)
BBK 12 kiccha sudeep class : ಬಿಗ್ ಬಾಸ್ ಕನ್ನಡ ಸೀಸನ್ 12ರ ಈ ವಾರದಲ್ಲಿ ಅತಿಥಿಗಳಿಂದ ವಿಭಿನ್ನವಾಗಿ ಮೂಡಿ ಬಂದಿದೆ..ಇಡೀ ವಾರ ಮನೆ ಮಂದಿಯಲ್ಲಿ ಸಾಕಷ್ಟ ಏರಿಳಿತಗಳು ಕಂಡುಬಂದಿದೆ. ಅತಿಥಿಗಳೊಂದಿಗೆ ಗಿಲ್ಲಿ ನಟ ವರ್ತನೆಗೆ ಸುದೀಪ್ ಕ್ಲಾಸ್ ತೆಗದುಕೊಳ್ತಾರಾ ಅನ್ನೋ ಚರ್ಚೆ ಶುರುವಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಒಂಭತ್ತು ವಾರಗಳನ್ನ ಯಶಸ್ವಿಯಾಗಿ ಪೂರೈಸಿದೆ. ಅದ್ರಲ್ಲೂ ಈ ವಾರ ಬಿಗ್ಬಾಸ್ ಮನೆಗೆ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಬಂದ್ಮೇಲೆ ಅಂತೂ ಮತ್ತಷ್ಟು ರಣರೋಚಕವಾಗಿದೆ. ದೊಡ್ಮನೆಗೆ ಸೀಸನ್ 11ರ ಸ್ಪರ್ಧಿಗಳಾದ ತ್ರಿವಿಕ್ರಂ, ಮೋಕ್ಷಿತಾ, ರಜತ್, ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ಬಂದಿದ್ದರು. ಮನೆಗೆ ಬರುತ್ತಿದ್ದಂತೆಯೇ ಗಿಲ್ಲಿ ನಟನನ್ನು ಟಾರ್ಗೆಟ್ ಮಾಡಿದ್ದರು. ಗಿಲ್ಲಿಯನ್ನ ಅಮಾನವೀಯವಾಗಿ ಕಾಡಿದರು. ಅತಿಥಿಗಳ ಮೊಂಡಾಟಕ್ಕೆ ಗಿಲ್ಲಿ ಜಗ್ಗಲಿಲ್ಲ, ಗಿಲ್ಲಿ ತಮ್ಮದೇ ಶೈಲಿಯಲ್ಲಿ ಕೌಂಟರ್ಗೆ ಪ್ರತಿ ಕೌಂಟರ್ ಕೊಟ್ಟು ಅತಿಥಿಗಳಿಗೆ ಯಾಕಾದ್ರೂ ಬಂದ್ವಪ್ಪ ಅನ್ನೋವಷ್ಟು ಮಾಡಿದರು. ಅಥಿತಿಗಳು ಮನೆಯ ಸ್ಪರ್ಧಿಗಳನ್ನ ಕೆರಳಿಸಿ ಕೆಂಡ ಮಾಡಿದ್ದರು. ಈ ಜಿದ್ದಾಜಿದ್ದಿಯಲ್ಲಿ ಕೆಲವು ತಪ್ಪುಗಳು ಎರಡೂ ಕಡೆ ನಡೆದಿವೆ. ಈ ಬಗ್ಗೆ ಇಂದಿನ ಕಿಚ್ಚಿನ ಪಂಚಾಯಿತಿಯಲ್ಲಿ ಈ ವಿಚಾರಗಳು ಚರ್ಚೆಯಾಗಲಿವೆ.
