)
Big boss 12 Druvanth reveal rakshitha true cunning face :ಬಿಗ್ಬಾಸ್ ಮನೆಯಲ್ಲಿ ವಾರದಿಂದ ವಾರಕ್ಕೆ ಬೇರೆ ರೀತಿಯಲ್ಲಿ ಮನರಂಜನೆ ಮಾಡ್ತಿದ್ದೆ...ಈ ವಾರ ಮನೆಯಲ್ಲಿ ಅಸಲಿ ಆಟವೆಲ್ಲಾವು ಸೀಕ್ರೆಟ್ ರೂಮಿನಲ್ಲಿರುವ ಧ್ರುವಂತ್ ಹಾಗೂ ರಕ್ಷಿತಾ ಕೈಯಲಿದೆ..ಯಾವ ಗ್ರೂಪಿನಲ್ಲಿ ಯಾರು ಆಟ ಆಡ್ಬೇಕು ಅನ್ನೋದನ್ನ ಧ್ರುವಂತ್ ಹಾಗೂ ರಕ್ಷಿತಾ ತೀರ್ಮಾನಿಸಬೇಕು..ಅದರಂತೆ ತಂಡವನ್ನ ವಿಭಜನೆ ಮಾಡುವುದು ಇವರಿಬ್ಬರ ಕೈಯಲ್ಲಿದೆ..ಧ್ರುವಂತ್ ಅವರು ಎರಡು ಗುಂಪುಗಳನ್ನು ಫೇರ್ ಆಗಿ ಸ್ಟ್ರಾಂಗ್ ಹಾಗೂವೀಕ್ ಇರುವವರನ್ನ ಮಿಕ್ಸ್ ಮಾಡಿ ಗುಂಪು ರಚನೆ ಮಾಡ್ತಾರೆ.. ಆದ್ರೆ ಈ ರಕ್ಷಿತಾ ಅದಕ್ಕೆ ತದ್ವಿರುದ್ಧ ಅನ್ಫೇರ್ ಆಗಿ ಗುಂಪು ರಚನೆ ಮಾಡಿದ್ದಾರೆ..ಈ ವಿಚಾರಕ್ಕೆ ಸೀಕ್ರೆಟ್ ರೂಮ್ನಲ್ಲಿ ರಣರಂಗವೇ ಆಗಿತ್ತು..
ಧ್ರುವಂತ್ ಸಿಟ್ಟಿನಿಂದ "ನಿನ್ನ ದುರಂಕಾರ ಹಾಗೂ ಮಾತನಾಡುವ ಶೈಲಿಯೇ ಬೇರೆ ಇದೆ.. ನೀನೂ ತುಂಬಾ "ಕನ್ನಿಂಗ್" ಇದ್ದೀಯಾ ಇಷ್ಟು ದಿನ ಮನೆಯಲ್ಲಿ ನಿನ್ನ ಈ ಕನ್ನಿಂಗ್ ಬುದ್ಧಿ ಗುತ್ತಾಗ್ತಿರಲಿಲ್ಲ ತಪ್ಪಿಸಿಕೊಳ್ತಾ ಇದ್ದಿ ಆದ್ರೆ ಇಲ್ಲಿ ಬಂದ ಮೇಲೆ ಈ ಬುದ್ಧಿ ಗೊತ್ತಾಗ್ತಿದೆ" ನಾನು ಯಾವುದೇ ಕಾರಣ ಟೀಮ್ ರಚನೆ ಮಾಡುವಾಗ ನಾನು ಅನ್ಫೇರ್ ಆಗಿ ಮಾಡಲ್ಲ..ಟೀಮ್ನಲ್ಲಿರುವವರ ಅವರ ಆಡಿ ವಿನ್ ಆಗ್ತಾರೆ.. ಅದನ್ನ ಬಿಟ್ಟು ನಾನು ನಿನ್ನ ತರ ಅನ್ಫೇರ್ ಆಗಿ ಆಡಲ್ಲ ಅಂತಾ ರಕ್ಷಿತಾಗೆ ಮುಖಕ್ಕೆ ಹೊಡೆದಾಗೆ ಧ್ರುವಂತ್ ಹೇಳಿದ್ದಾರೆ..
