ಐಷಾರಾಮಿ ಕಾರು, ಭವ್ಯ ಬಂಗಲೆ.. ಪ್ರೊಡಕ್ಷನ್‌ ಹೌಸ್ ಒಡತಿ.. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿರುವ ಒಟ್ಟು ಆಸ್ತಿ ಆಸ್ತಿ ಎಷ್ಟು ಕೋಟಿ ?

Ashwini Puneeth Rajkumar Net Worth : ಅಶ್ವಿನಿ ಸದ್ಯ ಪುನೀತ್‌ ರಾಜಕುಮಾರ್‌ ನಡೆಸುತ್ತಿದ್ದ PRK ಪ್ರೊಡಕ್ಷನ್‌ ಹೌಸ್‌ನ್ನು ಮುಂದುವರೆದಿಕೊಂಡು ಹೋಗುತ್ತಿದ್ದಾರೆ. ಹಾಗಾದ್ರೆ ಅಶ್ವಿನಿ ಹೆಸರಿನಲ್ಲಿರುವ ಆಸ್ತಿ ಎಷ್ಟು? ಇಲ್ಲಿ ತಿಳಿಯೋಣ....

Written by - Chetana Devarmani | Last Updated : Nov 12, 2025, 09:05 PM IST
  • ಅಶ್ವಿನಿ ಪುನಿತ್‌ ರಾಜಕುಮಾರ್‌ ವಯಸ್ಸು
  • ಅಶ್ವಿನಿ ಪುನೀತ್‌ ರಾಜಕುಮಾರ್‌ ಮಕ್ಕಳು
  • ಅಶ್ವಿನಿ ಪುನೀತ್‌ ರಾಜಕುಮಾರ್‌ ಆಸ್ತಿ
ಐಷಾರಾಮಿ ಕಾರು, ಭವ್ಯ ಬಂಗಲೆ.. ಪ್ರೊಡಕ್ಷನ್‌ ಹೌಸ್ ಒಡತಿ.. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿರುವ ಒಟ್ಟು ಆಸ್ತಿ ಆಸ್ತಿ ಎಷ್ಟು ಕೋಟಿ ?

Ashwini Puneeth Rajkumar Net Worth : ಅಶ್ವಿನಿ ಪುನೀತ್‌ ರಾಜಕುಮಾರ್‌ ಕನ್ನಡ ಚಿತ್ರರಂಗದ ದೊಡ್ಮನೆಯ ಮುದ್ದಿನ ಕಿರಿಯ ಸೊಸೆ. ಅಶ್ವಿನಿ ಸದ್ಯ ಪುನೀತ್‌ ರಾಜಕುಮಾರ್‌ ನಡೆಸುತ್ತಿದ್ದ PRK ಪ್ರೊಡಕ್ಷನ್‌ ಹೌಸ್‌ನ್ನು ಮುಂದುವರೆದಿಕೊಂಡು ಹೋಗುತ್ತಿದ್ದಾರೆ. ಹಾಗಾದ್ರೆ ಅಶ್ವಿನಿ ಹೆಸರಿನಲ್ಲಿರುವ ಆಸ್ತಿ ಎಷ್ಟು? ಇಲ್ಲಿ ತಿಳಿಯೋಣ....

Add Zee News as a Preferred Source

ಅಶ್ವಿನಿ ಪುನೀತ್‌ ರಾಜಕುಮಾರ್‌ PRK ಪ್ರೊಡಕ್ಷನ್‌ ಹೌಸ್‌ನ ಜವಾಬ್ದಾರಿ ಹೊತ್ತಿದ್ದಾರೆ. ಅಷ್ಟೇ ಅಲ್ಲ ಹಲವು ಸಿನಿಮಾಗಳನ್ನು PRK ಬ್ಯಾನರ್‌ ಅಡಿ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಹಾಗಾದ್ರೆ ಅಶ್ವಿನಿ ಹೆಸರಿನಲ್ಲಿರುವ ಆಸ್ತಿ ಎಷ್ಟು? ಇಲ್ಲಿ ತಿಳಿಯೋಣ....

ಪುನೀತ್‌ ರಾಜಕುಮಾರ್‌ ಕನ್ನಡದ ಮನೆ ಮಗ. ಅಣ್ಣಾವ್ರು ಎಂದೇ ಜನಮನದಲ್ಲಿ ಜಾಗಪಡೆದ ಮೇರುನಟ ಡಾ.ರಾಜಕುಮಾರ್‌ ವರ ಕಿರಿಯ ಪುತ್ರ ಪುನೀತ್‌. ಬಾಲ್ಯದಲ್ಲೇ ನಟನೆಗೆ ಬಂದ ಪ್ರತಿಭೆ.

