'ಅಂತಹ ವ್ಯಕ್ತಿ ಜೊತೆಗೆ ಮಾತ್ರ ಸಂಸಾರ..' ಕೊನೆಗೂ ವೈಯಕ್ತಿಕ ಜೀವನದ ಸತ್ಯ ಬಿಚ್ಚಿಟ್ಟ ಖ್ಯಾತ ನಿರೂಪಕಿ!

Vishnu Priya: ಸೋಶಿಯಲ್ ಮೀಡಿಯಾ ಜಮಾನದಲ್ಲಿ ಬರೀ ನಟ-ನಟಿಯರಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ನಿರೂಪಕರೂ ಕೂಡ ಭಾರೀ ಚರ್ಚೆಯಲ್ಲಿರುತ್ತಾರೆ. ಇದೀಗ ಹಾ*ಟ್ ಆಂಕರ್ ಒಬ್ಬರು ತಮ್ಮ ಜೀವನ ಸಂಗಾತಿ, ವೈವಾಹಿಕ ಬದುಕಿನ ಬಗ್ಗೆ ಓಪನ್ ಕಾಮೆಂಟ್ಸ್ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.   

Written by - Yashaswini V | Last Updated : Nov 6, 2025, 12:46 PM IST
  • ಈಕೆ ತನ್ನ ಗ್ಲಾಮರ್‌ನಿಂದ ಜನರ ಗಮನ ಸೆಳೆಯುತ್ತಿರುವ ಟಾಪ್ ನಿರೂಪಕಿ
  • ನಿರೂಪಣೆ ಅಷ್ಟೇ ಅಲ್ಲ ಸಿನಿಮಾ ರಂಗದಲ್ಲೂ ತಮ್ಮ ನಟನೆ ಮೂಲಕ ಬಿಗ್ ಫ್ಯಾನ್ ಫಾಲೋಯಿಂಗ್ ಹೊಂದಿರುವ ಸುಂದರಿ
  • ಕಾರ್ಯಕ್ರಮವೊಂದರಲ್ಲಿ ಈ ಸ್ಟಾರ್ ನಟಿ, ಆಂಕರ್ ಹೇಳಿಕೆ ಕೇಳಿ ಅಭಿಮಾನಿಗಳು ಶಾಕ್
'ಅಂತಹ ವ್ಯಕ್ತಿ ಜೊತೆಗೆ ಮಾತ್ರ ಸಂಸಾರ..' ಕೊನೆಗೂ ವೈಯಕ್ತಿಕ ಜೀವನದ ಸತ್ಯ ಬಿಚ್ಚಿಟ್ಟ ಖ್ಯಾತ ನಿರೂಪಕಿ!

Anchor Vishnu Priya: ನಟನೆ ಮಾತ್ರವಲ್ಲದೆ, ವಿಭಿನ್ನ ಶೈಲಿಯ ಆ್ಯಂಕರಿಂಗ್ ಮೂಲಕ ಮನೆಮಾತಾಗಿರುವ ವಿಷ್ಣು ಪ್ರಿಯ, ಸಾಮಾಜಿಕ ಮಾಧ್ಯಮಗಳಲ್ಲಿ ಪಡ್ಡೆ ಹೈಕಳ ಫೇವರೆಟ್. ಟಾಲಿವುಡ್‌ನಲ್ಲಿ ನಟಿಯಾಗಿ, ಆಂಕರ್ ಆಗಿ ಖ್ಯಾತಿ ಪಡೆದಿರುವ ಈಗೆ ಆಗಾಗ್ಗೆ ಸೋಶಿಯಲ್ ಮಿಡಿಯಾದಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡುವ ಮೂಲಕವೂ ಸುದ್ದಿಯಲ್ಲಿರುತ್ತಾರೆ. ಇದೀಗ ಮದುವೆಯ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ವಿಷ್ಣು ಪ್ರಿಯ ಮತ್ತೆ ಬಿಸಿ ಬಿಸಿ ಚರ್ಚೆಯ ವಿಷಯವಾಗಿದ್ದರೆ. 

Add Zee News as a Preferred Source

ವಾಸ್ತವವಾಗಿ, ಇತ್ತೀಚಿಗೆ ಜಬರ್ದಸ್ತ್ ಖ್ಯಾತಿಯ ವರ್ಷಾ ನಡೆಸಿಕೊಡುವ 'ಕಿಸ್ಸಿಕ್ ಟಾಕ್' ಕಾರ್ಯಕ್ರಮದಲ್ಲಿ ಅತಿಥಿಯಾಗಿ ವಿಷ್ಣು ಪ್ರಿಯಾ ಕಾಣಿಸಿಕೊಂಡಿದ್ದರು. ಈ ವೇಳೆ ವರ್ಷಾ ತಮಾಷೆಯಾಗಿ ಕೇಳಿದ ಪ್ರಶ್ನೆಗಳಿಗೆ ವಿಷ್ಣು ಪ್ರಿಯಾ ಉತ್ತರಿಸಿದ ರೀತಿ ಎಲ್ಲರನ್ನೂ ಮುಖ್ಯವಾಗಿ ಅವರ ಅಭಿಮಾನಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ. 

