)
Archana Kottige In sudeep movie : ಕಿಚ್ಚ ಸುದೀಪ್ ಅವರ ಮುಂಬರುವ ಚಿತ್ರ ಮಾರ್ಕ್ ಈಗಾಗಲೇ ಮೊದಲ ಝಲಕ್ನಲ್ಲೇ ಸಿನಿಪ್ರಿಯರಲ್ಲಿ ಸಾಕಷ್ಟು ಕತೂಹಲ ಮೂಡಿಸಿದೆ. ಮಾರ್ಕ್ ಒಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ವಿಜಯ್ ಕಾರ್ತಿಕೇಯ ನಿರ್ದೇಶಿಸಲಿರುವ ಈ ಸಿನಿಮಾವನ್ನು ಸತ್ಯ ಜ್ಯೋತಿ ಫಿಲ್ಮ್ಸ್ ನಿರ್ಮಿಸಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಮೂಲಕ ಸುದೀಪ್ ಸಹ ಬಂಡವಾಳ ಹೂಡಿದ್ದಾರೆ. ಡಿಸೆಂಬರ್ 25 ರಂದು ಕ್ರಿಸ್ಮಸ್ ಸಂದರ್ಭದಲ್ಲಿ ಮಾರ್ಕ್ ಚಿತ್ರವನ್ನು ಬಿಡುಗಡೆ ಮಾಡಬೇಕೆಂಬ ಪ್ರಯತ್ನ ನಡೆಯುತ್ತಿದೆ.
ಇದೀಗ ಮಾರ್ಕ್ ಸಿನಿಮಾದಲ್ಲಿನ ಐಪಿಎಲ್ ಸ್ಟಾರ್ ಪ್ಲೇಯರ್ ಪತ್ನಿ ಇರಲಿದ್ದಾರೆ ಎಂಬ ಗುಸು ಪಿಸು ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ. ನಟಿ ಅರ್ಚನಾ ಕೊಟ್ಟಿಗೆ ಮಾರ್ಕ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಗಾಸಿಪ್ ಒಂದು ಹುಟ್ಟಿಕೊಂಡಿದೆ.
ಅರ್ಚನಾ ಕೊಟ್ಟಿಗೆ ಸ್ಯಾಂಡಲ್ವುಡ್ ನಟಿ. ಅರಣ್ಯಕಾಂಡ, ವಾಸು ನಾನ್ ಪಕ್ಕಾ ಕಮರ್ಷಿಯಲ್, ಡಿಯರ್ ಸತ್ಯಾ, ಯೆಲ್ಲೋ ಗ್ಯಾಂಗ್ಸ್, ಹೊಂದಿಸಿ ಬರೆಯಿರಿ, ಎಕ್ಕಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರಪ್ರೇಮಿಗಳ ಹೃದಯ ಗೆದ್ದ ನಟಿ ಅರ್ಚನಾ ಮಾರ್ಕ್ ಸಿನಿಮಾದಲ್ಲಿಯೂ ಮಿಂಚಲಿದ್ದಾರೆ ಎಂಬ ವದಂತಿಯೊಂದು ಹಬ್ಬಿದೆ. ಆದರೆ ಈ ಕುರಿತು ಸುದೀಪ್ ಆಗಲಿ, ಚಿತ್ರತಂಡವಾಗಲಿ ಅಥವಾ ಅರ್ಚನಾ ಅವರಾಗಲಿ ಎಲ್ಲಿಯೂ ಖಚಿತ ಪಡಿಸಿಲ್ಲ.
ನಟಿ ಅರ್ಚನಾ ಕೊಟ್ಟಿಗೆ ಇತ್ತೀಚೆಗಷ್ಟೇ ಐಪಿಎಲ್ ಸ್ಟಾರ್ ಪ್ಲೇಯರ್ ಶರತ್ ಜೊತೆ ಮದುವೆ ಆದರು. ಸುದೀಪ್ ನಟನೆಯ 47ನೇ ಚಿತ್ರ ಇದಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.