ಕಲರ್ಸ್ ಕನ್ನಡ ಬಿಟ್ಟಿರುವ ಪ್ರೋಮೋದಲ್ಲಿ ಸುದೀಪ್ ಖಡಕ್ ಎಂಟ್ರಿ ಕೊಟ್ಟಿದ್ದು, ಅತಿಥಿಗಳು ಅತಿರೇಖಾ ವರ್ತನೆ ಮಾಡಿದ್ರಾ ಇಲ್ಲಾ ವೈಟರ್ ಆಗಿ ಗಿಲ್ಲಿ ಎಡವಿದ್ರಾ ಅಂತಾ ಇಂದಿನ ಸಂಚಿಕೆ ಆರಂಭಿಸಿದ್ದು, ಪ್ರೇಕ್ಷಕರಲ್ಲಿ ಗಿಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಳ್ತಾರಾ ಅನ್ನೋ ಚರ್ಚೆ ಶುರುವಾಗಿದೆ. ಈ ವಾರದಲ್ಲಿ ಸಾಕಷ್ಟು ಏರಿಳಿತಗಳು ಇದ್ದವು. ಮನೆಗೆ ಅತಿಥಿಗಳಾಗಿ ಬಂದ ಮಂಜು, ರಜತ್ ಅತಿಯಾಗಿ ನಡೆದುಕೊಂಡರು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಗಿಲ್ಲಿಯದ್ದೇ ತಪ್ಪು ಎಂದಿದ್ದಾರೆ. ಹಾಗಾದರೆ, ಇವರಲ್ಲಿ ಕ್ಲಾಸ್ ಯಾರಿಗೆ? ಸುದೀಪ್ ಈ ಬಗ್ಗೆ ದೊಡ್ಡ ಸೂಚನೆ ಕೊಟ್ಟಿದ್ದಾರೆ. ಬಿಗ್ಬಾಸ್ ಮನೆ ಈ ವಾರದ ಡಿಫರೆಂಟ್ ಆಗಿ ಇಡೀ ಕರುನಾಡಿಗೆ ಮಸ್ತ್ ಮಜಾ ಕೊಟ್ಟಿದೆ. ಈ ಚಟುವಟಿಕೆಗಳಲ್ಲಿ ನಡೆದ ಎಲ್ಲಾ ಬೆಳವಣಿಗೆ ಬಗ್ಗೆ ಕಿಚ್ಚನ ಜೊತೆ ಯಾವ ಉತ್ತರ ಸಿಗಬಹುದು ಅನ್ನುವ ನಿರೀಕ್ಷೆಯಲ್ಲಿ ಜನ ಕಾದು ಕುಳಿತಿದ್ದಾರೆ.
ಅತಿಥಿಗಳ ಆಗಮನ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಪ್ಯಾಲೆಸ್ ಆಗಿ ಪರಿವರ್ತನೆ ಮಾಡಲಾಗಿತ್ತು ಆ ವೇಳೆ ಮನೆ ಮಂದಿಗೆ ಇನ್ನಿಲ್ಲದ ಕಾಟ ಕೊಟ್ಟಿದ್ದಾರೆ. ಸ್ಪರ್ಧಿಗಳನ್ನು ತಮಗೆ ಹೇಗೆ ಬೇಕೋ ಹಾಗೆ ನಡೆಸಿಕೊಂಡಿದ್ದಾರೆ. ಅತಿಥಿಗಳು ಹೇಳಿದ್ದಕ್ಕೆಲ್ಲ ಸತ್ಕಾರದ ಮೂಲಕ ಕೋಲೆ ಬಸವ ರೀತಿಯಲ್ಲಿ ತಲೆ ಅಲ್ಲಾಡಿಸಿ ತಮ್ಮತನವನ್ನು ಬಿಟ್ಟುಕೊಟ್ಟಿದ್ದಾರೆ. ಅದಕ್ಕೆ ಕಿಚ್ಚ ಕ್ಲಾಸ್ ಏನಾಗಿರಲಿದೆ ಅನ್ನೋದು ಮತ್ತಷ್ಟು ಕುತೂಹಲ ಮೂಡಿಸಿದೆ.