)
Actor Arshad Warsi: ಹಾಸ್ಯ ಮತ್ತು ಗಂಭೀರ ನಟನೆಯಿಂದ ಬಾಲಿವುಡ್ನಲ್ಲಿ ಹೆಸರು ಮಾಡಿರುವ ನಟ ಅರ್ಷದ್ ವಾರ್ಸಿ ಅವರ ಜೀವನ ಆರಂಭದಿಂದಲೂ ಕಷ್ಟಕರವಾಗಿತ್ತು. ಅವರು ತಮ್ಮ ಹೆತ್ತವರನ್ನು ಚಿಕ್ಕ ವಯಸ್ಸಿನಲ್ಲಿಯೇ, ಕೇವಲ 14 ವರ್ಷ ವಯಸ್ಸಿನಲ್ಲಿ ಕಳೆದುಕೊಂಡರು..
ಇತ್ತೀಚಿನ ಸಂದರ್ಶನವೊಂದರಲ್ಲಿ, ಅರ್ಷದ್ ವಾರ್ಸಿ ತಮ್ಮ ತಾಯಿಯ ಸಾವಿಗೆ ಸಂಬಂಧಿಸಿದ ಅತ್ಯಂತ ಭಾವನಾತ್ಮಕ ಮತ್ತು ಹೃದಯವಿದ್ರಾವಕ ನೆನಪನ್ನು ಹಂಚಿಕೊಂಡರು, ಅದು ಇಂದಿಗೂ ಅವರನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ.. ಹೀಗೆ ವೈಯಕ್ತಿಕ ಜೀವನದ ಕೆಲವು ವಿಚಾರಗಳ ಬಗ್ಗೆ ಮಾತನಾಡಿದ ಅವರು.. "ನನ್ನ ತಾಯಿ ಸರಳ ಗೃಹಿಣಿ, ಅವರು ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಿದ್ದರು. ಆದರೆ ಮೂತ್ರಪಿಂಡಗಳು ವಿಫಲವಾಗಿದ್ದವು. ಡಯಾಲಿಸಿಸ್ಗೆ ಒಳಗಾಗುತ್ತಿದ್ದ ಕಾರಣ ಅವರಿಗೆ ನೀರು ಕೊಡಬೇಡಿ ಎಂದು ವೈದ್ಯರು ನಮಗೆ ಸೂಚಿಸಿದ್ದರು. ಆದರೆ, ನನ್ನ ತಾಯಿ ನೀರು ಕೇಳುತ್ತಲೇ ಇದ್ದರು.. ನಾನು ಅವಳನ್ನು ನಿರಾಕರಿಸುತ್ತಲೇ ಇದ್ದೆ. ಅವಳು ಸಾಯುವ ಹಿಂದಿನ ರಾತ್ರಿ, ಅಮ್ಮ ಮತ್ತೆ ನನಗೆ ಕೂಗಿ ನೀರು ಕೇಳಿದಳು. ನಾನು ಆಗಲೂ ನಿರಾಕರಿಸಿದೆ, ಆದರೇ ಅದೇ ರಾತ್ರಿ ಅವಳು ತೀರಿಕೊಂಡಳು. ಈ ಕಥೆ ಇನ್ನೂ ನನ್ನನ್ನು ಒಳಗಿನಿಂದ ನಡುಗಿಸುತ್ತದೆ" ಎಂದು ಅರ್ಷದ್ ಹೇಳಿದರು.
ಕೊನೆಯ ಕ್ಷಣದಲ್ಲಿ ತನ್ನ ತಾಯಿಗೆ ನೀರು ಕೊಡಲು ಸಾಧ್ಯವಾಗದ ತಪ್ಪಿತಸ್ಥ ಭಾವನೆ ಅರ್ಷದ್ ವಾರ್ಸಿಗೆ ಇನ್ನೂ ಇದೆ ಎಂದ ಅವರು.. "ನಾನು ನನ್ನ ತಾಯಿಗೆ ನೀರು ಕೊಟ್ಟ ಮೇಲೆ ಅವರು ಸತ್ತಿದ್ದರೆ, ನನ್ನ ಜೀವನದುದ್ದಕ್ಕೂ ಅವರು ಸಾಯಲು ನಾನೇ ಕಾರಣ ಎಂದು ಯೋಚಿಸುತ್ತಿದ್ದೆ.. ಆ ಸಮಯದಲ್ಲಿ ನಾನು ತುಂಬಾ ಚಿಕ್ಕವನಾಗಿದ್ದೆ ಮತ್ತು ವೈದ್ಯರ ಮಾತು ಕೇಳುವುದು ಸರಿ ಎಂದು ನಾನು ಭಾವಿಸಿ ನೀರು ಕೊಡಲಿಲ್ಲ.. ಆದರೆ ಇಂದು ನಾನು ಅವಳಿಗೆ ನೀರು ಕೊಡಬೇಕಿತ್ತು ಎಂದು ನನಗೆ ಅನಿಸುತ್ತದೆ. ವಯಸ್ಕನಾಗಿ ಆ ನಿರ್ಧಾರವನ್ನು ತೆಗೆದುಕೊಳ್ಳಬಹುದು.. ಆದರೆ ಆಗ ನಾನಿನ್ನೂ ಚಿಕ್ಕವನಿದ್ದೆ..ʼ ಎಂದು ಅವರು ಹೇಳಿದರು.
ಅಲ್ಲದೇ ಅರ್ಷದ್ ತನ್ನ ಹೆತ್ತವರ ಮರಣದ ನಂತರ ತಾನು ಬಲಿಷ್ಠ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದ ಕಾರಣ ತಕ್ಷಣ ಅಳಲಿಲ್ಲ.. ಆದರೆ ಕೆಲವು ವಾರಗಳ ನಂತರ, ತನ್ನ ಹೆತ್ತವರು ಇನ್ನು ಮುಂದೆ ಜಗತ್ತಿನಲ್ಲಿಲ್ಲ ಎಂದು ಇದ್ದಕ್ಕಿದ್ದಂತೆ ಅರಿತುಕೊಂಡಾಗ, ಅರ್ಷದ್ ಕಣ್ಣೀರು ಹಾಕಿದ್ದರಂತೆ..