ಅಂಚಲ್ ಶರ್ಮಾ ತನ್ನ ಮದುವೆಯ ನಂತರವೂ ಕೂಡ ಸಾಕಷ್ಟು ಚಿತ್ರ ಹಿಂಸೆಯನ್ನು ಅನುಭವಿಸಿದ್ದಾರೆ.
ಇದನ್ನೂ ಓದಿ: ಅವನು ನನ್ನ ಸೊಂಟ ಮುಟ್ಟಬಹುದಿತ್ತು ಆದ್ರೆ, ಹಿಂದೆ ಕೈ ಹಾಕಿ..! ಶಾಕಿಂಗ್ ವಿಚಾರ ಬಿಚ್ಚಿಟ್ಟ ಅನು
ಹೌದು, ಮದುವೆ ಸಂಸಾರ, ಬಾಲ್ಯದಲ್ಲಿ ಕಷ್ಟ ಪಟ್ಟಿದ್ದೇವೆ ಲೈಂಗಿಕ ದೌರ್ಜನ್ಯ ಅನುಭವಿಸಿದ್ದೇವೆ, ಮದುವೆಯಾದರೆ ನನ್ನ ಪತಿಯ ಜೊತೆ ಖುಷಿಯಾಗಿ ಇರಬಹುದು, ನನ್ನ ಜೀವನದಲ್ಲಿ ಇನ್ನು ಮುಂದೆ ನಾನು ಖುಷಿಯಾಗಿರಬಹುದು ಎಂದು ಕನಸು ಕಟ್ಟಿಕೊಂಡು ಮದುವೆಯಾಗಿದ್ದ ಅಂಚಲ್ ಅವರ ಜೀವನ ಮದುವೆಯ ನಂತರ ಭಯಾನಕವಾಗ ತೊಡಗಿತು.
ಆಂಚಲ್ ಶರ್ಮಾ ಅವರು ಬಾಲ್ಯದಿಂದಲೂ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ " ನನ್ನ ತಂದೆ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರು ಬಹಳಷ್ಟು ಕುಡಿದರು ಮತ್ತು ಜೂಜಾಡುತ್ತಿದ್ದರು, ನನ್ನ ತಾಯಿಯನ್ನು ಒಡೆಯುತ್ತಿದ್ದರು, ಆಗಿನ ಪರಿಸ್ಥಿತಿ ಹೇಗಾಗಿತ್ತೆಂದರೆ ತಿನ್ನಲ್ಲು ಅನ್ನವಿಲ್ಲದಂತಾಗಿತ್ತು. ಬ್ರೇಡ್ ಹಾಗೂ ನೀರು ಕುಡಿದು ಮಲಗುವ ಸ್ಥಿತಿ ಬಂದಿತ್ತು".
ಇದನ್ನೂ ಓದಿ: ದೇಶದ 95% ಮಹಿಳೆಯರಿಗೆ ಸೆ*ಕ್ಸ್ ಮಾಡೋದು ಅದಕ್ಕೆ ಅನ್ನೋದೇ ಗೊತ್ತಿಲ್ಲ: ಖ್ಯಾತ ನಟಿಯ ಹೇಳಿಕೆ
ಇಷ್ಟೆ ಅಲ್ಲ, ಕಷ್ಟವೇ ಜೀವನವಾಗಿ ಸಾಗುತ್ತಿದ್ದ ದಿನಗಳಲ್ಲಿ ಆಕೆಯ ತಂಗಿಯ ಮದುವೆಯಾಗಿತ್ತು, ಮದುವೆಯ ನಂತರ ಆಕೆಯ ತಂಗಿಗೆ ಗಂಡನ ಮನೆಯವರು ನಿರಂತರ ಕಿರುಕುಳ ನೀಡುತ್ತಿದ್ದರು, ಒಂದು ದಿನ ಆಕೆಯ ತಂಗಿಯ ಶವ ಸೂರಜ್‌ಕುಂಡ್ ಬಳಿ ಸಿಕ್ಕಿತ್ತು, ಇದನ್ನು ಆಕೆಯ ಪತಿಯ ಮನೆಯವರು ಆತ್ಮಹತ್ಯೆ ಎಂದು ಬಿಂಬಿಸಿದ್ದರು, ಆದರೆ ಅದೊಂದು ಕೊಲೆ ಎಂಬುದು ಅಂಚಲ್ ಅವರ ವಾದ. ತನ್ನ 19 ವರ್ಷದ ಸಹೋದರಿಯನ್ನು ತನ್ನ ಗಂಡನೇ ಕೊಲೆ ಮಾಡಿದ್ದಾನೆ ಎಂಬ ಆಕೆಯ ದೂರನ್ನು ಆಧರಿಸಿ, ಅವನನ್ನು ಪೋಲಿಸರು ಬಂಧಿಸಿದ್ದರು, ನಂತರ ಅಪರಾದ ಸಾಭೀತಾಗಿ ಅವನಿಗೆ ಜೀವವಾಧಿ ಶಿಕ್ಷೆ ಸಹ ನೀಡಲಾಯಿತು.
ಮದುವೆಯ ನಂತರ ಆಕೆಯ ತಾಯಿ ಮತ್ತು ಸಹೋದರಿ ಅನುಭವಿಸಿದ ಕಷ್ಟಗಳು ಆಂಚಲ್ ಜೀವನದಲ್ಲೂ ಸಂಭವಿಸಿದವು. ಆಂಚಲ್ ಶರ್ಮಾ 2007 ರಲ್ಲಿ ಅಂಗವಿಕಲ ವ್ಯಕ್ತಿಯನ್ನು ವಿವಾಹವಾದರು. ಮದುವೆಯ ನಂತರ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ತನ್ನ ಪತಿ ತನ್ನೊಂದಿಗೆ ಕ್ರೂರವಾಗಿ ವರ್ತಿಸುತ್ತಿದ್ದನೆಂದು ಅಂಚಲ್ ಹೇಳಿದ್ದು, ನ್ನ ಮಾವ ಮತ್ತು ಅತ್ತಿಗೆ ತನ್ನನ್ನು ಹೊಡೆಯುತ್ತಿದ್ದರು ಎಂದು ಹೇಳಿದ್ದಾರೆ. ಇಷ್ಟೆಲ್ಲಾ ಚಿತ್ರಹಿಂಸೆ ಅನುಭವಿಸಿದ ನಂತರ ಅಂಚಲ್ 2008ರಲ್ಲಿ ತಮ್ಮ ಪತಿಯಿಂದ ವಿಚ್ಚೇದನ ಪಡೆದು ದೂರವಾದರು.
ಆಂಚಲ್ ಶರ್ಮಾ ಅವರ ನೋವು ಇಲ್ಲಿಗೆ ಮುಗಿಯಲಿಲ್ಲ. ಜೀವನವು ಹೊಸ ತಿರುವು ಪಡೆದು ಅವಳಿಗೆ ಹೊಸ ನೋವನ್ನು ನೀಡಿದೆ, ಅಂಚಲ್ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು, 2018ರಲ್ಲಿ ಸ್ತನದ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಈ ಮಹಿಳೆಯ ಕಥೆ ಹಲವರಿಗೆ ಇಂದು ಸ್ಪೂರ್ತಿಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