ಪುನಿತ್‌ ರಾಜಕುಮಾರ್‌ ಮತ್ತು ಅಶ್ವಿನಿ 1999 ರ ಡಿಸೆಂಬರ್ 1 ರಂದು ಮದುವೆ ಆದರು. ಇವರಿಗೆ ಧ್ರುತಿ ಮತ್ತು ವಂದಿತಾ ಎಂಬ ಇಬ್ಬರು ಪುತ್ರಿಯರಿದ್ದು, ಇಬ್ಬರೂ ವಿದ್ಯಾಭ್ಯಾಸದಲ್ಲಿ ಬ್ಯುಸಿಯಾಗಿದ್ದಾರೆ. 

ಪುನಿತ್‌ ರಾಜಕುಮಾರ್‌ 2021 ರ ಅಕ್ಟೋಬರ್‌ 29 ರಂದು ಹೃದಯಾಘಾತದಿಂದ ವಿಧಿವಶರಾದರು. ಅಂದಿನಿಂದ ಪುನೀತ್‌ ಮಾಡುತ್ತಿದ್ದ ಎಲ್ಲ ಸಾಮಾಜಿಕ ಕಾರ್ಯಗಳು, PRK ಪ್ರೊಡಕ್ಷನ್‌ ಹೌಸ್‌ ಜವಾಬ್ದಾರಿಯನ್ನು ಅಶ್ವಿನಿ ಹೆಗಲಿಗೆ ಹಾಕಿಕೊಂಡಿದ್ದು ಕೊಂಚ ಧಕ್ಕೆಯೂ ಬರದಂತೆ ಮುನ್ನಡೆಸುತ್ತಿದ್ದಾರೆ.  

ಅಶ್ವಿನಿ ಪುನೀತ್‌ ರಾಜಕುಮಾರ್‌ 14 ಮಾರ್ಚ್‌ 1981 ರಲ್ಲಿ ಜನಿಸಿದರು. ಅವರಿಗೆ ಈಗ 43 ವರ್ಷ ವಯಸ್ಸು. ಅಶ್ವಿನಿ ಈಗಲೂ ಮೊದಲು ಪುನೀತ್‌ ಜೊತೆ ಇದ್ದ ಭವ್ಯವಾದ ಬಂಗಲೆಯಲ್ಲಿಯೇ ವಾಸಿಸುತ್ತಿದ್ದಾರೆ. 

ಅಶ್ವಿನಿ ಪುನೀತ್‌ ರಾಜಕುಮಾರ್‌ ಐಷಾರಾಮಿ ಆಡಿ ಕ್ಯೂ 7 ಕಾರನ್ನು ಅಶ್ವಿನಿ ಖರೀದಿಸಿದ್ದರು, ಈ ಕಾರಿನ ಬೆಲೆ 1.10 ಕೋಟಿಯಿಂದ 1.20 ಕೋಟಿ ರೂಪಾಯಿಗಳ ವರೆಗೂ ಇರಬಹುದು ಎನ್ನಲಾಗುತ್ತಿದೆ. ಲ್ಯಾಂಬರ್ಗಿನಿ ಸೇರಿದಂತೆ ಇವರ ಬಳಿ ಹಲವು ಐಷಾರಾಮಿ ಕಾರುಗಳ ಸಂಗ್ರಹವಿದೆ.

ಕೆಲವು ವರದಿಗಳ ಪ್ರಕಾರ, ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರ ಹೆಸರಿನಲ್ಲಿರುವ ಒಟ್ಟು ಆಸ್ತಿ 200 ರಿಂದ 210 ಕೋಟಿ ಎನ್ನಲಾಗುತ್ತಿದೆ. (ಇದು ಸೋಷಿಯಲ್‌ ಮೀಡಿಯಾ ಮತ್ತು ಕೆಲವು ವರದಿಗಳನ್ನು ಆಧರಿಸಿ ಬರೆದಿದ್ದು, ಅಧಿಕೃತ ಮಾಹಿತಿಯಲ್ಲ) 

ಇದನ್ನೂ ಓದಿ: ಮಾಳುಗೆ ಸಿಕ್ತು ಬಿಗ್‌ ಬಾಸ್‌ ಸ್ಪೆಷಲ್‌ ಪವರ್‌..! ಏಕಾಏಕಿ 6 ಸದಸ್ಯರನ್ನು ನಾಮಿನೇಟ್‌ ಮಾಡಿದ ಉತ್ತರ ಕರ್ನಾಟಕದ ಹುಲಿ

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News