)
Virat Kohli Avneet Kaur : ಲವ್ ಇನ್ ವಿಯೆಟ್ನಾಂ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಅವನೀತ್ (Avneet Kaur) ಅವರಿಗೆ ಆನ್ಲೈನ್ನಲ್ಲಿ ದೊಡ್ಡ ಸೆಲೆಬ್ರಿಟಿಗಳಿಂದ ಹೆಚ್ಚು ಪ್ರಶಂಸೆ, ಪ್ರೀತಿ ಮತ್ತು ಮೆಚ್ಚುಗೆ ಬರುತ್ತಿರುವ ಬಗ್ಗೆ ಕೇಳಲಾಯಿತು. ಈ ಪ್ರಶ್ನೆ ವಿರಾಟ್ ಕೊಹ್ಲಿಗೂ ಸಂಬಂಧಿಸಿದ್ದಾಗಿತ್ತು. ಅದಕ್ಕೆ ನಟಿ ನೀಡಿದ ಹೇಳಿಕೆ ವೈರಲ್ ಆಗುತ್ತಿವೆ.
ಇತ್ತೀಚೆಗೆ ವಿರಾಟ್ ಕೊಹ್ಲಿ ಅವನೀತ್ ಅವರ ಗ್ಲಾಮರಸ್ ಫೋಟೋಗಳಲ್ಲಿ ಒಂದನ್ನು ಲೈಕ್ ಮಾಡಿದ್ದರು. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿತ್ತು. ಗ್ರೀನ್ ಕ್ರಾಪ್ ಟಾಪ್ ಮತ್ತು ಮಿನಿ ಸ್ಕರ್ಟ್ ಧರಿಸಿದ್ದ ಚೆಲುವೆಯ ಫೋಟೋಗೆ ಕಿಂಗ್ ಕೊಹ್ಲಿ ಫಿದಾ ಆಗಿದ್ದಾರೆ ಅಂತ ಹೇಳಲಾಗುತ್ತಿತ್ತು. ಈ ಕುರಿತು ಮಾತನಾಡಿದ ನಟಿ, ಈ ಪ್ರೀತಿ ನನಗೆ ಸದಾ ಇರಲಿ ಅಂತ ಹೇಳಿದರು.
ಈ ವಿಚಾರ ಹಲವಾರು ಕವಲುಗಳನ್ನು ಪಡೆಯುತ್ತಿದ್ದಂತೆ ಸ್ವತಃ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೆ, ಇನ್ಸ್ಟಾಗ್ರಾಮ್ ತಾಂತ್ರಿಕ ದೋಷ ಎಂದು ಸ್ಪಷ್ಟಪಡಿಸಿದರು. ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ತಪ್ಪಾಗಿ ಪ್ರತಿಕ್ರಿಯೆ ಹೋಗಿದೆ ಅಂತ ಸ್ಪಷ್ಟಪಡಿಸಿದ್ದರು. ಅಲ್ಲದೆ, ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಅನಗತ್ಯ ಊಹೆಗಳನ್ನು ಮಾಡಬಾರದೆಂದು ನಾನು ವಿನಂತಿಸುತ್ತೇನೆ ಎಂದು ವಿರಾಟ್ ತಿಳಿಸಿದ್ದರು.
ಇನ್ನು ವಿರಾಟ್ ಕೊಹ್ಲಿ ಒಂದೇ ಒಂದು ಲೈಕ್ನಿಂದ ಅವನೀತ್ ಅದೃಷ್ಟ ಬದಲಾಯಿತು. 1 ಮಿಲಿಯನ್ಗಿಂತಲೂ ಹೆಚ್ಚು ಹೊಸ ಅನುಯಾಯಿಗಳನ್ನು ಈ ಚೆಲುವೆ ಗಳಿಸಿದರು. ಅಷ್ಟೇ ಅಲ್ಲದೆ, 12 ಹೊಸ ಬ್ರಾಂಡ್ ಒಪ್ಪಂದಗಳಿಗೆ ಸಹಿ ಹಾಕಿದರು ಎಂದು ವರದಿಯಾಗಿದೆ, ಇದು ಅವರ ಬ್ರ್ಯಾಂಡ್ ಮೌಲ್ಯವನ್ನು 30% ಹೆಚ್ಚಿಸಿತು.
Love in Vietnam movie : ಲವ್ ಇನ್ ವಿಯೆಟ್ನಾಂ ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಅವನೀತ್ ಕೌರ್ ಮತ್ತು ಶಾಂತನು ಈ ಸಿನಿಮಾದಲ್ಲಿ ನಟಿಸಿದ್ದಾರೆ. ImdB ಪ್ರಕಾರ, ಲವ್ ಇನ್ ವಿಯೆಟ್ನಾಂ" ಚಿತ್ರ ವಿಯೆಟ್ನಾಂ ಮತ್ತು ಪಂಜಾಬ್ ಯುವ ಪ್ರೇಮಿಗಳ ನಡೆಯುವ ಕಥೆ ಅಂತ ತಿಳಿದುಬಂದಿದೆ.