)
ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ಬಂಧನವಾಗಿದೆ. ಹಾಗಾದ್ರೆ ರಮ್ಯಾಗೆ ದರ್ಶನ್ ಅಭಿಮಾನಿ ಏನೂ ಮಸೇಜ್ ಮಾಡಿದ್ದ, ಬಳಸಿದ್ದ ಪದ ಎಂತದ್ದು ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಹಾಗೂ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸದ್ಯ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಂಜುನಾಥ ಎಂಬಾತನನ್ನು ಸೈಬರ್ ಕ್ರೈಂ ಪೊಲೀಸರು ಲಾಕ್ ಮಾಡಿದ್ದಾರೆ. ಹತ್ಯೆಯಾಗಿರುವ ರೇಣುಕಸ್ವಾಮಿ ಕುಟುಂಬಕ್ಕೆ ಶೀಘ್ರವೇ ನ್ಯಾಯ ಸಿಗಲಿದೆ ಎಂದು ಎಕ್ಸ್ ನಲ್ಲಿ ನಟಿ ರಮ್ಯಾ ಪೋಸ್ಟ್ ಹಾಕಿದ್ದರು. ಇದಕ್ಕೆ ಕಿಡಿಗೇಡಿಗಳು ಆಶ್ಲೀಲವಾಗಿ ಸಂದೇಶ ಕಳುಹಿಸಿದ್ದರು. ಅದ್ರಲ್ಲಿ ಈ ಮಂಜುನಾಥ ಕೂಡ ಒಬ್ಬ.
ಈ ಮಂಜ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು. ದರ್ಶನ್ ಕಟ್ಟಾ ಅಭಿಮಾನಿಯಂತೆ. ಹೀಗಾಗಿ ನಟಿ ರಮ್ಯಾ ಪೋಸ್ಟ್ ಹಾಕಿದ್ದಕ್ಕೆ ಉರ್ಕೊಂಡು ರಮ್ಯಾ ಹೆಸರನ್ನು ಸಂಸತ್ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಜೊತೆ ಸೇರಿಸಿ ಕೆಟ್ಟದಾಗಿ ಮೆಸೇಜ್ ಮಾಡಿದ್ದ. ಯಾವಾಗ ನಟಿ ರಮ್ಯಾ ಇಂತಹ ಪುಂಡರ ವಿರುದ್ಧ ದೂರು ಕೊಟ್ರೋ ಇವನು ಅಕೌಂಟ್ ಡಿಲೀಟ್ ಮಾಡಿ ಪೊಲೀಸರಿಂದ ಬಚಾವ್ ಆಗಲು ನೋಡಿದ್ದ.ಆದ್ರೆ ಐಪಿ ಅಡ್ರೆಸ್ ಮೂಲಕ ಈ ಮಂಜನನ್ನು ಪೊಲೀಸರು ಲಾಕ್ ಮಾಡಿದ್ದಾರೆ.
ಓಬಣ್ಣ, ರಾಜೇಶ್, ಗಂಗಾಧರ, ಭುವನ್ ಸೇರಿ ಈಗ ಮಂಜುನಾಥ್ ಲಾಕ್ ಆಗಿದ್ದಾರೆ. ಅಭಿಮಾನದ ಹೆಸ್ರಲ್ಲಿ ಅಂಧಭಿಮಾನಿಗಳಾಗಿ ಪೊಲೀಸರ ಅತಿಥಿಗಳಾಗಿದ್ದಾರೆ. ಇನ್ನೂ ಈ ಮಂಜುನಾಥ ಓದಿ ಜೀವನ ಕಟ್ಟಿಕೊಳ್ಳುವ ವಯಸ್ಸಲ್ಲಿ ಇಲ್ಲದ ಉಸಾಬರಿ ಮೈಮೇಲೆ ತಗೊಂಡು ಜೈಲು ಸೇರುವ ಪರಿಸ್ಥಿತಿ ತಂದುಕೊಂಡಿದ್ದಾನೆ. ಪೊಲೀಸರು ಅಷ್ಟೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮತ್ತಷ್ಟು ಜನ ಲಾಕ್ ಆಗಲಿದ್ದಾರೆ. ಅದೆನೇ ಹೇಳಿ. ಅಭಿಮಾನ ಅನ್ನೋದು ಟಿಕೆಟ್ ತಗೆದುಕೊಂಡು ಸಿನಿಮಾ ನೋಡೋದಕ್ಕೆ ಮಾತ್ರ ಸೀಮಿತವಾಗಿರಬೇಕು. ಅದು ಬಿಟ್ಟು ಬೇರೆಯವರಿಗೆ ತಮ್ಮ ಅಭಿಮಾನದ ಹೆಸರಲ್ಲಿ ಇತರರ ವೈಯುಕ್ತಿಕ ನಿಂದನೆ ಸರಿಯಲ್ಲ ಎಂಬುದನ್ನ ಅಂಧಾಭಿಮಾನಿಗಳು ಇನ್ನಾದ್ರೂ ತಿಳಿದುಕೊಳ್ಳಬೇಕಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.