`X&Y` ಚಿತ್ರದಲ್ಲಿ `ಆoಬು ಆಟೋ ` ಎಂಬ ಆಪ್ತಮಿತ್ರ : ಬಿಡುಗಡೆಗೂ ಮುನ್ನವೇ ಆಟೋ ಚಾಲಕರ ಮನ ಗೆದ್ದ ಸಿನಿಮಾ
ಆಟೋವನ್ನು `ಆಂಬು ಆಟೋ` ಆಗಿ ಪರಿವರ್ತಿಸಿ ಎಲ್ಲರ `ಆಪ್ತಮಿತ್ರ`ನಾಗಿರುವಂತೆ ಮಾಡಿರುವುದಕ್ಕೆ ಆಟೋ ಚಾಲಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಬೆಂಗಳೂರು : ಇನ್ನೇನು ಬಿಡುಗಡೆಗೆ ಸಿದ್ದವಾಗಿ ನಿಂತಿರುವ ಕನ್ನಡದ "X&Y" ಚಿತ್ರದಲ್ಲಿ ಆಟೋರಿಕ್ಷಾ "ಆಂಬು ಆಟೋ " ಆಗಿ ಬಡ್ತಿ ಪಡೆದು ಎಲ್ಲರ ಗಮನ ಸೆಳೆದಿದೆ. ಆಂಬುಲೆನ್ಸ್ ನಲ್ಲಿರುವಂತೆ ಎಲ್ಲಾ ಸೌಲಭ್ಯಗಳನ್ನು ಈ ಆಟೋದಲ್ಲಿ ಅಳವಡಿಸಿ ಚಿತ್ರದಲ್ಲಿ ಅದನ್ನೊಂದು ಕಲಾವಿದನೆಂಬಂತೆ ಕಲಾತ್ಮಕವಾಗಿ ಬಳಸಲಾಗಿದೆ.
ಆಂಬು ಆಟೋ ವಿಷಯ ತಿಳಿದ ಆಟೋ ಚಾಲಕರು ಇದೀಗ ಗುಂಪು-ಗುಂಪಾಗಿ, ಚಿತ್ರ ನಿರ್ದೇಶಕ ಸತ್ಯಪ್ರಕಾಶ್ ಅವರನ್ನು ಭೇಟಿಯಾಗುತ್ತಿದ್ದಾರೆ. ಇಲ್ಲಿತನಕ 'ಆಟೋರಿಕ್ಷಾ' ನಮ್ಮ 'ಮಿತ್ರ'ನಾಗಿತ್ತು. ಈಗದನ್ನು 'ಆಂಬು ಆಟೋ' ಆಗಿ ಪರಿವರ್ತಿಸಿ ಎಲ್ಲರ 'ಆಪ್ತಮಿತ್ರ'ನಾಗಿರುವಂತೆ ಮಾಡಿದ್ದೀರಿ ಎಂದು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಇದನ್ನೂ ಓದಿ : ಭೀಕರ ಕಾರು ಅಪಘಾತದಲ್ಲಿ ಖ್ಯಾತ ನಿರ್ದೇಶಕನ ಪುತ್ರ ನಿಧನ
ಈ ನಿಟ್ಟಿನಲ್ಲಿ ನವೆಂಬರ್ ನಲ್ಲಿ ಬೆಂಗಳೂರಿನ ಜಯನಗರದ ಬೆಂಗಳೂರು ಸಾರಥಿ ಸೇನೆ ಆಟೋ ಚಾಲಕರ ಸಂಘ ಸಂಘಟಿಸಿದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಸಮಾಜಮುಖಿ ಸಮಾವೇಶದಲ್ಲಿ ಈ "ಆoಬು ಆಟೋ" ಪ್ರದರ್ಶನಕ್ಕಿಟ್ಟು ಅದರ ಕುರಿತು ವಿಸ್ತೃತ ವಿವರಣೆ ಪಡೆದು ಹರುಷ ವ್ಯಕ್ತಪಡಿಸಿದ್ದಾರೆ. ಆಂಬು ಆಟೋದಲ್ಲಿ ECG ತಪಾಸಣೆ ಮಾಡುವ ಮೂಲಕ ಎಲ್ಲರಿಗೂ ನೆರವು ಮಾಡಲಾಯಿತು.
"X&Y" ನಿರ್ದೇಶಕರ ನಾಲ್ಕನೇ ಚಿತ್ರ. ಮೊದಲ ಮೂರು ಚಿತ್ರಗಳು "ರಾಮಾ ರಾಮಾ ರೇ ", "ಒಂದಲ್ಲಾ ಎರಡಲ್ಲಾ" ಮತ್ತು "ಮ್ಯಾನ್ ಆಫ್ ದಿ ಮ್ಯಾಚ್ " ಒಂದಕ್ಕಿಂತ ಒಂದು ಭಿನ್ನ ಕಥಾ ಮಾಲಿಕೆಯ ಚಿತ್ರಗಳಾಗಿವೆ. "ರಾಮ ರಾಮಾ ರೇ" ಉತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿ ಪಡೆದರೆ, ಒಂದಲ್ಲಾ ಎರಡಲ್ಲಾ ಚಿತ್ರವು ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಚಿತ್ರದಿಂದ ಚಿತ್ರಕ್ಕೆ ಹೊಸತನ್ನು ನೀಡುತ್ತಾ ಬಂದಿದ್ದಾರೆ ಕಲಾ ಕೌಶಲ್ಯ ನಿರ್ದೇಶಕ ಡಿ. ಸತ್ಯ ಪ್ರಕಾಶ್. "X&Y" ಸಿನಿಮಾ ಚಿತ್ರಮಂದಿರಗಳಲ್ಲಿ ಮುಂಬರುವ ಜನವರಿ ಅಥವಾ ಫೆಬ್ರವರಿಯಲ್ಲಿ ತೆರೆಕಾಣಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.