ಒಲಿಯಿತು ಕಂಕಣಭಾಗ್ಯ..."ಈ ವರ್ಷವೇ ಮದುವೆ" ಎಂದು ಭಾವಿ ಪತಿಯ ಪರಿಚಯಿಸಿದ ಅನುಶ್ರೀ! ಕರುನಾಡ ಮನೆಮಗಳು ಪ್ರೀತಿಸುವ ಆ ಲಕ್ಕಿ ಬಾಯ್‌ ಇವರೇ...

Anushree statement about marriage: ಏಪ್ರಿಲ್‌ ೧೦ರಂದು ವಿದ್ಯಾಪತಿ ಸಿನಿಮಾ ರಿಲೀಸ್‌ ಆಗಲಿದೆ. ಈ ಹಿನ್ನೆಲೆಯಲ್ಲಿ ಪ್ರಚಾರ ಕೈಗೊಂಡಿದ್ದ ಅನುಶ್ರೀ ಮತ್ತು ಸಿನಿಮಾದ ನಾಯಕ ನಾಯಕಿ ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಬಂದಿದ್ದರು.

Written by - Bhavishya Shetty | Last Updated : Apr 9, 2025, 04:02 PM IST
    • ಕರ್ನಾಟಕದ ಪ್ರಖ್ಯಾತ ನಿರೂಪಕಿ ಅನುಶ್ರೀ ಮದುವೆ
    • ಮದುವೆ ಇದೇ ವರ್ಷ ಆಗಲಿದೆ ಎಂದು ಬಿಗ್‌ ಹಿಂಟ್‌
    • ತಾನು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಹೇಳಿದ ಅನುಶ್ರೀ
ಒಲಿಯಿತು ಕಂಕಣಭಾಗ್ಯ..."ಈ ವರ್ಷವೇ ಮದುವೆ" ಎಂದು ಭಾವಿ ಪತಿಯ ಪರಿಚಯಿಸಿದ ಅನುಶ್ರೀ! ಕರುನಾಡ ಮನೆಮಗಳು ಪ್ರೀತಿಸುವ ಆ ಲಕ್ಕಿ ಬಾಯ್‌ ಇವರೇ...
Anushree statement about marriage

Anushree statement about marriage: ಕರ್ನಾಟಕದ ಪ್ರಖ್ಯಾತ ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಆಗಾಗ್ಗೆ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಎಲ್ಲಿ ಹೋದರೂ ಮೊದಲು ಕೇಳುವ ಪ್ರಶ್ನೆಯೇ ಅನುಶ್ರೀ ಮದುವೆ ಯಾವಾಗ ಎಂದು... ಆದರೆ ಇದೀಗ ಮದುವೆ ಯಾವಾಗ ಮಾತ್ರವಲ್ಲ, ತಾನು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಕೂಡ ಮನಬಿಚ್ಚಿ ಮಾತನಾಡಿದ್ದಾರೆ ಅನುಶ್ರೀ.

Add Zee News as a Preferred Source

ಇದನ್ನೂ ಓದಿ: ಮುಂದಿನ ಮೂರು ದಿನದಲ್ಲಿ ಪುಷ್ಯಾ ನಕ್ಷತ್ರದಲ್ಲಿ ಮಂಗಳನ ಸಂಚಾರ.. ಈ ರಾಶಿಯ ಜನರು ಇನ್ನು ಮುಂದೆ  ಕೈಯಲ್ಲಿ ಕಸ ಹಿಡಿದರೂ ಚಿನ್ನ! ಬದುಕಾಗಲಿದೆ ಬಂಗಾರ  

ನಾಳೆ ಅಂದರೆ ಏಪ್ರಿಲ್‌ ೧೦ರಂದು ವಿದ್ಯಾಪತಿ ಸಿನಿಮಾ ರಿಲೀಸ್‌ ಆಗಲಿದೆ. ಈ ಹಿನ್ನೆಲೆಯಲ್ಲಿ ಪ್ರಚಾರ ಕೈಗೊಂಡಿದ್ದ ಅನುಶ್ರೀ ಮತ್ತು ಸಿನಿಮಾದ ನಾಯಕ ನಾಯಕಿ ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಬಂದಿದ್ದರು. ಈ ವೇಳೆ ಮಲೈಕಾ ವಸುಪಾಲ್ ಮತ್ತು ನಾಗಭೂಷಣ್ ಅನುಶ್ರೀ ಮದುವೆ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ತನ್ನ ಮದುವೆ ಇದೇ ವರ್ಷ ಆಗಲಿದೆ ಎಂದು ಬಿಗ್‌ ಹಿಂಟ್‌ ಕೊಟ್ಟಿದ್ದಾರೆ.

