Ankita Lokhande pregnant: ಸಿನಿಮಾ ರಂಗದಲ್ಲಿ ವಿಚ್ಛೇದನ, ಲವ್ ಅಫೇರ್ ತೀರಾ ಸಾಮಾನ್ಯ ಎಂಬ ಸ್ಥಿತಿಗೆ ಬಂದಿದೆ. ವಿಚ್ಛೇದನ ತೆಗೆದುಕೊಂಡು ಬಿಡುತ್ತಾರೆ ಎಂಬಂತಿದ್ದ ಈ ನಟಿ ಈಗ ಗರ್ಭಿಣಿಯಾಗಿದ್ದಾರೆ. ಶಾಕಿಂಗ್ ಸಂಗತಿ ಏನೆಂದರೆ ಈ ವಿಚಾರ ಅವರ ಪತಿಗೆ ಗೊತ್ತೇ ಇಲ್ಲವಂತೆ. ಈ ನಟಿಯೇ ಖುದ್ದಾಗಿ ಇದರ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸ್ಟಾರ್ ನಟಿಯ ಹೇಳಿಕೆ ಇದೀಗ ಸಿನಿರಂಗವನ್ನೇ ಬೆರಗುಗೊಳಿಸಿದೆ.
ಜನಪ್ರಿಯ ಕಿರುತೆರೆ ನಟಿ ಅಂಕಿತಾ ಲೋಖಂಡೆ ಪ್ರಸ್ತುತ ಕಲರ್ಸ್‌ನ ಲಾಫ್ಟರ್ ಚೆಫ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ನಲ್ಲಿ ಅಂಕಿತಾ ಲೋಖಂಡೆ ತಮ್ಮ ಪತಿ ವಿಕ್ಕಿ ಜೈನ್ ಜೊತೆ ಕಾಣಿಸಿಕೊಂಡಿದ್ದಾರೆ. ಅಂಕಿತಾ ಮತ್ತು ವಿಕ್ಕಿ 14 ಡಿಸೆಂಬರ್ 2021 ರಂದು ವಿವಾಹವಾದರು. ಅವರ ವಿವಾಹವಾಗಿ 4 ವರ್ಷಗಳಿಗಿಂತ ಹೆಚ್ಚು ಸಮಯವಾಗಿದೆ.
ಅಭಿಮಾನಿಗಳು ಸಹ ಅಂಕಿತಾ ಲೋಖಂಡೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡಬೇಕೆಂದು ಕಾಯುತ್ತಿದ್ದಾರೆ. ಈಗ ನಟಿ ಸ್ವತಃ ಇದನ್ನು ಒಪ್ಪಿಕೊಂಡಿದ್ದಾರೆ. ವಾಸ್ತವವಾಗಿ, ಇತ್ತೀಚಿನ ಸಂಚಿಕೆಯ ಪ್ರೋಮೋ ವೈರಲ್ ಆಗುತ್ತಿದೆ, ಅದರಲ್ಲಿ ಅಂಕಿತಾ ಕೃಷ್ಣ ಅವರ ಮುಂದೆ ನಿಂತು ಈ ಸುದ್ದಿ ಹೇಳುತ್ತಾರೆ.
ಲಾಫ್ಟರ್ ಚೆಫ್ಸ್ ಶೋನ ಆ್ಯಂಕರ್ ಕೃಷ್ಣ ಅಭಿಷೇಕ್ ಅವರು ಅಂಕಿತಾ ಅಮರ್ ಬಳಿಯಿಂದ ಒಂದು ಪದಾರ್ಥವನ್ನು ಕಸಿದುಕೊಂಡು ಓಡುತ್ತಾರೆ. ಇದರಿಂದ ಅಂಕಿತಾ ಕೂಡ ಅವರ ಹಿಂದೆ ಓಡಬೇಕಾಯಿತು. ಈ ವೇಳೆ ‘ನಾನು ಪ್ರೆಗ್ನೆಂಟ್’ ಎಂದು ಅಂಕಿತಾ ಜೋರಾಗಿ ಹೇಳುತ್ತಾರೆ. ಇದರಿಂದ ಎಲ್ಲರೂ ಶಾಕ್ ಆಗುತ್ತಾರೆ. ನಂತರ ಅಂಕಿತಾ ಗರ್ಭಿಣಿಯಾಗಿರುವುದರಿಂದ ಅವರನ್ನು ಹೆಚ್ಚು ಓಡಿಸಬಾರದು ಎಂದು ಹೇಳಿ ನಿಲ್ಲಿಸುತ್ತಾರೆ.
