ekta kapoor alt balaji ott app ban : ಬಾಲಾಜಿ ಟೆಲಿಫಿಲ್ಮ್ಸ್ನ ಷೇರು ಬೆಲೆ ತೀವ್ರವಾಗಿ ಕುಸಿದಿದೆ. ಆಲ್ಟ್ ಬಾಲಾಜಿ ಬ್ಯಾನ್ನಿಂದ ಆದ ನಷ್ಟವೆಷ್ಟು ಇಲ್ಲಿದೆ ಮಾಹಿತಿ.

Alt Balaji ban: ಕೇಂದ್ರ ಸರ್ಕಾರ ಅಶ್ಲೀಲ ವಿಷಯದ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು ಭಾರತದಲ್ಲಿ ಕೆಲವು ಆಪ್ಗಳನ್ನು ನಿಷೇಧಿಸಿದೆ. ಇವುಗಳಲ್ಲಿ ಏಕ್ತಾ ಕಪೂರ್ ಅವರ ಆಲ್ಟ್ ಬಾಲಾಜಿ ಆಪ್ ಸಹ ನಿಷೇಧಿಸಲ್ಪಟ್ಟಿದೆ. ಇದರಿಂದ ಬಾಲಾಜಿ ಟೆಲಿಫಿಲ್ಮ್ಸ್ನ ಷೇರು ಬೆಲೆ ತೀವ್ರವಾಗಿ ಕುಸಿದಿದೆ. ಆಲ್ಟ್ ಬಾಲಾಜಿಯ ಆದಾಯ, ಲಾಭ ನಷ್ಟ, ಸ್ಥಾಪನೆ ಮತ್ತು ಮಾಲೀಕತ್ವದ ಬಗ್ಗೆ ಮಾಹಿತಿ ಇಲ್ಲಿದೆ.
ಅಶ್ಲೀಲತೆಯನ್ನು ಹರಡಿದ ಆರೋಪ ಹೊತ್ತಿರುವ OTT ಅಪ್ಲಿಕೇಶನ್ಗಳ ಮೇಲೆ ಸರ್ಕಾರದ ಚಾಟಿ ಬೀಸಲಾಗಿದೆ. ಉಲ್ಲು ಟಿವಿ, ಡೆಸಿಫ್ಲಿಕ್ಸ್ನಿಂದ ALTT (ಆಲ್ಟ್ ಬಾಲಾಜಿ) ವರೆಗೆ ಸರ್ಕಾರವು ಕೆಲವು ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ.
ಈ ಎಲ್ಲಾ ಅಪ್ಲಿಕೇಶನ್ಗಳಲ್ಲಿ ALTT ಅಪ್ಲಿಕೇಶನ್ ಅತ್ಯಧಿಕ ಮಾರುಕಟ್ಟೆ ಮೌಲ್ಯ ಮತ್ತು ಹೂಡಿಕೆಯನ್ನು ಹೊಂದಿತ್ತು. ಕಂಪನಿಯು ಆಲ್ಟ್ ಬಾಲಾಜಿ ನಿಚೇಧದಿಂದ ಸುಮಾರು 900 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ.
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ALTT ಕಂಪನಿಯು 2023-24 ರ ವಾರ್ಷಿಕ ವರದಿಯಲ್ಲಿ ಬಾಲಾಜಿ ಟೆಲಿಫಿಲ್ಮ್ಸ್ ನಿಂದ 795 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಈ ಅಂಗಸಂಸ್ಥೆಯು OTT ಪ್ಲಾಟ್ಫಾರ್ಮ್ ALTT ಅನ್ನು ಹೊಂದಿದೆ. ಈ ಅಂಗಸಂಸ್ಥೆಯನ್ನು ಮೊದಲು ALT ಬಾಲಾಜಿ ಎಂದು ಕರೆಯಲಾಗುತ್ತಿತ್ತು. ಬಾಲಾಜಿ ಟೆಲಿಫಿಲ್ಮ್ಸ್ ವ್ಯವಹಾರವನ್ನು ಗ್ರಾಹಕ ವಿಭಾಗದಲ್ಲಿ ವಿಸ್ತರಿಸಲು ಈ ವೇದಿಕೆಯನ್ನು 2017 ರಲ್ಲಿ ಪ್ರಾರಂಭಿಸಲಾಯಿತು.
