)
Actress Anushka Shetty: ಸಿನಿಮಾಗಳಲ್ಲಿ ನಾಯಕಿ ಪಾತ್ರ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ನಟಿಯರು ಹೊಸದಾಗಿ ಇಂಡಸ್ಟ್ರಿಗೆ ಕಾಲಿಟ್ಟು ನೆಲೆಯೂರುವುದು ಬಹಳ ಕಷ್ಟ. ಸಿನಿಮಾ ಆಫರ್ಗಳಿಗಾಗಿ ಹರಸಾಹಸ ಮಾಡಬೇಕಾಗುತ್ತದೆ.. ಇಂತಹ ಎಲ್ಲ ಸವಾಗಳನ್ನು ಎದುರಿಸಿ ಸಿನಿಮಾ ಸಕ್ಸಸ್ನ ನಂತರವೇ ನಟಿಯರಿಗೆ ಆಫರ್ಗಳು ಸಿಗುತ್ತವೆ ಎಂದರೇ ತಪ್ಪಾಗುವುದಿಲ್ಲ..
ಇದೆ ರೀತಿ ತಮ್ಮ ನಟನೆಯ ಮೂಲಕ ಮನ್ನಣೆ ಪಡೆದ ಅನುಷ್ಕಾ ಶೆಟ್ಟಿ, ಅವರ ವೃತ್ತಿಜೀವನದಲ್ಲಿ ಮಾಡಿದ ಆ ಒಂದೇ ಒಂದು ಸಿನಿಮಾದಿಂದ ವರ್ಷವಿಡೀ ಕಣ್ಣಿರು ಹಾಕಿದ್ದರಂತೆ. ಅಂದಿನ ಅದೇ ಸಿನಿಮಾ ಸ್ವೀಟಿ ಹಣೆಬರಹವನ್ನೇ ಚೇಂಜ್ ಮಾಡಿತ್ತು. ಇಲ್ಲಿಂದಲೇ ಅನುಷ್ಕಾ ಟಾಲಿವುಡ್ನ ಸೂಪರ್ ಲೇಡಿ ಸ್ಟಾರ್ ಆಗಿ ಬೆಳೆದರು.
ಚಿತ್ರರಂಗಕ್ಕೆ ಬರುವ ಮೊದಲು ಅನುಷ್ಕಾ ಶೆಟ್ಟಿ ಯೋಗ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಆಗ ಅಕ್ಕಿನೇನಿ ನಾಗಾರ್ಜುನ ಜೊತೆ 'ಸೂಪರ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಆಫರ್ ಬಂತು. ಈಚಿತ್ರದಲ್ಲಿ ಹಿರೋಯಿನ್ ಆಗಿ ಎಂಟ್ರಿ ಕೊಟ್ಟ ಮೇಲೆ ಅವರಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿತು. ಆದರೇ ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ಅನುಷ್ಕಾ ಒಂದು ವರ್ಷ ಕಣ್ಣೀರಿಟ್ಟಿದ್ದರಂತೆ.. ಅಷ್ಟು ಒಳ್ಳೆಯ ಮನ್ನಣೆ ದೂರೆತರೂ ಸ್ವೀಟಿ ಅತ್ತಿದ್ದು ಯಾಕೆ? ಎನ್ನುವುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ..
ಈ ಕುರಿತು ಮಾತನಾಡಿದ ಅನುಷ್ಕಾ.. ʼನಾನು ಆಡಿಷನ್ಗೆ ಹೋದಾಗ ಫೋಟೋಶೂಟ್ ನೋಡಿ ಅತ್ತುಬಿಟ್ಟಿದ್ದೆ. ಆದರೆ ನನಗೆ ನಾಗಾರ್ಜುನ್ ಅಂದ್ರೆ ಅವರು ನನ್ನ ಲೈಫನಲ್ಲಿ ಸ್ಪೆಷಲ್, ಅವತ್ತು ಅವರು ಈ ಹುಡುಗಿಗೆ ಏನೂ ಗೊತ್ತಿಲ್ಲ ಎಂದಿದ್ದರು. ಆದರೂ ನನಗೆ ಪೊಟೆನ್ಶಿಯಲ್ ಇದೆ ಎಂದು ನಂಬಿ 'ಸೂಪರ್' ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದರು. ಇದೆ ಕಾರಣಕ್ಕೆ ನನಗೆ ನಾಗಾರ್ಜುನ ಸ್ಪೆಷಲ್ʼ ಎಂದು ಹೇಳಿದ್ದರು..
ಇದಲ್ಲದೇ ʼಸೂಪರ್ ಸಿನಿಮಾದಲ್ಲಿ ಹಿರೋಯಿನ್ ಪಾತ್ರ ನಿಭಾಯಿಸಲು ಮಾಡರ್ನ್, ಗ್ಲಾಮರಸ್ ಆಗಿ ಕಾಣಲು ಶಾಟ್ ಡ್ರೇಸ್ ಧರಿಸಬೇಕಿತ್ತು. ಆದರೆ ನನ್ನದು ಸಂಪ್ರದಾಯಸ್ಥ ಕುಟುಂಬ, ಅಂತಹದ್ದು ನನಗೆ ಅಭ್ಯಾಸವೇ ಇರಲಿಲ್ಲ. ಇದರಿಂಲೇ ಒಂದು ವರ್ಷ ಅತ್ತಿದ್ದೆʼ ಎಂದಿದ್ದಾರೆ ಅನುಷ್ಕಾ.
ಜೊತೆಗೆ.. ʼನಾನು ಆಗ ತಾನೇ ನಟನೆಯಿಂದ ಸ್ಟಾರ್ ಆಗುವ ಕನಸಿನಿಂದ ಇಂಡಸ್ಟ್ರಿಗೆ ಕಾಲಿಟ್ಟಿದೆ. ಇಂಡಸ್ಟ್ರಿಗೆ ಹೊಸಬಳು ಎನ್ನುವ ಕಾರಣ ಚಿಕ್ಕ ಬಟ್ಟೆ ಹಾಕಲು ಮುಜುಗರವಾಗುತಿತ್ತು. ಇದರಿಂದ ತುಂಬಾ ಕಣ್ಣೀರು ಹಾಕಿದ್ದೆ..ʼ ಎಂದು ಅನುಷ್ಕಾ ಶೂಟಿಂಗ್ ಅನುಭವ ಬಿಚ್ಚಿಟ್ಟಿದ್ದಾರೆ..