)
Anupama Gowda Marriage: ಕನ್ನಡದ ಕಿರುತೆರೆಯಲ್ಲಿ ಮಾತಿನ ಮೂಲಕವೇ ಜನರ ಮನಗೆದ್ದ ಖ್ಯಾತ ನಿರೂಪಕಿ ಅನುಪಮಾ ಗೌಡ ಇದೀಗ ನಾನು ಈ ಸ್ಟಾರ್ ನಟನನ್ನು ಇಷ್ಟಪಟ್ಟಿದ್ದೆ, ಮದುವೆನೂ ಆಗಬೇಕು ಅನ್ಕೊಂಡಿದ್ದೆ ಎಂದು ಬಿಗ್ ಸೀಕ್ರೇಟ್ ಒಂದನ್ನು ರಿವೀಲ್ ಮಾಡಿದ್ದಾರೆ.
ಅನುಪಮಾ ಗೌಡ ಸಂದರ್ಶನವೊಂದರಲ್ಲಿ ತಮ್ಮ ಮದುವೆ ವಿಚಾರವನ್ನು ಮಾತನಾಡಿದ್ದಾರೆ. ಅನುಪಮಾ ಮದುವೆ ವಿಚಾರವಾಗಿ ಆಗಾಗಲೇ ಸುದ್ದಿಯಾಗುತ್ತಲೇ ಇರುತ್ತಾರೆ. ತಮ್ಮ ಫಸ್ಟ್ ಕ್ರಶ್ ಬಗ್ಗೆ ಅನುಪಮಾ ಗೌಡ ರಿವೀಲ್ ಮಾಡಿದ್ದಾರೆ. ಅನುಪಮಾ ಗೌಡ ತಾವು ಒಬ್ಬ ಸ್ಟಾರ್ ನಟನನ್ನು ಮದುವೆ ಆಗಲು ಬಯಸಿದ್ದರು ಎಂದು ಸಹ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನಾನು ಆಗ ಪಿಯುಸಿ ಫೇಲ್ ಆಗಿದ್ದೆ. ಓದೋಕೆ ಒಂಚೂರು ಇಷ್ಟ ಇರಲಿಲ್ಲ. ಆ ಸಮಯದಲ್ಲಿ ನನ್ನ ಮೊದಲ ಸೆಲಬ್ರೆಟಿ ಕ್ರಶ್ ಒಬ್ಬರಿದ್ದರು. ಅವರೇ ವಿಜಯ್ ರಾಘವೇಂದ್ರ ಎಂದು ಅನುಪಮಾ ಗೌಡ ಹೇಳಿದ್ದಾರೆ.
ಅದು ಬರೀ ಕ್ರಶ್ ಅಷ್ಟೇ ಆಗಿರಲಿಲ್ಲ. ನನಗೆ ಅವರನ್ನು ಮದುವೆ ಆಗಬೇಕು ಎಂಬ ಆಸೆಯಿತ್ತು. ನಾನು ಅವರನ್ನೇ ಮದುವೆ ಆಗಬೇಕು ಎಂದುಕೊಂಡಿದ್ದೆ ಎಂದು ಅನುಪಮಾ ಗೌಡ ರಿವೀಲ್ ಮಾಡಿದ್ದಾರೆ.
ನಾನು ಇಂಡಸ್ಟ್ರಿಗೆ ಬಂದ್ಮೇಲೆ ಅವರಿಗೂ ಈ ವಿಚಾರ ಗೊತ್ತಾಗಿತ್ತು. ಹಿಂದೊಮ್ಮೆ ಒಟ್ಟಿಗೆ ನಾನು ವಿಜಯ್ ರಾಘವೇಂದ್ರ ಕೆಲಸ ಮಾಡುವಾಗ ಎಲ್ಲರ ಮುಂದೆ ಆ ಘಟನೆ ಹೇಳುವಂತೆ ಹೇಳಿದ್ದರು ಎಂದು ಅನುಪಮಾ ತಿಳಿಸಿದ್ದಾರೆ.
ಈ ವಿಚಾರ ಸಖತ್ ಮಜವಾಗಿದ್ದು, ಅನುಪಮಾ ಗೌಡ ಮೊದಲಿಗೆ ವಿಜಯ್ ರಾಘವೇಂದ್ರ ಅವರ ಅಭಿಮಾನಿ ಆಗಿದ್ದರಂತೆ. ಆದರೆ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿ ಆದೆ ಎಂದಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.