ಬಾಲಾಜಿ ಟೆಲಿಫಿಲ್ಮ್ಸ್ ಹೂಡಿಕೆ ಜೊತೆಗೆ ಈ ಅಂಗಸಸ್ಥೆಗೆ 103 ಕೋಟಿ ರೂ.ಗಳ ಸಾಲವನ್ನು ಸಹ ನೀಡಿತು. ಅಂದರೆ ಏಕ್ತಾ ಕಪೂರ್ 898 ಕೋಟಿ ರೂಪಾಯಿ ಇದರ ಮೇಲೆ ಖರ್ಚು ಮಾಡಿದ್ದರು. ಅದೇ ವಾರ್ಷಿಕ ವರದಿಯಲ್ಲಿ, Alt ಡಿಜಿಟಲ್ ಮೀಡಿಯಾ ಎಂಟರ್ಟೈನ್ಮೆಂಟ್ನ ಮೌಲ್ಯ 1209 ಕೋಟಿ ರೂ.ಗಳನ್ನು ತಲುಪಿದೆ ಎಂದು ಕಂಪನಿಯು ತಿಳಿಸಿತ್ತು.
ಬಾಲಾಜಿ ಟೆಲಿಫಿಲ್ಮ್ಸ್ನಲ್ಲಿ ಏಕ್ತಾ ಕಪೂರ್ ಅವರ ಪಾಲು 18.16% ಮತ್ತು ಅವರ ತಾಯಿ ಶೋಭಾ ಕಪೂರ್ ಅವರ ಪಾಲು 10.84% ಎಂದು ಅನೇಕ ಮಾಧ್ಯಮ ವರದಿಗಳು ಹೇಳುತ್ತಿವೆ. ಏಕ್ತಾ ಕಪೂರ್ ಹೇಳಿಕೆ ನೀಡಿ, ಆಲ್ಟ್ ಬಾಲಾಜಿ ಜೊತೆ ತನಗೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2021 ರಲ್ಲಿಯೇ ಈ ಅಪ್ಲಿಕೇಶನ್ನಿಂದ ದೂರವಿರುವುದಾಗಿ ಅವರು ತಮ್ಮ ಹೇಳಿಕೆ ನೀಡಿದ್ದಾರೆ.
ಸರ್ಕಾರವು ಅಶ್ಲೀಲ ವೀಡಿಯೊಗಳನ್ನು ಪ್ಲೇ ಮಾಡುತ್ತಿದ್ದ 25 OTT ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ. ಕುಟುಂಬ ಸಂಬಂಧಗಳನ್ನು ಸಹ ಕೊಳಕು ರೀತಿಯಲ್ಲಿ ತೋರಿಸಲಾಗುತ್ತಿದ್ದ ಕೆಲವು ವೀಡಿಯೊಗಳಿದ್ದವು. ಸರ್ಕಾರವು ಫೆಬ್ರವರಿ 2025 ರಲ್ಲಿ ಎಚ್ಚರಿಕೆ ನೀಡಿತ್ತು.
"OTT ಪ್ಲಾಟ್ಫಾರ್ಮ್ಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಸ್ವಾತಂತ್ರ್ಯ ಎಂದರೆ ನೀವು ಏನು ಬೇಕಾದರೂ ತೋರಿಸಬಹುದು ಎಂದಲ್ಲ. ಅಶ್ಲೀಲತೆಯನ್ನು ಹರಡಲು ಅನುಮತಿ ನೀಡಲಾಗುವುದಿಲ್ಲ" ಎಂದು ಸರ್ಕಾರ ಹೇಳುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.