)
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಬ್ಯಾಚುಲರ್ ಬ್ಯಾಚುಲರ್ ಪಾರ್ಟಿಗಾಗಿ ಮ್ಯಾಕ್ಸ್ ಮಂಜು ಮಾಡಿದ್ದಾರೆ. ನಿನ್ನೆಯ ಎಪಿಸೋಡಿನಲ್ಲಿ ಮಂಜು ತಮ್ಮ ಲವ್ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತನಾಡಿದರು.ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿಸಿ, ಗೆಳತಿಯೊಂದಿಗೆ ಮಂಗಳೂರಿಗೆ ಲಾಂಗ್ ಡ್ರೈವ್ ಹೋಗಿ ಹಿಂತಿರುಗಿ ಬರುವಾಗ ಚಿಗುರಿದ ಪ್ರೀತಿ ಬಗ್ಗೆ ಉಗ್ರಂ ಮಂಜು ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಕಳೆದ ಸೀಸನ್ನ ಐವರು ಸದಸ್ಯರು ಅತಿಥಿಗಳಾಗಿ ಬಂದಿರೋದು ಗೊತ್ತೇ ಇದೆ. ಅತಿಥಿಗಳ ನೆಪದಲ್ಲಿ ಮನೆಯ ಸದಸ್ಯರ ತಾಳ್ಮೆ ಪರೀಕ್ಷಿಸಲಾಗಿದೆ. ಇನ್ನೊಂದು ಕಡೆ ಅತಿಥಿಗಳೇ ಮನೆಯವರಿಗಾಗಿ ಟಾಸ್ಕ್ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇಲ್ಲಿವರೆಗೂ ಈ ರೀತಿ ನೀಡಿದ ಸರ್ಪ್ರೈಸ್ನಲ್ಲಿ ಟಾಸ್ಕ್ ಬಿಗ್ಬಾಸ್ ಇತಿಹಾಸದಲ್ಲೇ ಹೊಸತ್ತು ಎನ್ನಬಹುದು. ಅದರಲ್ಲೂ ಉಗ್ರಂ ಮಂಜು ಬ್ಯಾಚುಲರ್ ಪಾರ್ಟಿ ನಡೆದಿದೆ.
ಕಳೆದ ಸೀಸನ್ನಲ್ಲಿ ವೇದಿಕೆ ಮೇಲೆ ಕಿಚ್ಚ ಸುದೀಪ್ ಮುಂದೆ ಉಗ್ರಂ ಮಂಜು ಮದುವೆ ವಿಚಾರವೇ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಉಗ್ರಂ ಮಂಜು ಮದುವೆ ಬಗ್ಗೆ ಅವರ ತಂದೆ-ತಾಯಿಗೆ ಕಿಚ್ಚ ಸುದೀಪ್ ಇದೇ ವೇದಿಕೆ ಮೇಲೆ ಕೇಳಿದ್ದರು. 11ನೇ ಸೀಸನ್ ಮುಗಿದು 12ನೇ ಸೀಸನ್ಗೆ ಮುಗಿಯುವುದರೊಳಗೆ ಉಗ್ರಂ ಮಂಜು ನಿಶ್ಚಿತಾರ್ಥ ನಡೆದಿದೆ. ಇನ್ನೇನು ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ಬಿಗ್ ಬಾಸ್ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಇನ್ನು ಬಿಗ್ ಬಾಸ್ ಮನೆಯೊಳಗೆ ಎಂಜಾಯ್ ಮಾಡುತ್ತಿರುವ ಉಗ್ರಂ ಮಂಜುಗೆ ಬಿಗ್ ಬಾಸ್ ಅವರ ಲವ್ ಸ್ಟೋರಿ ಬಗ್ಗೆ ಕೇಳಿದ್ದರು. ನಿನ್ನೆಯ ಎಪಿಸೋಡಿನಲ್ಲಿ ಉಗ್ರಂ ಮಂಜು ಲವ್ ಸ್ಟೋರಿ ಕೇಳುವುದಕ್ಕೆ ವೇದಿಕೆ ಮಾಡಿಕೊಡಲಾಗಿತ್ತು. ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿಸಿ, ಗೆಳತಿಯೊಂದಿಗೆ ಮಂಗಳೂರಿಗೆ ಲಾಂಗ್ ಡ್ರೈವ್ ಹೋಗಿ ಹಿಂತಿರುಗಿ ಬರುವಾಗ ಮೂಡಿದ ಪ್ರೀತಿ ಬಗ್ಗೆ ಖುಷಿ ಖುಷಿಯಿಂದ ಉಗ್ರಂ ಮಂಜು ಮನೆ ಮಂದಿ ಜೊತೆಗೆ ಹಂಚಿಕೊಂಡಿದ್ದಾರೆ.
ಉಗ್ರಂ ಮಂಜು ಲವ್ ಸ್ಟೋರಿ ಕೇಳುವುದಕ್ಕೆ ವೇದಿಕೆ ಮಾಡಿಕೊಡಲಾಗಿತ್ತು.ಅದರಲ್ಲಿ ಉಗ್ರಂ ಮಂಜು ಹಾಗೂ ಅವರ ಭಾವಿ ಪತ್ನಿ ಸಾಯಿ ಪಲ್ಲವಿಯವರ ಫೋಟೋಗಳನ್ನು ಹಾಕಲಾಗಿದೆ. ಅವುಗಳ ಮಧ್ಯೆ ಉಗ್ರಂ ಮಂಜು ಹಾಗೂ ಅವರ ಲವ್ ಸ್ಟೋರಿ ಲಾಂಗ್ ಡ್ರೈವ್ನಿಂದ ಶುರು ಮಾಡಿತ್ತು. ನನ್ನ ಲೈಫ್ನಲ್ಲಿ ಕಳೆದ ಸೀಸನ್ ಅನ್ನು ಕೊನೆಯ ಉಸಿರು ಇರೋವರೆಗೂ ಮರೆಯೋಕೆ ಆಗಲ್ಲ. ಎಲ್ಲಾ ಕರ್ನಾಟಕದ ತಾಯಿಯಂದಿರ ಪ್ರೀತಿ, ನಮ್ಮ ತಂದೆ-ತಾಯಿ ಪ್ರೀತಿ ಇವತ್ತು ನಮಗೆ ಸಿಕ್ಕಿರೋದು. ಸಾಯಿ ಸಂಧ್ಯಾ.ನಾನು ಮಾಡಿರುವ ಅದೃಷ್ಟನೋ, ನನ್ನ ತಂದೆ-ತಾಯಿ ಮಾಡಿರುವಂತಹ ಪುಣ್ಯನೋ.ಈ ನೇಚರ್ ಕಳಿಸಿಕೊಟ್ಟಿರುವ ಗಿಫ್ಟ್ ಇರಬಹುದಾ ನನಗೆ ಗೊತ್ತಿಲ್ಲ ಎಂದು ತನ್ನ ಭಾವಿ ಪತ್ನಿ ಬಗ್ಗೆ ಹಾಡಿ ಹೊಗಳಿದರು.