ಗಿಲ್ಲಿ ಮಾತಿಗೆ ಬಿಕ್ಕಿಬಿಕ್ಕಿ ಅಳುತ್ತಾ ಕೂತಾ ಕಾವ್ಯಾ?ಅಷ್ಟಕ್ಕೂ ಗಿಲ್ಲಿ ಅಂದಿದಾದ್ರು ಏನು?

Gilli and kavya: ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಈ ವಾರ ಸಕ್ಕತ್‌ ಆಗಿ ಮೂಡಿ ಬರುತ್ತಿದೆ..ಮನೆಗೆ ವಿಲನ್‌ ಆಗಮನ ಆಗಿರೋದ್ರಿಂದ ವೀಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡಲಾಗ್ತಿದೆ.. 

Written by - Ramya R Gowda | Last Updated : Dec 10, 2025, 11:07 AM IST
  • ಕಾವ್ಯಾಗೆ ಫ್ರೀ ಪ್ರಾಡಕ್ಟ್ ಎಂದ ಗಿಲ್ಲಿ.. ಕಣ್ಣೀರಿಟ್ಟ ಕಾವು!
  • ಬ್ರೇಕ್‌ ಆಯ್ತಾ ಗಿಲ್ಲಿ ಕಾವು ಫ್ರೆಂಡ್‌ ಶಿಪ್‌.!
  • ವಿಲನ್‌ನಿಂದ ಮಜಾ ಕಡೆ ತಿರುಗಿದ್ದ ಬಿಗ್‌ಬಾಸ್‌ ಮನೆ..!
ಗಿಲ್ಲಿ ಮಾತಿಗೆ ಬಿಕ್ಕಿಬಿಕ್ಕಿ ಅಳುತ್ತಾ ಕೂತಾ ಕಾವ್ಯಾ?ಅಷ್ಟಕ್ಕೂ ಗಿಲ್ಲಿ ಅಂದಿದಾದ್ರು ಏನು?

Gilli and kavya: ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಈ ವಾರ ಸಕ್ಕತ್‌ ಆಗಿ ಮೂಡಿ ಬರುತ್ತಿದೆ..ಮನೆಗೆ ವಿಲನ್‌ ಆಗಮನ ಆಗಿರೋದ್ರಿಂದ ವೀಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡಲಾಗ್ತಿದೆ.. 

Add Zee News as a Preferred Source

ಹೌದು ನಿನ್ನೆ ಅಂತೂ ವಿಲನ್‌ ಮನೆ ಎಂಟ್ರಿ ಆಗಿರೋದ್ರಿಂದ ಮನೆ ಮಂದಿ ಬೆಚ್ಚಿಬಿದ್ದಿದ್ದಾರೆ..ಡಿಸೈನ್‌ ಡಿಸೈನ್‌ ಆಗಿ ವಿಲನ್‌ ಮನೆ ಮಂದಿಗೆ ರೋದನೆ ಕೊಡ್ತಿದ್ದಾರೆ..ಇದರಿಂದ ವೀಕ್ಷಕರಿಗೆ ಮತ್ತಷ್ಟು ಮಜಾ ಬಂದಿದೆ..ನಿನ್ನೆ ನಾಮಿನೇಶನ್‌ನಿಂದಾಗಿ ಅಶ್ವಿನಿ ಗೌಡ ಹಾಗೂ ರಜತ್‌ ನಡುವಿನ ಜಗಳ ತಾರಕ್ಕೇರಿತ್ತು..ಮನೆ ರಣರಂಗವಾಗಿತ್ತು ವಿಲನ್‌ ಸಕ್ಕತ್‌ ಮಜಾ ತೆಗೆದುಕೊಂಡಿದ್ದಾರೆ..ಮಾತ್ರವಲ್ಲದೇ ರಜತ್‌ ಹಾಗೂ ಧ್ರುವಂತ್ ನಡುವೆ  ನಾನಾ ನೀನಾ ಅಂತಾ ಕೈ ಕೈ ಮೀಲಾಯಿಸಿಕೊಳ್ಳುವರೆಗೆ ಹೋಗಿತ್ತು..

