)
Bbk gilli chaitra talkwar:ಇಂದಿನ ಸಂಚಿಕೆಯಲ್ಲಿ ಗಿಲ್ಲಿ ಹಾಗೂ ಚೈತ್ರಾ ಕುಂದಾಪುರ ನಡವೆ ಮಾತಿನ ಚಕಮಕಿ ನಡೆದಿದೆ..
ಕಲರ್ಸ್ ಕನ್ನಡ ಬಿಟ್ಟ ಪ್ರಮೋದಲ್ಲಿ ಗಿಲ್ಲಿ ವಿರುದ್ಧ ಇಡೀ ಮನೆ ಮಂದಿಯೇ ತಿರುಗಿ ಬಿದಿದ್ದಾರೆ. ಇಡೀ ವಾರದಲ್ಲಿ ಆಟ ನೋಡಿ ಇಂದು ಉತ್ತಮ ಹಾಗೂ ಕಳಪೆ ನೀಡಲಾಗುತ್ತದೆ. ಆವಾಗ ಇಡೀ ರಘು ,ಚೈತ್ರಾ, ಅಶ್ವಿನಿ, ಸೇರಿದಂತೆ ಮನೆಮಂದಿ ಎಲ್ಲರೂ ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ.
ಕಾಮಿಡಿ ಹಾಗೂ ಪರ್ಸನಲ್ ಸ್ಪೇಸ್ ಮೇಲೆ ಒಂದು ಲೈನ್ ಇರುತ್ತದೆ ಅದನ್ನೂ ಕ್ರಾಸ್ ಮಾಡಬಾರದು ಅಂತಾ ರಘು ಹೇಳ್ತಾರೆ. ಇನ್ನು, ಅಶ್ವಿನಿ ನಮ್ಮ ವಿಚಾರ ನಿಮ್ಮ ಪ್ರಚಾರ ಆಗಬಾರದು ಅಂತಾ ಹೇಳಿ ಗಿಲ್ಲಿಗೆ ಕಳಪೆ ಕೊಟ್ಟು ಟಾಂಗ್ ಕೊಡ್ತಾರೆ. ಇನ್ನು, ಚೈತ್ರಾ ಕುಂದಾಪುರ ಕೂಡ ಗಿಲ್ಲಿ ವಿರುದ್ಧ ತಿರುಗಿಬಿದ್ದಿದ್ದಾರೆ. ಗಿಲ್ಲಿ ಚೈತ್ರಾಗೆ ವಯಸ್ಸಿನ ವಿಚಾರದಲ್ಲಿ ಕಾಮಿಡಿ ಮಾಡ್ತಾರೆ.ಇದ್ದರಿಂದ ಸಿಟ್ಟಿಗೆದ್ದ ಚೈತ್ರಾ ವಯಸ್ಸಿನ ವಿಚಾರದಲ್ಲಿ ಕಾಮಿಡಿ ಮಾಡ್ಬೇಡ ಈ ವಿಚಾರವನ್ನ ಮನೆಯವರು ನೋಡ್ತಾ ಇರ್ತಾರೆ ಅಂತಾ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಅದಕ್ಕೆ ಗಿಲ್ಲಿ ನಟ ಕೂಡ ಹಾಗದ್ರೆ ನಿಮ್ಗೂ ವಯಸ್ಸಾಗಿದ್ಯಾ ಅಂತಾ ಟಕ್ಕರ್ ಕೊಟ್ಟಿದ್ದಾರೆ..ಅದಕ್ಕೆ ಚೈತ್ರಾ ಕೂಡ ಸುಮ್ಮನಾಗದೇ ನನ್ನ ಜೊತೆ ಇದೆಲ್ಲಾ ಬೇಡ ನಾನು ಮಾತಡ್ಬೇಕು ಹಾಗೇ ಮಾಡ್ತೀನಿ ಅಂತಾ ಸಿಡಿದೆದ್ದಿದ್ದಾರೆ..
ಸದ್ಯ ಈ ವಾರ ಆರಂಭದಿಂದಲೇ ಗಿಲ್ಲಿ ವಿರುದ್ಧ ಮನೆ ಮಂದಿ ಸಿಡಿದೆದ್ದಿರೊದು ಭಾರೀ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ..ಏಕಾಏಕಿ ಎಲ್ಲರೂ ಗಿಲ್ಲಿನಾ ಟಾರ್ಗೆಟ್ ಮಾಡಿರೋದು ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆ ಆಗ್ಬೇಕು ಅಂತಾ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯಿಸಿದ್ದಾರೆ.