ಇದನ್ನೂ ಓದಿ: ಎರಡನೇ ವಾರದಲ್ಲೂ "ದಿ ಡೆವಿಲ್" ಚಿತ್ರದ ಯಶಸ್ಸಿನ ಓಟ
ಇದಕ್ಕೆ ಪ್ರತಿಯಾಗಿ ರಕ್ಷಿತಾ ನೀವು ಯಾಕೆ ಫೇರ್ ಜಸ್ಟೀಸ್ ಮಾಡ್ತಾ ಇದ್ದಿರಾ..ನೀವು ಅಷ್ಟೋಂದು ಒಳ್ಳೆಯವರಾಗಿದ್ದರೆ.ಬಿಗ್ಬಾಸ್ ಮನೆಗೆ ಯಾಕೆ ಬಂದಿದ್ದೀರಾ ಅಂತಾ ಹೇಳಿ ರಕ್ಷಿತಾ ತನ್ನ ಬುದ್ಧಿಯನ್ನ ತೋರಿದ್ದಾರೆ..ಅದಕ್ಕೆ ಪ್ರತಿಯಾಗಿ ಧ್ರುವಂತ್ ನಾನು ಇನ್ಜಸ್ಟೀಸ್ ಮಾಡಲ್ಲ.. ಏನೆ ಇದ್ರೂ ನಮ್ಮ ಎನಿಮಿ ಇದ್ರೂ ಕೂಡ ಇಕ್ವಾಲ್ ಚಾನ್ಸ್ ಕೊಟ್ಟು ಗೆಲ್ಲಿಸ್ತೀನಿ ಅಂತಾ ಧ್ರುವಂತ್ ರಕ್ಷಿತಾಳಿಗೆ ಮುಖಕ್ಕೆ ಹೊಡೆದಾಗೆ ಹೇಳಿದ್ದಾರೆ.
ಏನೇ ಹೇಳಿ ಈ ವಿಭಿನ್ನದ ಸೀಕ್ರೆಟ್ರೂಮ್ನಿಂದಾ ಇಷ್ಟು ದಿನ ಒಳ್ಳೆಯವಳಾಗಿ ನಟಿಸ್ತಿದ್ದ ರಕ್ಷಿತಾಳ ಮುಖವಾಡ ಕಳಚಿ ಬಿದ್ದಂತಾಗಿದೆ..ಮತ್ತೊಂದ್ಕಡೆ ಧ್ರುವಂತ್ ಡಿಫರೆಂಟ್ ಅನಿಸುತ್ತಿದ್ದರು ತುಂಬಾ ಒಳ್ಳೆಯವರಾಗಿ ಕಾಣಿಸ್ತಿದ್ದಾರೆ.. ಧ್ರುವಂತ್ ಅವರು ಯಾವ ತಂಡಕ್ಕೂ ಅನ್ಯಾಯ ಆಗದಂತೆ ಟೀಮ್ ಚಾಯ್ಸ್ ಮಾಡ್ತಿರೋದು ವೀಕ್ಷಕರ ಗಮಸೆಳೆದಿದೆ..ನಿನ್ನೆಯ ಎಪಿಸೋಡು ನೋಡಿದ ವೀಕ್ಷಕರು ಎಲ್ಲೋ ಒಂದ್ಕಡೆ ರಕ್ಷಿತಾ ಫೇಕ್ ಆಗಿದ್ದಾಳೆ, ಓವರ್ ಡ್ರಾಮ್ಯಾಟಿಕ್ ಆಗಿದ್ದಾಳೆ ಧ್ರುವಂತ್ ಹೇಳ್ತಿರೋದು ಸರಿಯೇ ಇದೆ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡ್ತಿದ್ದಾರೆ.
ಅಷ್ಟೇ ಅಲ್ಲದೇ ಈ ವಾರದ ಕಿಚ್ಚನ ಚಪ್ಪಾಳೆ ಧ್ರುವಂತ್ ಸಿಗಬಹುದು ಅನ್ನೋ ಚರ್ಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.