ಈ ವಾರ ವಿಲನ್‌ ಎಂಟ್ರಿಯಿಂದಾಗಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ನಡೆದಿದೆ..ಸ್ವಂದನಾ ಹಾಗೂ ಚೈತ್ರಾ ಕುಂದಾಪುರ ನಡುವೆ ಕ್ಯಾಪ್ಟನ್‌ ಅದಲು ಬದಲು ಆಗಿರೊದ್ರಿಂದ ಹಿಡಿದು ಪ್ರತಿಯೊಂದರಲ್ಲಿ ವಿಲನ್‌ ಮಾತ್ರ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಟ್ಟು ವೀಕ್ಷಕರಿಗೆ ಸಖತ್‌ ಮನರಂಜನೆ ಕೊಡ್ತಿದ್ದಾರೆ..ವೈಲ್ಡ್‌ ಕಾರ್ಡ್‌ನಲ್ಲಿ ಎಂಟ್ರಿಯಾಗಿರುವ ರಜತ್‌ ಮಾತ್ರ ಮನೆ ಮಂದಿಗೆ ಸಕತ್‌ ಟಾಂಗ್‌ ಕೊಡ್ತಾ ತಮ್ಮ ಅಸಲಿ ಆಟವನ್ನ ಶುರುಮಾಡಿದ್ದಾರೆ..ಇತ್ತ ವಿಲನ್‌ ನಿನ್ನೆ ಗಿಲ್ಲಿ ಹಾಗೂ ಅಶ್ವಿನಿಗೆ ಸೀಕ್ರೆಟ್‌ ಟಾಸ್ಕ್‌ ಕೊಟ್ಟಿದ್ದಾರೆ. ಕಾವ್ಯಾ ಅವರ ಯಾವುದಾದರೂ ಒಂದು ವಿಷಯಕ್ಕೆ ಅಳುಯಿಸಬೇಕು ಅಂತಾ ವಿಲನ್‌ ಹೇಳ್ತಾರೆ..ನೀವು ಈ ಕೆಲಸ ಮಾಡಿದ್ದರೆ ನೀವು ಡೈರೆಕ್ಟ್‌ ಕ್ಯಾಪ್ಟನ್ಸಿ ಟಾಸ್ಕ್‌ಗೆ ಎಂಟ್ರಿ ಆಗ್ತೀರಾ ಅಂತಾ ಒಂದು ಚಾಲೆಂಜ್‌ ಕೊಡಲಾಗಿದೆ.. ಇದಕ್ಕೆ ಗಿಲ್ಲಿ ಸ್ಪಲ್ಪ ಹೊತ್ತು ಯೋಚಿಸಿ ಒಲ್ಲದ ಮನಸ್ಸಿನಿಂದ ಗಿಲ್ಲಿ ಓಕೆ ಅಂದಿದ್ದು ಅಶ್ವಿನಿ ಹಾಗೂ ಗಿಲ್ಲಿ ಓಕೆ ಅಂದಿದ್ದಾರೆ.. ಹಾಗೇ ಇನ್ನೊಂದು ಟಾಸ್ಕ್‌ ಕೂಡ ಕೊಡಲಾಗಿದೆ ಹಾವು ಮುಂಗೂಸಿ ತರ ಕಚ್ಚಾಡುವ ಗಿಲ್ಲಿ ಅಶ್ವಿನಿ ಗೌಡಗೆ ಒಟ್ಟಿಗೆ ಅಡುಗೆ ಮಾಡಲು ಕೊಟ್ಟಿದ್ದಾರೆ. ಇದರ ಜೊತೆ ರಜತ್‌ಗೂ ಹೆಲ್ಪ್‌ ಮಾಡಲು ಹೇಳಿದ್ದಾರೆ.  

ಕಾವ್ಯಾ ಬೆಸ್ಟ್ ಫ್ರೆಂಡ್ಸ್. ಯಾವುದೇ ಕಾರಣಕ್ಕೂ ಗಿಲ್ಲಿ ಅವರು ಕಾವ್ಯಾನ ಬಿಟ್ಟುಕೊಟ್ಟಿಲ್ಲ.ಕಾವ್ಯಾ ತಮ್ಮನ್ನು ನಾಮಿನೇಷನ್ ಮಾಡಿದ ವಿಷಯವನ್ನು ಗಿಲ್ಲಿ ಪ್ರಶ್ನೆ ಮಾಡಿದ್ದಾರೆ. ಅದೇ ವಿಚಾರ ಮುಂದಿಟ್ಟುಕೊಂಡು ಕಾವ್ಯಾ ಅವರ ಅಳಿಸಲು ಮುಂದಾಗಿದ್ದಾರೆ..ಹೀಗಾದ್ರು ಸೀಕ್ರೆಟ್‌ ಟಾಸ್ಕ್‌ ಮುಗಿಸ್ತಾರೆ ಕಾದು ನೋಡಬೇಕಾಗಿದೆ.ಸದ್ಯ ಇಂದಿನ ಎಪಿಸೋಡ್‌ ಮಾತ್ರ ಸಕತ್‌ ಕ್ಯೂರಾಸಿಟ್‌ ಆಗಿದೆ ಒಂದಡೆ ರಜತ್‌ ಗಿಲ್ಲಿ ಅಶ್ವಿನಿ ಗೌಡ ಅಡುಗೆ ಮನೆ ಜವಾಬ್ದಾರಿ ಕೊಟ್ಟಿದು ಭಾರೀ ಕುತೂಹಲಕ್ಕೆ ಎಡೆಮಾಡಿದೆ.

ಇದನ್ನೂ ಓದಿ: ಯಜಮಾನ’ ಧಾರಾವಾಹಿಗೆ ಹೊಸ ವಿಲನ್ ಆಗಿ ಯಮುನಾ ಶ್ರೀನಿಧಿ ಎಂಟ್ರಿ

About the Author

Ramya R Gowda

ರಮ್ಯಾ ಆರ್‌ ಗೌಡ 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

...Read More

Trending News