ಆ ಬಳಿಕ ಹುಡುಗ ಹೇಗಿರಬೇಕೆಂದು ಮಾತನಾಡಿದ ಅವರು, "ನಾನು ಮದುವೆಯಾಗುವ ಹುಡುಗ ತುಂಬಾ ಜವಾಬ್ದಾರಿಯುತವಾಗಿರಬೇಕು, ನನ್ನ ವಿಚಾರದಲ್ಲಿ ಅಲ್ಲ, ಬದಲಾಗಿ ಅವನ ಲೈಫ್‌ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು" ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, "ಈ ವರ್ಷವೇ ಮದುವೆ ಆಗುತ್ತೆ ಗ್ಯಾರಂಟಿ" ಎಂದು ಹೇಳಿಕೊಂಡಿದ್ದಾರೆ.

ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ, ಅವರ ಹುಟ್ಟುಹಬ್ಬದಂದೇ ಸಿಹಿಸುದ್ದಿ ಕೊಡುವುದಾಗಿ ಹೇಳಿಕೊಂಡಿದ್ದರು. ಆದರೆ ಅಂದು ಯಾವ ವಿಚಾರವನ್ನೂ ಬಹಿರಂಗಪಡಿಸಿರಲಿಲ್ಲ. ಆದರೆ ಇದೀಗ ತಮ್ಮ ಭಾವಿ ಪತಿಯ ಬಗ್ಗೆ ಪರಿಚಯ ಮಾಡಿದ್ದಾರೆ. ತಮ್ಮ ಇನ್‌ಸ್ಟಾದಲ್ಲಿ ಲೈವ್‌ ಸಮಯದಲ್ಲೇ 2025ರಲ್ಲಿ ಮದುವೆ ಆಗುವುದಾಗಿ ಘೋಷಿಸಿದ್ದಾರೆ.

 

 

ಅಂದಹಾಗೆ ಡಾಲಿ ಧನಂಜಯ ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ಚಿತ್ರ ವಿದ್ಯಾಪತಿ ಸಿನಿಮಾ ಏಪ್ರಿಲ್ 10ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಇತ್ತೀಚಿನ ದಿನಗಳಲ್ಲಿ ನಟನಾಗಿ ನೆಲೆ ಕಂಡುಕೊಳ್ಳುತ್ತಿರುವ ನಾಗಭೂಷಣ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ.

ಇದನ್ನೂ ಓದಿ: ಕೇವಲ ವ್ಯವಹಾರಕ್ಕೆ ಸೀಮಿತವಾಗಿರದೆ ಪತಂಜಲಿ ಸಮಾಜದ ಸುಧಾರಣೆಗಾಗಿ ಹೇಗೆ ಕೆಲಸ ಮಾಡುತ್ತಿದೆ?  

ಅನುಶ್ರೀಗೆ ಈಗ ೩೮ ವರ್ಷ ವಯಸ್ಸು. ಇವರ ಹೆಸರಲ್ಲಿ ಸುಮಾರು 50 ಕೋಟಿ ರೂಪಾಯಿ ಇದೆ ಎನ್ನಲಾಗುತ್ತದೆ. ಆದರೆ, ಈ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿಯಿಲ್ಲ. ಇನ್ನು ಒಂದೊಂದು ಕಾರ್ಯಕ್ರಮದಲ್ಲೂ ನಿರೂಪಣೆ ಮಾಡಲು ಲಕ್ಷ ಲಕ್ಷ ಸಂಭಾವನೆ ಪಡೆಯುವ ಅನುಶ್ರೀ ತಮ್ಮ ಮೊದಲ ಸಂಭಾವನೆಯಾಗಿ ಪಡೆದಿದ್ದು ರೂ. ೨೫೦.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News