)
Ashwini Puneeth Rajkumar : ಅಶ್ವಿನಿ ಪುನೀತ್ ರಾಜಕುಮಾರ್ ಚಲನಚಿತ್ರ ನಿರ್ಮಾಪಕರಾಗಿದ್ದು, ಫ್ರೆಂಚ್ ಬಿರಿಯಾನಿ ಸೇರಿದಂತೆ ಮುಂತಾದ ಜನಪ್ರಿಯ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅನೇಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಮಡದಿ ಅಶ್ವಿನಿ ಪಿಆರ್ಕೆ ಪ್ರೊಡಕ್ಷನ್ ಹೌಸ್ ನಡೆಸುತ್ತಿದ್ದಾರೆ. ಅಪ್ಪು ಹಾದಿಯಲ್ಲೇ ಸಾಗುತ್ತಿರುವ ಅಶ್ವಿನಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿದ್ದಾರೆ.
ಪುನೀತ್ ಪತ್ನಿಯಾಗಿ ಅಶ್ವಿನಿ ಇಡೀ ಕರುನಾಡಿಗೆ ಪರಿಚಿತರು. ಆದರೆ ಅಶ್ವಿನಿ ಓದಿದ್ದೇನು ಎಂಬುದು ಅನೇಕರಿಗೆ ತಿಳಿದಿಲ್ಲ. ಅಶ್ವಿನಿ ಅವರ ತಂದೆ ಯಾರು ಎಂಬ ಮಾಹಿತಿ ಅನೇಕರಿಗೆ ಗೊತ್ತಿಲ್ಲ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನವರಾ ಅಶ್ವಿನಿ ಪುನೀತ್ ರಾಜಕುಮಾರ್ 14 ಮಾರ್ಚ್ 1981 ರಲ್ಲಿ ಜನಿಸಿದರು. ಈಗ ಅಶ್ವಿನಿ ಪುನೀತ್ ರಾಜಕುಮಾರ್ ವಯಸ್ಸು 43 ವರ್ಷ.
ಅಶ್ವಿನಿ ಪುನೀತ್ ರಾಜಕುಮಾರ್ ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು, ಡಿಗ್ರಿ ಓದಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಫ್ಯಾಶನ್ ಡಿಸೈನರ್ ಕೂಡ ಆಗಿದ್ದಾರೆ. ಅಶ್ವಿನಿ 01 ಡಿಸೆಂಬರ್ 1999 ರಂದು ಪುನೀತ್ ರಾಜ್ಕುಮಾರ್ ಅವರನ್ನು ವಿವಾಹವಾದರು.
ಸ್ನೇಹಿತರೊಬ್ಬರ ಮೂಲಕ ಭೇಟಿಯಾದ ಪುನೀತ್ ಅವರನ್ನು ಅಶ್ವಿನಿ ಭೇಟಿಯಾದರು. ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾದರು. ಇವರಿಗೆ ದೃತಿ ಮತ್ತು ವಂದಿತಾ ಇಬ್ಬರು ಹೆಣ್ಣು ಮಕ್ಕಳು.
ಅಶ್ವಿನಿ ಪುನೀತ್ ರಾಜಕುಮಾರ್ ಅವರ ತಂದೆ ಬಾಗಮನೆ ರೇವನಾಥ್. ಇವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.