ವರ್ಷಾ ತಮ್ಮ ಕಾರ್ಯಕ್ರಮದಲ್ಲಿ ವಿಷ್ಣು ಪ್ರಿಯ ಅವರಿಗೆ "ನಿಮ್ಮ ಭಾವಿ ಪತಿ ಯಾರು? ಅವರು ಹೇಗಿರಬೇಕು" ಎಂದು ಕೇಳಿದರು. ಇದಕ್ಕೆ ಮುಕ್ತವಾಗಿಯೇ ಉತ್ತರಿಸಿದ ವಿಷ್ಣು ಪ್ರಿಯಾ, 'ನಾನು ಶಿವನಂತರ ಸಮತೋಲಿತ ಮನಸ್ಸಿನ ವ್ಯಕ್ತಿಯನ್ನು ಇಷ್ಟಪಡುತ್ತದೆ. ಒಂದೊಮ್ಮೆ ಅಂತಹ ವ್ಯಕ್ತಿ ಸಿಕ್ಕರೆ ಮದುವೆಯಾಗುತ್ತೇನೆ. ಇಲ್ಲದಿದ್ದರೆ ಸನ್ಯಾಸಿಯಾಗುವುದಾಗಿ ಹೇಳಿದರು.' 

ಇದನ್ನೂ ಓದಿ- ವಿವಾಹಿತ ನಟನೊಂದಿಗೆ 15 ವರ್ಷ ಡೇಟ್‌ ಮಾಡಿ ‌54 ವರ್ಷವಾದ್ರೂ ಒಂಟಿಯಾಗಿಯೇ ಉಳಿದ ಸ್ಟಾರ್‌ ನಟಿ!

ಈ ವೇಳೆ ವರ್ಷಾ, ನೀವು ಇಷ್ಟಪಡುವ ಹುಡುಗ ಸಿಗದಿದ್ರೆ ನಿಜವಾಗಲೂ ಸನ್ಯಾಸಿ ಆಗ್ತೀರಾ ಎಂದು ಪ್ರಶ್ನಿಸಿದಾಗ, "ಹೌದು, ಅದು ನನ್ನ ಮನಸ್ಸಿನಲ್ಲಿರುವ ಆಲೋಚನೆ. ನಾನು ಇಂತಹ ವ್ಯಕ್ತಿಯನ್ನು ಮಾತ್ರ ಇಷ್ಟಪಡುತ್ತೇನೆ ಹಾಗೂ ಅವನನ್ನೇ ಮದುವೆಯಾಗುತ್ತೇನೆ. ಇದು ಸಾಧ್ಯವಾಗದಿದ್ದಲ್ಲಿ, ಒಂಟಿಯಾಗಿಯೇ ಜೀವನ ಕಳೆಯುತ್ತೇನೆ" ಎಂದು ವಿಷ್ಣು ಪ್ರಿಯಾ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. 

ಪ್ರಸ್ತುತ, ಬೆಳ್ಳಿತೆರೆಯಲ್ಲೂ ತಮ್ಮ ಕಲಾ ಕೌಶಲ್ಯದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ವಿಷ್ಣು ಪ್ರಿಯಾ, ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಮೊದಲು ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅಲ್ಲದೆ, ಕಿರುತೆರೆಯಲ್ಲಿ ನಿರೂಪಕಿಯಾಗಿಯೂ ಸಾಕಷ್ಟು ಹೆಸರು ಮಾಡಿದ್ದಾರೆ. 

ಇದನ್ನೂ ಓದಿ- ಫೋಟೋಶೂಟ್‌ನಲ್ಲಿ ಆರಂಭವಾದ ಪ್ರೀತಿ.. ಬಾಲ್ಕನಿಯಲ್ಲಿ ಪ್ರಪೋಸ್! ಈ ಬಾಲಿವುಡ್‌ ಪವರ್‌ ಕಪಲ್‌ ಲವ್‌ಸ್ಟೋರಿ ಯಾವ ಸಿನಿಮಾಗೂ ಕಮ್ಮಿಯಿಲ್ಲ..

ಟಾಲಿವುಡ್‌ನ ನಿರೂಪಕಿಯರಲ್ಲಿ ಅನಸೂಯಾ, ರಶ್ಮಿ ಗೌತಮ್, ಶ್ರೀಮುಖಿ ಬಳಿಕ ಗ್ಲಾಮರ್‌ನಿಂದ ಗಮನ ಸೆಳೆಯುತ್ತಿರುವ ನಿರೂಪಕರ ಪಟ್ಟಿಯಲ್ಲಿ ವಿಷ್ಣು ಪ್ರಿಯಾ ಅಗ್ರಸ್ಥಾನದಲ್ಲಿದ್ದಾರೆ. 
 

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News