ʼಬೇಲಿ ಹೂʼ ಚಿತ್ರಕ್ಕೆ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಸಿನಿಮಾ‌ ವಿಭಾಗದಲ್ಲಿ "ತೀರ್ಪುಗಾರರ ವಿಶೇಷ ಉಲ್ಲೇಖ"

ಪ್ರಸ್ತುತ 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂಡಿಯಾ ಸಿನಿಮಾ ಹಾಗೂ ಕನ್ನಡ ಸಿನಿಮಾ ಎರಡು ವಿಭಾಗಗಳಲ್ಲಿ ವೆಂಕಟೇಶ್ ಎಸ್ ನಿರ್ಮಿಸಿ, ಸೆಬಾಸ್ಟಿಯನ್ ಡೇವಿಡ್ ಅವರು ನಿರ್ದೇಶಿಸಿರುವ ಹಾಗೂ ಸಂಪತ್ ಮೈತ್ರೇಯ, ಶ್ವೇತ ಶ್ರೀವಾಸ್ತವ್, ಲಯನ್ ವೆಂಕಟೇಶ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಬೇಲಿ ಹೂ"  ಆಯ್ಕೆಯಾಗಿತ್ತು‌. ಅದರಲ್ಲೂ ಇಂಡಿಯಾ ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗಿದ್ದ ಏಕೈಕ ಕನ್ನಡ ಸಿನಿಮಾ "ಬೇಲಿ ಹೂ".

Written by - YASHODHA POOJARI | Last Updated : Mar 16, 2025, 10:35 AM IST
    • ಮೂವತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿರುವ ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್
    • ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗಿದ್ದ ಏಕೈಕ ಕನ್ನಡ ಸಿನಿಮಾ
    • ನೈಜ ಫಟನೆ ಆಧಾರಿತ ಚಿತ್ರ "ಬೇಲಿ ಹೂ
ʼಬೇಲಿ ಹೂʼ ಚಿತ್ರಕ್ಕೆ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಸಿನಿಮಾ‌ ವಿಭಾಗದಲ್ಲಿ "ತೀರ್ಪುಗಾರರ ವಿಶೇಷ ಉಲ್ಲೇಖ"

ಮೂವತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿರುವ ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್ ಈವರೆಗೂ "ಅನಿಶ್ಚಿತ", " ಜ್ಯೋತಿ ಅಲಿಯಾಸ್ ಕೋತಿರಾಜ್", "ಮಾನ", " ಧ್ವನಿ" "ಬೇಲಿ ಹೂ" ಹಾಗೂ ಪ್ರಸ್ತುತ ತನಿಷಾ ಕುಪ್ಪಂಡ ಹಾಗೂ ಮಾಲಾಶ್ರೀ ಅವರು ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ "ಪೆನ್ ಡ್ರೈವ್" ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಸೆಬಾಸ್ಟಿಯನ್ ಡೇವಿಡ್‌ ಅವರ ನಿರ್ದೇಶನದ ಎಲ್ಲಾ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ  ಗುರುತಿಸಿಕೊಂಡಿರುವುದು ವಿಶೇಷ.

Add Zee News as a Preferred Source

ಇದನ್ನೂ ಓದಿ: ಮಾರ್ಚ್ 29ರಂದು ಮೀನ ರಾಶಿಯಲ್ಲಿ ಶನಿಯ ಸಂಚಾರ: ಈ ಮೂರು ರಾಶಿಗಳಿಗೆ ಅದೃಷ್ಟವೋ ಅದೃಷ್ಟ!!

ಪ್ರಸ್ತುತ 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂಡಿಯಾ ಸಿನಿಮಾ ಹಾಗೂ ಕನ್ನಡ ಸಿನಿಮಾ ಎರಡು ವಿಭಾಗಗಳಲ್ಲಿ ವೆಂಕಟೇಶ್ ಎಸ್ ನಿರ್ಮಿಸಿ, ಸೆಬಾಸ್ಟಿಯನ್ ಡೇವಿಡ್ ಅವರು ನಿರ್ದೇಶಿಸಿರುವ ಹಾಗೂ ಸಂಪತ್ ಮೈತ್ರೇಯ, ಶ್ವೇತ ಶ್ರೀವಾಸ್ತವ್, ಲಯನ್ ವೆಂಕಟೇಶ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಬೇಲಿ ಹೂ"  ಆಯ್ಕೆಯಾಗಿತ್ತು‌. ಅದರಲ್ಲೂ ಇಂಡಿಯಾ ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗಿದ್ದ ಏಕೈಕ ಕನ್ನಡ ಸಿನಿಮಾ "ಬೇಲಿ ಹೂ".

