ಮಿಲ್ಕಿ ಬ್ಯೂಟಿಯ ಮದುವೆ ನೋಡಲು ಕಾತರರಾಗಿದ್ದ ಫ್ಯಾನ್ಸ್ ಗೆ ಬಿಗ್‌ ಶಾಕ್‌..!

Tamanna Bhatia: 2022 ರಿಂದ ಡೇಟಿಂಗ್‌ ಮಾಡುತ್ತಿದ್ದ ಈ ಜೋಡಿ ಎಲ್ಲ ಕಾರ್ಯಕ್ರಮಗಳಲ್ಲೂ ಒಟ್ಟಿಗೆ ಕೈ ಹಿಡಿದು ಓಡಾಡುತ್ತಿದ್ದರು. ಈ ಕುರಿತಂತೆ ಫೋಟೋ ಮತ್ತು ವೀಡಿಯೋಗಳು ಆಗಾಗ ವೈರಲ್‌ ಆಗುತ್ತಿದ್ದವು.

Written by - Yashaswini V | Last Updated : Mar 5, 2025, 03:45 PM IST
  • ವೈಯಕ್ತಿಕ ಜೀವನದಲ್ಲಿ ಮುಖ್ಯ ಹೆಜ್ಜೆ ಇಡುವಲ್ಲಿ ಮುಂದಾಗಿದ್ದ ಮಿಲ್ಕಿ ಬ್ಯೂಟಿ
  • ತಮನ್ನಾ ಭಾಟಿಯಾ ಅಭಿಮಾನಿಗಳಿಗೆ ಬಿಗ್‌ಶಾಕ್‌
ಮಿಲ್ಕಿ ಬ್ಯೂಟಿಯ ಮದುವೆ ನೋಡಲು ಕಾತರರಾಗಿದ್ದ ಫ್ಯಾನ್ಸ್ ಗೆ ಬಿಗ್‌ ಶಾಕ್‌..!

Tamanna Bhatia: ಸೌತ್ ಸಿನಿಮಾ ಇಂಡಸ್ಟ್ರಿ ಪ್ರಸಿದ್ಧ ನಟಿಯರಲ್ಲಿ ಒಬ್ಬರಾದ ತಮನ್ನಾ ಭಾಟಿಯಾ ಅಭಿಮಾನಿಗಳಿಗೆ ಬಿಗ್‌ಶಾಕ್‌ ಕೊಟ್ಟಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ಮುಖ್ಯ ಹೆಜ್ಜೆ ಇಡುವಲ್ಲಿ ಮುಂದಾಗಿದ್ದ ಮಿಲ್ಕಿ ಬ್ಯೂಟಿ ಸಡನ್ ಆಗಿ ರಿವರ್ಸ್‌ಗೇರ್‌ ಹಾಕಿದ್ದಾರೆ.   

Add Zee News as a Preferred Source

ಇತ್ತೀಚಿಗೆ ತಮನ್ನಾ ಮತ್ತು ಬಾಲಿವುಡ್ ನಟ ವಿಜಯ್ ವರ್ಮಾ ಇಬ್ಬರು ತಮ್ಮ ಲವ್‌ಲೈಫ್‌ ಬಗ್ಗೆ ಒಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್‌ ಹಾಕದೇ ಇದ್ದಿದ್ದರಿಂದ, ಈ ಜೋಡಿ ಏನಾದರು ದೂರಾಗಲಿದೆಯೇ ಎಂಬ ಪ್ರಶ್ನೆಗಳು ಮೂಡಿದ್ದವು. ಈಗ ಅದು ಅಕ್ಷರಶಃ ನಿಜವಾಗಿದೆ.

2022 ರಿಂದ ಡೇಟಿಂಗ್‌ ಮಾಡುತ್ತಿದ್ದ ಈ ಜೋಡಿ ಎಲ್ಲ ಕಾರ್ಯಕ್ರಮಗಳಲ್ಲೂ ಒಟ್ಟಿಗೆ ಕೈ ಹಿಡಿದು ಓಡಾಡುತ್ತಿದ್ದರು. ಈ ಕುರಿತಂತೆ ಫೋಟೋ ಮತ್ತು ವೀಡಿಯೋಗಳು ಆಗಾಗ ವೈರಲ್‌ ಆಗುತ್ತಿದ್ದವು. ಇವರ ಈ ಆತ್ಮಿಯತೆಯನ್ನು ನೋಡಿ ಸದ್ಯದಲ್ಲೆ ಈ ಜೋಡಿ ಮದುವೆಯ ಬಂಧನದಲ್ಲಿ ಬಂಧಿಯಾಗಲಿದ್ದಾರೆ ಎಂದು ಎಲ್ಲರು ಮಾತನಾಡಿಕೊಳ್ಳುತ್ತಿದ್ದರು. ಆದರೀಗ  ಈ ಊಹಾಪೋಹಗಳೆಲ್ಲ ಹುಸಿಯಾಗಿದೆ. 

