A R Rahman Religion: ಸಂಗೀತ ಸಂಯೋಜಕ ಎ ಆರ್ ರೆಹಮಾನ್ ತಮ್ಮ 29 ವರ್ಷಗಳ ದಾಂಪತ್ಯ ಜೀವನಕ್ಕೆ ವಿಚ್ಛೇದನ ಘೋಷಿಸಿದ್ದಾರೆ. ಎಆರ್ ರೆಹಮಾನ್ ಪತ್ನಿ ಸಾಯಿರಾ ಬಾನು ಅವರಿಂದ ಬೇರ್ಪಟ್ಟಿದ್ದಾರೆ. ಅಂದಹಾಗೆ, 1980 ರ ದಶಕದಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಅವರು ಜನಿಸಿದ್ದು ಹಿಂದೂ ಕುಟುಂಬದಲ್ಲಿ.


COMMERCIAL BREAK
SCROLL TO CONTINUE READING

2000 ರಲ್ಲಿ, ಬಿಬಿಸಿ ಟಾಕ್ ಶೋನಲ್ಲಿ ತಾವು ಮತಾಂತರಗೊಂಡ ಬಗ್ಗೆ ರೆಹಮಾನ್‌ ಮಾತನಾಡಿದ್ದರು. "ನನ್ನ ತಂದೆಯ ಕೊನೆಯ ದಿನಗಳಲ್ಲಿ ಒಬ್ಬ ಸೂಫಿ ಚಿಕಿತ್ಸೆ ನೀಡುತ್ತಿದ್ದರು. 7-8 ವರ್ಷಗಳ ನಂತರ ನಾವು ಅವರನ್ನು ಭೇಟಿಯಾದಾಗ ಮತ್ತೊಂದು ಆಧ್ಯಾತ್ಮಿಕ ಮಾರ್ಗವನ್ನು ಅಳವಡಿಸಿಕೊಂಡೆವು. ಅದು ನಮಗೆ ಶಾಂತಿಯನ್ನು ತಂದಿತು" ಎಂದಿದ್ದಾರೆ.


ಇದನ್ನೂ ಓದಿ: ಈ ತರಕಾರಿ ತಿಂದರೆ ಹತ್ತೇ ನಿಮಿಷ ಸಾಕು ಬಿಳಿಕೂದಲು ಕಪ್ಪಾಗಲು..! ವಯಸ್ಸು 60 ದಾಟಿದ್ರೂ ಮತ್ಯಾವತ್ತೂ ಕೂದಲು ಬಿಳಿಯಾಗೋದಿಲ್ಲ


ನಸ್ರೀನ್ ಮುನ್ನಿ ಕಬೀರ್ ಅವರ ಎಆರ್ ರೆಹಮಾನ್: ದಿ ಸ್ಪಿರಿಟ್ ಆಫ್ ಮ್ಯೂಸಿಕ್‌ನಲ್ಲಿ, "ನನ್ನ ತಾಯಿ ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದರು. ಅವರು ಯಾವಾಗಲೂ ಆಧ್ಯಾತ್ಮದ ಕಡೆಗೆ ಒಲವನ್ನು ಹೊಂದಿದ್ದರು. ನಾವು ಬೆಳೆದ ಹಬೀಬುಲ್ಲಾ ರಸ್ತೆಯ ಮನೆಯ ಗೋಡೆಗಳ ಮೇಲೆ ಹಿಂದೂ ಧಾರ್ಮಿಕ ಚಿತ್ರಗಳಿದ್ದವು. ತಾಯಿ ಮೇರಿ ಯೇಸುವನ್ನು ತನ್ನ ತೋಳುಗಳಲ್ಲಿ ಹಿಡಿದಿರುವ ಚಿತ್ರ, ಮೆಕ್ಕಾ ಮತ್ತು ಮದೀನಾದ ಪವಿತ್ರ ಸ್ಥಳಗಳ ಚಿತ್ರವೂ ಇತ್ತು" ಎಂದಿದ್ದಾರೆ.


ಎಆರ್ ರೆಹಮಾನ್ ಅವರ ಹಿಂದಿನ ಹೆಸರು ದಿಲೀಪ್ ಕುಮಾರ್. ತನ್ನ ಹೆಸರನ್ನು ಬದಲಾಯಿಸುವ ಬಗ್ಗೆ ಮಾತನಾಡಿದ ಅವರು, "ನಿಜವೆಂದರೆ ನಾನು ನನ್ನ ಹೆಸರನ್ನು ಎಂದಿಗೂ ಇಷ್ಟಪಡಲಿಲ್ಲ. ಹಿಂದೂ ಜ್ಯೋತಿಷಿಯೇ ನನಗೆ ಎಆರ್ ರೆಹಮಾನ್ ಎಂಬ ಹೆಸರನ್ನು ನೀಡಿದ್ದರು ಎಂದು ಹೇಳಿದ್ದರು.


ಇದನ್ನೂ ಓದಿ: ಪುಷ್ಪ 2 ಟ್ರೇಲರ್‌ನಲ್ಲಿ ಅರ್ಧ ತಲೆ ಬೋಳಿಸಿ ಗಮನಸೆಳೆದ ಈ ನಟ ಯಾರು ಗೊತ್ತಾಯ್ತಾ! ಕನ್ನಡದ ಖ್ಯಾತ ಹೀರೋ ಈತ


ಮತಾಂತರಗೊಳ್ಳುವ ಮೊದಲು, ಕುಟುಂಬವು ಜ್ಯೋತಿಷಿಯೊಬ್ಬರ ಬಳಿಗೆ ಅವರ ತಂಗಿಯ ಜಾತಕ ತೆಗೆದುಕೊಂಡು ಹೋಗಿದ್ದರಂತೆ. ಆ ಸಂದರ್ಭದ ದಿಲೀಪ್‌ ಆಗಿದ್ದ ರೆಹಮಾನ್‌, ತಾನು ಮತಾಂತರಗೊಂಡರೆ ಯಾವ ಹೆಸರು ಸೂಕ್ತ ಎಂದು ಕೇಳಿದ್ದರಂತೆ. ಆಗ ಅವರು, ಅಬ್ದುಲ್ ರೆಹಮಾನ್ ಮತ್ತು ಅಬ್ದುಲ್ ರಹೀಮ್ ಹೆಸರನ್ನು ಸೂಚಿಸಿದರು ಎಂದು ಸ್ವತಃ ರೆಹಮಾನ್‌ ಅವರೇ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.