ಕೃಷ್ಣ ಅಭಿಷೇಕ್ ಇಂದು ಲಲ್ಲಾ ನಮ್ಮ ಮನೆಗೆ ಬರುತ್ತಿದ್ದಾನೆ ಎಂದು ಹಾಡಲು ಪ್ರಾರಂಭಿಸುತ್ತಾರೆ. ಇದನ್ನು ಕೇಳಿದ ಕರಣ್ ಕುಂದ್ರಾ ಕೂಡ ಅಂಕಿತಾ ಲೋಖಂಡೆ ಅವರ ಬಳಿ ಬರುತ್ತಾರೆ. ನೀನು ನಿಜವಾಗಲೂ ಗರ್ಭಿಣಿಯೇ ಎಂದು ಕೇಳುತ್ತಾರೆ.
ಇನ್ನೊಂದು ಅಚ್ಚರಿಯ ವಿಚಾರ ಎಂದರೆ ಈ ಶೋನಲ್ಲಿ ಅಂಕಿತಾ ಅವರ ಪತಿ ವಿಕ್ಕಿ ಕೂಡ ಇದ್ದರು. ಆದರೆ ಈ ಬಗ್ಗೆ ಅವರು ಮೌನವಹಿಸಿದ್ದಾರೆ. ಇದನ್ನು ಕಂಡ ಕೆಲವು ನೆಟ್ಟಿಜನ್ಸ್ ವಿಕ್ಕ ಅವರಿಗೆ ಈ ವಿಚಾರ ತಿಳಿದಿಲ್ಲವೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಈ ಪ್ರೋಮೋ ಹಂಚಿಕೊಂಡ ತಕ್ಷಣ, ಅನೇಕ ಜನರು ಅದಕ್ಕೆ ಪ್ರತಿಕ್ರಿಯಿಸಲು ಪ್ರಾರಂಭಿಸಿದರು. ಕೆಲವರು ನಟಿಯನ್ನು ಅಭಿನಂದಿಸಿದರೆ, ಇತರರು ಇದು ಕೇವಲ ತಮಾಷೆಯೇ ಎಂದು ಆಶ್ಚರ್ಯಪಟ್ಟರು. ಒಬ್ಬ ಬಳಕೆದಾರರು- "ಇದು ನಿಜವಾಗಿದ್ದರೆ, ನಿಮ್ಮಿಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು. ದೇವರು ನಿಮ್ಮನ್ನು ಆಶೀರ್ವದಿಸಲಿ, ಆದರೆ ಸುಳ್ಳು ಹೇಳಬೇಡಿ." ಎಂದು ಬರೆದಿದ್ದಾರೆ.
ಇತ್ತೀಚೆಗೆ ಅಂಕಿತಾ ಮತ್ತು ವಿಕ್ಕಿ ದಂಪತಿಗಳು ಕೌನ್ಸೆಲಿಂಗ್ ಪ್ರಯತ್ನಿಸಬೇಕೆಂದು ಸೂಚಿಸಿದಾಗ ಅವರ ನಡುವೆ ಜಗಳವಾಯಿತು. ವಿಕ್ಕಿ ಕೌನ್ಸೆಲಿಂಗ್‌ಗೆ ಹೋಗಲು ನಿರಾಕರಿಸುತ್ತಾರೆ. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಅಂಕಿತಾ ಮತ್ತು ವಿಕ್ಕಿ ಡಿವೋರ್ಸ್ ಪಡೆಯಲಿದ್ದಾರೆ ಎಂಬಷ್ಟರ ಮಟ್ಟಿಗೆ ಅವರ ನಡುವಿನ ಸಂಬಂಧ ಹಾಳಾಗಿತ್ತು. ಅಂಕಿತಾ ಮತ್ತು ವಿಕ್ಕಿ ಡಿವೋರ್ಸ್ ವದಂತಿ ಕೂಡ ಹಬ್ಬಿತ್ತು. ಆದರೆ ಅಂಕಿತಾ ಮತ್ತು ವಿಕ್ಕಿ ಈಗ ಒಟ್ಟಿಗೆ ಇದ್ದಾರೆ.
ಇದನ್ನೂ ಓದಿ: ಈ ದಿನದಿಂದಲೇ ಬಿಗ್ ಬಾಸ್ ಹೊಸ ಸೀಸನ್ ಶುರು.. ಹೊಸ ಹೋಸ್ಟ್, ಸ್ಪರ್ಧಿಗಳ ಹೆಸರು ಲೀಕ್ !!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