ಇದನ್ನೂ ಓದಿ- ದೇಹದಲ್ಲಿ 14 ಕೆಜಿ ಚಿನ್ನ ಬಚ್ಚಿಟ್ಟುಕೊಂಡಿದ್ದ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಅರೆಸ್ಟ್ ಆಗಿರುವ ನಟಿ ರನ್ಯಾ ರಾವ್ ಯಾರು ಗೊತ್ತಾ...? 

ಸಿನಿಮಾ ಲೋಕದಲ್ಲಿ ಸೆಲೆಬ್ರಿಟಿಗಳು  ಪ್ರೀತಿ ಮಾಡಿ ನಂತರ ಯಾವುದೋ ಕಾರಣಕ್ಕೆ ಸಂಬಂಧ ಮುರಿದುಕೊಳ್ಳುವುದು  ಸಹಜ. ಇದೇ ರೀತಿ  ತಮನ್ನಾ ಮತ್ತು ವಿಜಯ್ ವರ್ಮಾ ಕೂಡ  ಪರಸ್ಪರ ದೂರಾಗಿದ್ದಾರೆ ಎಂದು ಹೇಳಲಾಗುತ್ತಿದೆ, ಆದರೂ ಇವರ ಈ ಸಡನ್‌ ಬ್ರೇಕಪ್‌ಗೆ ಕಾರಣ ಏನೆಂದು ತಿಳಿದುಬಂದಿಲ್ಲ. 

ಕೆಲವು ದಿನಗಳ ಹಿಂದೆಯೇ ತಮನ್ನಾ ಮತ್ತು ವಿಜಯ್ ವರ್ಮಾ ಬೇರಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಇಷ್ಟೆಲ್ಲಾ ಆದರೂ ಈ ಬಗ್ಗೆ ತಮನ್ನಾ ಅಥವಾ ವಿಜಯ್  ಯಾರೊಬ್ಬರೂ  ಯಾವುದೇ ಬೇರೆಯಾಗಿದ್ದರ ಬಗ್ಗೆ ಅಧಿಕೃತ ಹೇಳಿಕೆ ಕೊಟ್ಟಿಲ್ಲ.

ಇದನ್ನೂ ಓದಿ- ದಿಢೀರ್ ಶಾಕ್‌ ಕೊಟ್ಟ ಪವರ್‌ಸ್ಟಾರ್‌...! ಅಭಿಮಾನಿಗಳಿಗೆ ಬೇಸರದ ಸುದ್ದಿ..

ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಇಬ್ಬರು  ‘ಲಸ್ಟ್ ಸ್ಟೋರೀಸ್ 2’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಅಲ್ಲಿಂದ ಅವರಿಬ್ಬರ ನಡುವಿನ ಪರಿಚಯ ಪ್ರೀತಿಯಾಗಿ ಬದಲಾಯಿತು, ನಂತರ ಈಗ ಬ್ರೇಕಪ್‌ ಆಗುವ ಮಟ್ಟಕ್ಕೆ ತಿರುವುಪಡೆದಿದೆ. ಸದ್ಯಕ್ಕೆ ತಮನ್ನಾ "ಒಡೆಲಾ 2" ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರವು ಹಳೆಯ ಸೂಪರ್ ಹಿಟ್ ಚಿತ್ರ ‘ಒಡೆಲಾ ರೈಲ್ವೆ ಸ್ಟೇಷನ್’ ನ ಮುಂದುವರಿದ ಭಾಗವಾಗಿದೆ. ಸಂಪತ್ ನಂದಿ ಟೀಮ್ ವರ್ಕ್ಸ್ ಮತ್ತು ಮಧು ಕ್ರಿಯೇಷನ್ಸ್ ಜಂಟಿಯಾಗಿ  ಈ ಸಿನಿಮಾದ ಮಾಡಲು ಮುಂದಾಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News