ನೈಜ ಫಟನೆ ಆಧಾರಿತ ಚಿತ್ರ "ಬೇಲಿ ಹೂ". ಆಶಾ ಎಂಬ ಗ್ರಾಮೀಣ ಭಾಗದ ಹೆಣ್ಣುಮಗಳು ಮದ್ಯ ವ್ಯಸನಿ ಗಂಡನಿಂದ ನೊಂದು ಎರಡು ಮಕ್ಕಳ ಜೀವನಕ್ಕಾಗಿ ಹೆಣ ಹೂಳುವ ಕೆಲಸದಿಂದ ಆರಂಭಿಸಿ, ಅಂಬ್ಯುಲೆನ್ಸ್ ಚಾಲಕಿಯಾಗುತ್ತಾಳೆ. ಇಂತಹ ಆದರ್ಶ ಮಹಿಳೆ ಕುರಿತಾದ ಈ ಚಿತ್ರದಲ್ಲಿ ನಟಿಸುವ ಎಲ್ಲಾ ಕಲಾವಿದರ ಅಭಿನಯ ತುಂಬಾ ಅಮೋಘವಾಗಿ ಮೂಡಿಬಂದಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಇದನ್ನು ಶಿಂಗ್ ಸೌಂಡ್ ನಲ್ಲಿ ಚಿತ್ರಿಸಲಾಗಿದ್ದು, ಡಬ್ಬಿಂಗ್ ಸಹ  ಮಾಡಿಲ್ಲ. .

ಇಂತಹ ಅಪರೂಪದ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂಡಿಯಾ ಸಿನಿಮಾ ವಿಭಾಗದಲ್ಲಿ‌ "ತೀರ್ಪುಗಾರರ ವಿಶೇಷ ಉಲ್ಲೇಖ" ದೊರಕಿದೆ. ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯಾ ಸಿ‌ನಿಮಾ ವಿಭಾಗದಲ್ಲಿ ಆಯ್ಕೆಯಾಗಿದ್ದ "ಬೇಲಿ ಹೂ" ಸಿನಿಮಾಕ್ಕೆ "ತೀರ್ಪುಗಾರರ ವಿಶೇಷ ಉಲ್ಲೇಖ" ದೊರಕಿರುವುದಕ್ಕೆ ಚಿತ್ರತಂಡದಲ್ಲಿ ಸಂತಸ ಮನೆ ಮಾಡಿದೆ.

ಇದನ್ನೂ ಓದಿ: ಒಂದು ಟೊಮಾಟೊದಿಂದ ಕಡು ಕಪ್ಪಾಗುತ್ತೆ ಬಿಳಿ ಕೂದಲು, ತುರಿಕೆ, ತಲೆಹೊಟ್ಟಿನ ಸಮಸ್ಯೆಯಿಂದಲೂ ಸಿಗುತ್ತೆ ಪರಿಹಾರ

 ಬೆಂಗಳೂರು ಅಂತರರಾಷ್ಟ್ರೀಯ  ಚಲನಚಿತ್ರೋತ್ಸವದಲ್ಲಿ ನಮ್ಮ ಚಿತ್ರಕ್ಕೆ ಸಿಕ್ಕ ಪ್ರಶಂಸೆಗೆ ಮನ ತುಂಬಿ ಬಂದಿದೆ. ನಮ್ಮ ನಿರ್ಮಾಪಕರಾದ ಎಸ್ ವೆಂಕಟೇಶ್ ಅವರು ಶೀಘ್ರದಲ್ಲೇ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ ಎನ್ನುತ್ತಾರೆ ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

About the Author

Trending News